9:17 AM Tuesday9 - September 2025
ಬ್ರೇಕಿಂಗ್ ನ್ಯೂಸ್
ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆದರಿಕೆ: ಆರೋಪಿ ಬಂಧನ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ… Kodagu | ಚೋರರಿದ್ದಾರೆ ಎಚ್ಚರಿಕೆ: ಕುಶಾಲನಗರ; ಹೆಚ್ಚುತ್ತಿರುವ ಶ್ರೀಗಂಧ ಮರಗಳ ಕಳ್ಳತನ ಹೃದಯಘಾತ: ಕಾರಿನಲ್ಲೇ ಉಸಿರು ನಿಲ್ಲಿಸಿದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ Kodagu | ಸರಣಿ ಅಪಘಾತ: ರಸ್ತೆ ಮಧ್ಯೆ ಅಡ್ಡ ನಿಂತಿದ್ದ ಟ್ರ್ಯಾಕ್ಟರ್ ಗೆ… ವಿರಾಜಪೇಟೆ ಕೊಡಗು ಗೌಡ ಸಮಾಜಕ್ಕೆ ಸುಳ್ಯದ ಕುರುಂಜಿ ವೆಂಕರಮಣ ಗೌಡ ಕುಟುಂಬದಿಂದ 3.5…

ಇತ್ತೀಚಿನ ಸುದ್ದಿ

ಖ್ಯಾತ ಹಿಂದುಸ್ಥಾನಿ ಸಂಗೀತ ವಿದುಷಿ ವಿಜಯಾ ಕಿಶೋರ್ ಗೆ ಸ್ವರ ಶ್ರದ್ಧಾಂಜಲಿ

09/12/2024, 19:44

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಧಾರವಾಡದ ವೈಷ್ಣವಿ ಪಂಚಮುಖಿ ಅವರು ತಮ್ಮ ಸುಶ್ರಾವ್ಯ ಗಾಯನದಿಂದ ಸಂಗೀತಾ ಪ್ರಿಯರ ಮನ ಸೂರೆಗೊಂಡರು.
ಅವರು ಬಳ್ಳಾರಿ ನಗರದಲ್ಲಿ ಏರ್ಪಡಿಸಿದ ದಿ. ವಿಜಯಾ ಕಿಶೋರ್, ಖ್ಯಾತ ಹಿಂದುಸ್ಥಾನಿ ಸಂಗೀತ ವಿದೂಷಿ, ಅವರ ಮೂರನೇ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ ‘ಸ್ವರ ಶ್ರದ್ಧಾಂಜಲಿ’ ಕಾರ್ಯಕ್ರಮದಲ್ಲಿ ಭಾಗವಸಿದ್ದರು.

ಬಾಗೇಶ್ರೀ ರಾಗದಲ್ಲಿ ‘ಮೊರೇ ಮನಾ ಚೀಸನ್ನು ವಿಲಂಬಿತ ಏಕ್ ತಾಳದಲ್ಲಿ ಆರಂಭಿಸಿ ದೃತ್ ತೀತಾಳಡಲ್ಲಿ ಕೌನ್ ಕರತ್ ತೊರೆ ಮಿಲನ ಪಿಯಾರವಾ ಪ್ರಸ್ತುತ ಪಡಿಸಿದರು. ನಂತರ ಒಂದು ತರಾನಾ ಹಾಡಿ ಸ್ವರಗಳ ಮೇಲೆ ಹಾಗೂ ತಾನುಗಳ ಮೇಲೆ ತಮ್ಮ ಹಿಡಿತವನ್ನು ಪ್ರದರ್ಶಿಸಿದರು.
ಸುಗಮ ಸಂಗೀತದಲ್ಲಿ ಜನಪ್ರಿಯ ದಾಸರ ಪದಗಳು ಹಾಗೂ ಒಂದು ಅಭಂಗ್ ಪ್ರಸ್ತುತ ಪಡಿಸಿ ಶ್ರೂತ್ರುಗಳ ಮೆಚ್ಚಿಗೆ ಪಡೆದರು.
ಅವರಿಗೆ ತಬಲಾದಲ್ಲಿ ಅವರ ಪತಿ ಜಯತೀರ್ಥ ಪಂಚಮುಖಿ ಸಾಥ್ ನೀಡಿದರೆ ಹಾರ್ಮೋನಿಯಂ ಸಾಥ್ ದೊಡ್ಡಬಸವ, ತಾಳದಲ್ಲಿ ಅವರ ಮಗ ಸುಮನ್ಯು ನೀಡಿದರು.
ಇದಕ್ಕೂ ಮೊದಲು ವಿಜಯಾ ಕಿಶೋರ್ ಅವರ ಶಿಷ್ಯರು ಗಳಾದ ಕುಮಾರ ಶಶಾಂಕ್, ಕುಮಾರ ಆಭಯ ಹಾಗೂ ಕುಮಾರ ಶಮಂತ್ ರಾಗ ಕೇದಾರದಲ್ಲಿ ಛೋಟಾ ಖ್ಯಾಲ್ ಹಾಗೂ ದಾಸರ ಪದ ಮತ್ತು ವಚನ ಪ್ರಸ್ತುತಪಡಿಸಿದರು.
ಜಯಲಕ್ಷ್ಮಿ, ಸಾನ್ವಿ ಹಾಗೂ ಕುಮಾರ್ ಆಯುಷ್ ರಾಗ ಯಮನದಲ್ಲಿ ಛೋಟಾ ಖಾಲಿ ಹಾಗೂ ದಸ್ಕ್ರಾ ಪದ ಮತ್ತು ವಚನ ಗಾಯನ ಮಾಡಿದರು.
ಸನ್ನಿಧಿ ಶುದ್ಧ ಸಾರ್ನ್ಗ್ ರಾಗದಲ್ಲಿ ಒಂದು ಛೋಟಾ ಖ್ಯಾಲ್ ಹಾಗೂ ದಾಸರ ಪದ ಮತ್ತು ವಚನ ಹಾಡಿದರು.
ಹಿರಿಯ ಶಿಷ್ಯೆ ಸಂಧ್ಯಾ ಕೊಳಚಲಂ ಅವರು ಸುಗಮ ಸಂಗೀತದಲ್ಲಿ ಭಾವಗೀತೆ, ದಸರ ಪದ, ವಚನ ಪ್ರಸ್ತುತ ಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು