3:15 PM Friday30 - January 2026
ಬ್ರೇಕಿಂಗ್ ನ್ಯೂಸ್
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ…

ಇತ್ತೀಚಿನ ಸುದ್ದಿ

ಆಪೊಸ್ತಲಿಕ್ ಕಾರ್ಮೆಲ್ ಸಭೆಯ 10 ಸಹೋದರಿಯರ ಶಾಶ್ವತ ಪ್ರತಿಜ್ಞೆಯ ಧಾರ್ಮಿಕ ವಿಧಿ ಸಂಭ್ರಮ

08/12/2024, 23:48

ಮಂಗಳೂರು(reporterkarnataka.com):ಆಪೊಸ್ತಲಿಕ್ ಕಾರ್ಮೆಲ್ ಸಭೆಯ ಹತ್ತು ಕನ್ಯಾ ಸ್ತ್ರೀಯರ ಶಾಶ್ವತ ಪ್ರತಿಜ್ಞೆಯ ಧಾರ್ಮಿಕ ವಿಧಿಯು ಡಿಸೆಂಬರ್ 7 ರಂದು ನಗರದ ಮೇರಿಹಿಲ್ ಕಾನ್ವೆಂಟ್ ನಲ್ಲಿ ನೆರವೇರಿತು.
ಮಂಗಳೂರಿನ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಇತರ ಸಹ ಧರ್ಮ ಗುರುಗಳ ಜೊತೆಗೂಡಿ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದರು. ಹತ್ತು ಯುವ ಕನ್ಯಾ ಸ್ತ್ರೀಯರು ಆಪೊಸ್ತಲಿಕ್ ಕಾರ್ಮೆಲ್ ನ ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿ ಎ.ಸಿ. ಮತ್ತು ಇತರ ಧರ್ಮ ಭಗಿನಿಯರ ಸಮ್ಮುಖದಲ್ಲಿ, ಪರಿಶುದ್ಧತೆ, ಬಡತನ ಮತ್ತು ವಿಧೇಯತೆಯ ಪ್ರತಿಜ್ನೆಯ ಮೂಲಕ ತಮ್ಮನ್ನು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಯೇಸು ಸ್ವಾಮಿಗೆ ಸಮರ್ಪಿಸಿದರು.


ತದ ನಂತರ ಮೌಂಟ್ ಕಾರ್ಮೆಲ್ ಶಾಲಾ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮವು ಶಾಲೆಯ ವಿದ್ಯಾರ್ಥಿಗಳ ಸ್ವಾಗತ ನ್ರತ್ಯದೊಂದಿಗೆ ಪ್ರಾರಂಭವಾಯಿತು. ನವಶಿಷ್ಯರ ಶುಭಾಶಯ ಗೀತೆ ಎಲ್ಲರನ್ನು ಹರ್ಷಗೊಳಿಸಿತು. ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿಯವರು ಯುವ ಕನ್ಯಾ ಸ್ತ್ರೀಯರಿಗೆ ಹಾರ ಹಾಕಿ ಅಭಿನಂದಿಸಿದರು. ಅವರು ತಮ್ಮ ಭಾಷಣದಲ್ಲಿ, ದೇವರ ಬೇಷರತ್ತಾದ ಪ್ರೀತಿಗೆ ಸಮರ್ಪಿಸಿದ ಸಹೋದರಿಯರನ್ನು ಉದ್ದೇಶಿಸಿ ದೇವರ ಪ್ರೀತಿಯಲ್ಲಿ ಸದಾ ಬದ್ದರಾಗಿರಲು ಸಲಹೆ ನೀಡಿದರು ಮತ್ತು ಈ ಸಹೋದರಿಯರ ಪೋಷಕರು ಮತ್ತು ಕುಟುಂಬದ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂಭ್ರಮಾಚರಣೆಯಲ್ಲಿ ಆಪೊಸ್ತಲಿಕ್ ಕಾರ್ಮೆಲ್ ಸುಪೀರಿಯರ್ ಜನರಲ್ ಭಗಿನಿ ನಿರ್ಮಲಿನಿ ಎ.ಸಿ., ಇವರೊಂದಿಗೆ ಪ್ರಾಂತೀಯ ಪದಾಧಿಕಾರಿಗಳು,, ಭಾರತ ಮತ್ತು ಶ್ರೀಲಂಕಾದಿಂದ ಆಗಮಿಸಿದ ಕುಟುಂಬದ ಸದಸ್ಯರು, ಹಿತೈಷಿಗಳು, ಧರ್ಮ ಗುರುಗಳು, ಹಲವಾರು ಧರ್ಮ ಭಗಿನಿಯರು ಉತ್ಸಾಹದಿಂದ ಭಾಗವಹಿಸಿದರು ಮತ್ತು ಶಾಶ್ವತ ಪ್ರತಿಜ್ನೆ ಮಾಡಿದ ಭಗಿನಿಯರನ್ನು ಅಭಿನಂದಿಸಿದರು. ಕೊನೆಯಲ್ಲಿ ಸಹಭಾಗಿತ್ವದ ಭೋಜನವು ಎಲ್ಲರನ್ನು ಒಂದುಗೂಡಿಸಿತು.

ಇತ್ತೀಚಿನ ಸುದ್ದಿ

ಜಾಹೀರಾತು