ಇತ್ತೀಚಿನ ಸುದ್ದಿ
ಉರ್ವ ಚರ್ಚ್‌ನಲ್ಲಿ ಅಮಲೋದ್ಫವ ಮಾತೆಯ ಹಬ್ಬ: 8ರಂದು ಪೊಂಪೈ ಮಾತೆ ಪುಣ್ಯ ಕ್ಷೇತ್ರದ ವಾರ್ಷಿಕ ಹಬ್ಬ
07/12/2024, 22:52
ಮಂಗಳೂರು(reporterkarnataka.com): ನಗರದ ಉರ್ವ ಚರ್ಚ್‌ನಲ್ಲಿ ಶನಿವಾರ ಅಮಲೋದ್ಫವ ಮಾತೆಯ ಹಬ್ಬ ನಡೆಯಿತು. ಜಪಮಾಲೆಯ ಬಳಿಕ ಪೆರ್ಮನ್ನೂರು ಚರ್ಚಿನ ಸಹಾಯಕ ಧರ್ಮಗುರು ಫಾ. ಜಾನ್ಸನ್ ಪಿರೇರಾ ಅವರು ಕೃತಜ್ಞತಾ ಪೂಜೆ ಹಾಗೂ ನೊವೆನಾ ನಡೆಸಿಕೊಟ್ಟರು. ಈ ಸಂದರ್ಭ ಚರ್ಚಿನ ಪ್ರಧಾನ ಧರ್ಮಗುರು ಫಾ. ಬೆಂಜಮಿನ್ ಪಿಂಟೋ ಹಾಗೂ ಸಹಾಯಕ ಧರ್ಮಗುರು ಫಾ.ಲ್ಯಾನ್ಸನ್ ಪಿಂಟೊ ಉಪಸ್ಥಿತರಿದ್ದರು. ಡಿ.8ರಂದು ಪೊಂಪೈ ಮಾತೆ ಪುಣ್ಯ ಕ್ಷೇತ್ರದ ವಾರ್ಷಿಕ ಹಬ್ಬ ನಡೆಯಲಿದೆ.