5:26 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ರಾಮೇಶ್ವರ ದೇಗುಲದಲ್ಲಿ ರಾಜಕೀಯ ಮೇಲಾಟ?: ಧಾರ್ಮಿಕ ಸಂಪ್ರದಾಯಕ್ಕೆ ತಿಲಾಂಜಲಿ?

06/12/2024, 15:10

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com
ತೀರ್ಥಹಳ್ಳಿ ಸಮೀಪದ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ನಡೆಯುವ ಅತ್ಯಂತ ವೈಭವದ ಎಳ್ಳಮಾವಾಸ್ಯೆ ಜಾತ್ರೆಗೆ ದಿನಗಣನೆ ಆರಂಭವಾಗಿದ್ದರೂ ಸಹ ಕೆಲವು ವಿಚಾರದಲ್ಲಿ ರಾಜಕೀಯ ಮಾಡುವ ಮೂಲಕ ಧಾರ್ಮಿಕ ಸಂಪ್ರದಾಯಗಳನ್ನೇ ಮರೆಯುತ್ತಿದ್ದಾರ? ಎಂಬ ಅನುಮಾನ ಮೂಡುವಂತೆ ಮಾಡಿದೆ.
ಹೌದು ಎಳ್ಳಮಾವಾಸ್ಯೆ ಜಾತ್ರೆಗೆ 18 ದಿನಗಳು ಬಾಕಿ ಇದ್ದು ಇಲ್ಲಿಯವರೆಗೆ ಜಾತ್ರೆಗೆ ಸಂಬಂಧಪಟ್ಟಂತೆ ಯಾವುದೇ ಸಭೆ ನಡೆಸಿ ಜಾತ್ರೆ ಹೇಗಿರಬೇಕು? ಎಂಬುದರ ಬಗ್ಗೆ ರೂಪುರೇಷೆಗಳು, ಜಾತ್ರೆಯ ಬಜೆಟ್ ಎಷ್ಟು? ಜಾತ್ರೆ ವೈಭವ ಕಳೆಗಟ್ಟಿಸುವುದು ಹೇಗೆ? ಐದು ದಿನ ನಡೆಯುವ ಜಾತ್ರೆಗೆ ಪೂರ್ವ ಸಿದ್ಧತೆ ಹೇಗಿರಬೇಕು? ಎಂಬುದರ ಚರ್ಚೆ ಮಾಡಿಲ್ಲ.
ಅದರಲ್ಲೂ ಒಂದು ಬಾರಿ ತಹಸೀಲ್ದಾರ್ ನೇತೃತ್ವದಲ್ಲಿ ದಿನಾಂಕ ನಿಗದಿ ಮಾಡಿದ್ದರೂ ಸಹ ಅದಕ್ಕೆ ಕಾಂಗ್ರೆಸ್ – ಬಿಜೆಪಿ ಎಂಬ ರಾಜಕೀಯವನ್ನು ಬಳಸಿ ಸಂಬಂಧಪಟ್ಟವರಿಗೆ ಸರಿಯಾಗಿ ಅಹ್ವಾನ ನೀಡಿಲ್ಲ ಎಂದು ಸಭೆಯನ್ನು ದಿಡೀರ್ ರದ್ದುಗೊಳಿಸಲಾಯಿತು. ಆದರೆ ಇನ್ನು ರಾಮೇಶ್ವರ ದೇವಸ್ಥಾನದ ಜಾತ್ರೆಗೆ ದಿನಗಣನೆ ಆರಂಭವಾಗಿದ್ದು ವೈಭವದ ಜಾತ್ರೆಯ ಪೂರ್ವ ಸಿದ್ಧತೆಗಳು ನಡೆಯಬೇಕಾಗಿದ್ದು ಅದ್ಯಾವುದು ಇದುವರೆಗೂ ನಡೆದಿಲ್ಲ.
ರಾಜಕೀಯದಿಂದ ಧಾರ್ಮಿಕ ಸಂಪ್ರದಾಯವನ್ನೇ ಮರೆತ್ರಾ..!!?

ಜಾತ್ರೆಯ ಧಾರ್ಮಿಕ ಸಂಪ್ರದಾಯದಂತೆ ರಥೋತ್ಸವದ ರಥಕ್ಕೆ ಪತಾಕೆ ಕಟ್ಟಲು ಒಂದು ತಿಂಗಳು ಮೊದಲೇ ಆಹ್ವಾನ ನೀಡಬೇಕಿತ್ತು. ಮೇಳಿಗೆಯ ಗೋವಿಂದ ಶೆಟ್ಟರು ತೀರ್ಥಹಳ್ಳಿ ತಾಲೂಕಿನಲ್ಲಿ ನಡೆಯುವ ಎಲ್ಲಾ ರಥೋತ್ಸವದ ರಥವನ್ನು ಕಟ್ಟುತ್ತಾರೆ. ಹಾಗೆ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ರಥೋತ್ಸವಕ್ಕೂ ಪತಾಕೆ ಕಟ್ಟುತ್ತಾರೆ. ಆದರೆ ಇದುವರೆಗೂ ಅವರಿಗೆ ಆಹ್ವಾನವೇ ನೀಡಿಲ್ಲ. ಇನ್ನು ರಥೋತ್ಸವ ನಡೆಸುವ ತಂತ್ರಿಗಳಾದ ಲಕ್ಷ್ಮೀಶ್ ತಂತ್ರಿಗಳಿಗೆ ಆಹ್ವಾನ ಕೂಡ ನೀಡಬೇಕು. ಸುತ್ತ ಮುತ್ತಲಿನ ಮಠ ಮಂದಿರಕ್ಕೆ ಅಹ್ವಾನ ನೀಡಬೇಕು. ಸ್ಥಳೀಯ ದೇವಸ್ಥಾನಗಳಿಗೆ ಅಹ್ವಾನ ನೀಡುವುದು ಸಹ ಒಂದು ಪದ್ಧತಿ.

ಇದರ ಜೊತೆಗೆ ರಥದ ಕೊಟ್ಟಿಗೆಯಿಂದ ರಥವನ್ನು ಹೊರ ತೆಗೆದು ಅದರ ಚಕ್ರ, ಕುದುರೆ, ಇದೆಲ್ಲವೂ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಇದ್ಯಾವುದು ಸಹ ಇಲ್ಲಿಯವರೆಗೆ ನಡೆದಿಲ್ಲ. ನಡೆಯುವುದಕ್ಕೆ ಜಾತ್ರೆ ಸಮಿತಿಯೇ ರಚನೆ ಆಗಿಲ್ಲ.
ಜಾತ್ರಾ ಸಮಿತಿ ರಚನೆ ಆಗಲೂ ರಾಜಕೀಯ ಎಂಬ ಪರದೆ ಅಡ್ಡ ಬರುತ್ತಿದೆ. ಹಾಗಾದರೆ ಇವರಿಗೆಲ್ಲಾ ಅಹ್ವಾನ ನೀಡುವುದು ಯಾರು? ತಿಂಗಳಿಗೆ ಮೊದಲು ವೀಳ್ಯದೆಲೆ – ಅಡಿಕೆ ನೀಡಿ ಅಹ್ವಾನ ನೀಡಬೇಕು ಎಂಬ ಸಂಪ್ರದಾಯವನ್ನೇ ಈ ರಾಜಕೀಯದಿಂದಾಗಿ ಮರೆಯುತ್ತಿದ್ದಾರಾ? ಎಂಬೆಲ್ಲಾ ಪ್ರೆಶ್ನೆಗಳು ಮೂಡುತ್ತಿವೆ.


ಈಗಾಗಲೇ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಕ್ಕೆ ಹೊಸ ಸಮಿತಿ ರಚನೆ ಮಾಡಬೇಕೆಂಬ ಆದೇಶದ ಅನ್ವಯ ಇರುವುದರಿಂದ ಆ ಸಮಿತಿಗಾಗಿ ಕೂಡ ರಾಜಕೀಯ ನಡೆಯುತ್ತಿದ್ದು ಒಟ್ಟಿನಲ್ಲಿ ದೇವಸ್ಥಾನದ ವಿಷಯದಲ್ಲಿ ರಾಜಕೀಯ ಮಾಡದೇ ಮಲೆನಾಡಿನಲ್ಲಿ ಎಲ್ಲಾ ಕಡೆ ಹೋಲಿಕೆ ಮಾಡಿದರೆ ತೀರ್ಥಹಳ್ಳಿಯ ರಾಮೇಶ್ವರ ದೇವರ ಜಾತ್ರೆಯಿಂದಲೇ ಉಳಿದ ಎಲ್ಲಾ ಊರುಗಳ ಸುತ್ತ ಮುತ್ತಲಿನ ಜಾತ್ರೆಗಳು ಆರಂಭವಾಗುತ್ತದೆ.

ಒಟ್ಟಿನಲ್ಲಿ ತೀರ್ಥಹಳ್ಳಿ ಎಳ್ಳಮಾವಾಸ್ಯೆಯ ಐದು ದಿನಗಳ ಪರ್ಯಂತ ನಡೆಯುವ ಜಾತ್ರೆಯು ಸಡಗರ ಸಂಭ್ರಮಹಾಗೂ ಅತ್ಯಂತ ವೈಭವದಿಂದ ಜಾತ್ರೆ ನಡೆಸಲಿ, ಇದರಿಂದ ತೀರ್ಥಹಳ್ಳಿಗೆ ವಿಷೇಶ ಮೆರಗು ಬರಲಿ ಎಂಬುದೆ ಎಲ್ಲರ ಆಶಯ..

ಇತ್ತೀಚಿನ ಸುದ್ದಿ

ಜಾಹೀರಾತು