12:29 PM Tuesday23 - December 2025
ಬ್ರೇಕಿಂಗ್ ನ್ಯೂಸ್
ರಾಮೇಶ್ವರಂ ಕೆಫೆ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ವತಿಯಿಂದ ತಡೆಯಾಜ್ಞೆ;… ಅಟಲ್ ಜೀ ವೃಕ್ಷ ಯೋಜನೆಯಡಿ 2240 ಸಸಿ ಸಂರಕ್ಷಣೆ: ವರ್ಷಪೂರ್ತಿ ಅಟಲ್ ಜನ್ಮ… ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ

ಇತ್ತೀಚಿನ ಸುದ್ದಿ

ಮಹಿಳೆಯರ, ಯುವತಿಯರ ಬಗ್ಗೆ ಅಸಭ್ಯ ಪದ, ಅಶ್ಲೀಲ ಚಿತ್ರ: ಕೊನೆಗೂ ಸೆರೆ ಸಿಕ್ಕ ಸೈಕೋಪಾತ್; ಗ್ರಾಮದ ಮುಖಂಡನಿಂದಲೇ ಕೃತ್ಯ!

10/12/2024, 15:54

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಮಹಿಳೆಯರು,ಯುವತಿಯರ ಬಗ್ಗೆ ಅಸಭ್ಯ ಪದ ಹಾಗೂ ಅಶ್ಲೀಲ ಲೈಂಗಿಕ ಚಿತ್ರಗಳನ್ನ ಬಿಡಿಸಿ ಕೆಲವರ ಹೆಸರುಗಳನ್ನ ನಮೂದಿಸಿ ಮನೆಗಳ ಮುಂದೆ ಇಟ್ಟು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಸೈಕೋಪಾತ್ ನನ್ನು ಗ್ರಾಮಸ್ಥರು ಹೊಂಚು ಹಾಕಿ ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಗ್ರಾಮದ ವರದರಾಜಸ್ವಾಮಿ ಬಡಾವಣೆಯಲ್ಲಿ ನಡೆದಿದೆ.
ಗ್ರಾಮದಲ್ಲಿ ಸಮಸ್ಯೆಗಳು ಶುರುವಾದಾಗ ನ್ಯಾಯಕ್ಕಾಗಿ ನಿಲ್ಲುತ್ತಿದ್ದ ಮುಖಂಡನಿಂದಲೇ ಕೃತ್ಯ ನಡೆದಿದೆ. ಹಲವಾರು ದಿನಗಳಿಂದ ಸೈಕೋಪಾತ್ ನ ಹಿಡಿಯಲು ಗ್ರಾಮಸ್ಥರು ಹೊಂಚು ಹಾಕಿದ್ದು ನಿನ್ನೆ ರಾತ್ರಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಸಾಕ್ಷಿ ಸಮೇತ ಈತನನ್ನ ಹಿಡಿದ ಗ್ರಾಮಸ್ಥರು ಹುಲ್ಲಹಳ್ಳಿ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ವರದರಾಜಸ್ವಾಮಿ ಬಡಾವಣೆ ನಿವಾಸಿ ಹಾಗೂ ಗ್ರಾಮದ ಮುಖಂಡ ಶಿವಣ್ಣ(54) ಸಿಕ್ಕಿ ಬಿದ್ದ ಸೈಕೋಪಾತ್. ಸುಮಾರು ಮೂರ್ನಾಲ್ಕು ವರ್ಷಗಳಿಂದ ವರದರಾಜಸ್ವಾಮಿ ಬಡಾವಣೆ ಮಹಿಳೆಯರ ಬಗ್ಗೆ ಅಸಭ್ಯವಾಗಿ ಚಿತ್ರಗಳನ್ನ ಬಿಳಿ ಹಾಳೆಯಲ್ಲಿ ಬರೆದು ಹೆಸರುಗಳ ಜೊತೆ ಉಲ್ಲೇಖಿಸಿ ಸುಮಾರು 50ಕ್ಕೂ ಹೆಚ್ಚು ಮನೆಗಳ ಮುಂದೆ ಇಟ್ಟಿದ್ದ ಎನ್ನಲಾಗಿದೆ.
ಇದರಿಂದಾಗಿ ಗ್ರಾಮದಲ್ಲಿ ಕೆಲ ಮಹಿಳೆಯರಿಗೆ ಹಾಗೂ ಅವರ ಕುಟುಂಬದಲ್ಲಿ ಸಾಕಷ್ಟು ಸಮಸ್ಯೆಗಳು ಉದ್ಭವಿಸಿದ್ದವು. ಈ ಘಟನೆಯಿಂದಾಗಿ ಕೆಲವು ಮದುವೆ ಸಂಬಂಧಗಳು ಸಹ ಮುರಿದು ಬಿದ್ದಿದ್ದವು. ಮನೆಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದ ಅಸಭ್ಯ ಚಿತ್ರಗಳುಳ್ಳ ಚೀಟಿಗಳು ಗ್ರಾಮವನ್ನೇ ಚಿಂತೆಗೆ ಈಡು ಮಾಡಿತ್ತು.
ಸೈಕೋಪಾತ್ ನನ್ನು ರೆಡ್ ಹ್ಯಾಂಡಾಗಿ ಹಿಡಿಯಲು ಗ್ರಾಮಸ್ಥರು ಹಲವಾರು ದಿನಗಳಿಂದ ಹೊಂಚು ಹಾಕುತ್ತಿದ್ದರು. ನಿನ್ನೆ ತಡರಾತ್ರಿ ಸೈಕಲ್ ನಲ್ಲಿ ಬಂದ ಶಿವಣ್ಣ ಮನೆ ಮುಂದೆ ಚೀಟಿಯನ್ನ ಇಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಿಸಿ ಬಿಸಿ ಕಜ್ಜಾಯಗಳನ್ನ ಕೊಟ್ಟ ಗ್ರಾಮಸ್ಥರು ಹುಲ್ಲಹಳ್ಳಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಶಿವಣ್ಣನ ವಿರುದ್ದ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಿಸಿರುವ ಹುಲ್ಲಹಳ್ಳಿ ಠಾಣೆ ಪೊಲೀಸರು ಕಂಬಿ ಎಣಿಸಲು ಕಳಿಸಿದ್ದಾರೆ.
ಇದರಿಂದಾಗಿ ಈಗ ಗ್ರಾಮದ ವರದರಾಜ ಸ್ವಾಮಿ ಬಡಾವಣೆಯ ನಿವಾಸಿಗಳು ಸೈಕೋ ಶಿವಣ್ಣನಿಗೆ ಇಡಿ ಶಾಪ ಹಾಕಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು