ಇತ್ತೀಚಿನ ಸುದ್ದಿ
ಭೀಕರ ರಸ್ತೆ ಅಪಘಾತ: ಹಾಸನದ ನೂತನ ಡಿಎಸ್ಪಿಯಾಗಿ ನಿಯುಕ್ತಿಗೊಂಡಿದ್ದ ಐಪಿಎಸ್ ಅಧಿಕಾರಿ ಸಾವು
01/12/2024, 23:38
ಹಾಸನ(reporterkarnataka.com): ಹಾಸನ ಸಮೀಪದ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಹಾಸನಕ್ಕೆ ನೂತನ ಡಿಎಸ್ಪಿಯಾಗಿ ನಿಯುಕ್ತಿಗೊಂಡಿದ್ದ ಐಪಿಎಸ್ ಅಧಿಕಾರಿ ಹರ್ಷಭರ್ಜನ್ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಡಿವೈಎಸ್ ಪಿಯಾಗಿ ನಿಯೋಜನೆಗೊಂಡ ಹರ್ಷಭರ್ಜನ್ ಡ್ಯೂಟಿ ರಿಪೋರ್ಟ್ ಮಾಡಲು ಬರುವಾಗ ಈ ದುರಂತ ನಡೆದಿದೆ. ಹರ್ಷಭರ್ಜನ್ ಅವರು ಸಂಚರಿಸುತ್ತಿದ್ದ ಜೀಪ್ ಇನ್ನೇನು ಕೆಲವೇ ನಿಮಿಷದಲ್ಲಿ ಹಾಸನ ತಲುಪ ಬೇಕೆನ್ನುವಸ್ಟರಲ್ಲಿ ಕಿತ್ತಾನೆ ಗಡಿ ಬಳಿ ಜೀಪ್ ನ ಟಯರ್ ಸ್ಫೋಟಗೊಂಡಿದೆ. ಸ್ಫೋಟಕದ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗೆ ಡಿಕ್ಕಿ ಹೊಡೆದ ಪರಿಣಾಮ ಮಧ್ಯಪ್ರದೇಶದ ಹರ್ಷ ಭರ್ಜನ್ ಅವರ ತಲೆಗೆ ಗಂಭೀರ ಗಾಯಗಳಾಗಿ ಚಿಕಿತ್ಸೆ ಫಲಕಾರಿಯಾಗದೆ ಹಾಸನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಚಾಲಕ ಮಂಜೇಗೌಡರಿಗೂ ಗಾಯಗಳಾಗಿವೆ.
ಶಾಂತಿ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.