11:38 PM Tuesday15 - July 2025
ಬ್ರೇಕಿಂಗ್ ನ್ಯೂಸ್
ಸಿಗಂಧೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ್ Chikkamagaluru | ಮೂಡಿಗೆರೆ: ವಿದ್ಯುತ್ ತಂತಿ ಸ್ವರ್ಶಿಸಿ ಅನ್ನದಾತ ದಾರುಣ ಸಾವು ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:… ಕನ್ನಡದ ಮೇರು ನಟಿ ಸರೋಜಾದೇವಿ ನಿಧನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬೊಮ್ಮಾಯಿ… Kodagu | ವಿರಾಜಪೇಟೆ: ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಬೆಂಕಿ ಆಕಸ್ಮಿಕ; ಅಪಾರ… Vijayapura | ಇಂಡಿಯಲ್ಲಿ 4559 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ ಶಕ್ತಿ ಯೋಜನೆ: 500 ಕೋಟಿ ಮಹಿಳೆಯರಿಗೆ ತಲುಪಿದ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಮುಖ್ಯಮಂತ್ರಿ Kodagu | ದಕ್ಷಿಣ ಕೊಡಗಿನಲ್ಲಿ ಹಸುಗಳ ಮೇಲೆ ವ್ಯಾಘ್ರ ದಾಳಿ: ಒಂದು ಬಲಿ;… ಶರಾವತಿ ನದಿಗೆ ಹೊಲೆ ಬಾಗಿಲಿನಲ್ಲಿ ನಿರ್ಮಿಸಿದ ನೂತನ ಸೇತುವೆ: ಕೇಂದ್ರ ಭೂ ಸಾರಿಗೆ… Kodagu | ಕಾಡಾನೆಗಳ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ: 18 ಸಲಗಗಳು ಮರಳಿ…

ಇತ್ತೀಚಿನ ಸುದ್ದಿ

ಭೀಕರ ಅಪಘಾತ: ಬಳ್ಳಾರಿಯ ಬಿಮ್ಸ್ ನ ಇಬ್ಬರು ವೈದ್ಯರು ಸೇರಿ 3 ಮಂದಿ ದಾರುಣ ಸಾವು

01/12/2024, 14:33

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಬಳ್ಳಾರಿ ತಾಲೂಕಿನ ಆಂದ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ವಿಡುಪನಕಲ್ಲು- ಚೇಳ್ಳಗುರ್ಕಿ ಮಧ್ಯೆ ಇಂದು ಬೆಳಗಿನ ಜಾವ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಬಳ್ಳಾರಿಯ ಮೂವರು ಸಾವನ್ನಪ್ಪಿ ಮತ್ತೊಬ್ಬರು ಗಾಯಗೊಂಡಿದ್ದಾರೆ.
ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯ ಕ್ಯಾನ್ಸರ್ ವೈದ್ಯ ಡಾ.ಗೋವಿಂದರಾಜುಲು, ನೇತ್ರ ತಜ್ಞ ಡಾ.ಯೋಗೀಶ್ ಮತ್ತು ವಕೀಲ ವೆಂಕಟ ನಾಯ್ಡು ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ಖಾಸಗೀ ವೈದ್ಯ, ಗಂಧರ್ವ ಗಿರಿ ಎಸ್ಟೇಟ್ ಮಾಲೀಕ ಡಾ.ಅಮರೇಗೌಡ ಪಾಟೀಲ್ ಅವರು ಗಾಯಗೊಂಡಿದ್ದಾರೆ.
ಅವರು ನಾಲ್ವರು ಬ್ಯಾಂಕಾಕ್ ಪ್ರವಾಸ ಮುಗಿಸಿಕೊಂಡು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಅನಂತಪುರಂ ಮಾರ್ಗವಾಗಿ ಬಳ್ಳಾರಿಗೆ ಆಗಮಿಸುತ್ತಿದ್ದರು. ಲಾಯರ್ ಮತ್ತು ಪೈನಾನ್ಸರ್ ಆಗಿದ್ದ ವೆಂಕಟ ನಾಯ್ಡು ಅವರು ಅಮರೇಗೌಡ ಅವರ ಪೋರ್ಡ್ ಎಂಡೆವರ ಕಾರನ್ನು ಚಲಾಯಿಸುತ್ತಿದ್ದರು. ನಿದ್ರೆಯ ಮಂಪರಿನಲ್ಲಿ ಚೇಳ್ಳಗುರ್ಕಿ ಇನ್ನು 5 ಕಿಲೋ ಮೀಟರ್ ಇರುವಾಗ ಕಾರು ನಿಯಂತ್ರಣ ತಪ್ಪಿ ಬೆಳಗಿನ ಜಾವ 4 ಗಂಟೆಗೆ ಮರಕ್ಕೆ ಡಿಕ್ಕಿ ಹೊಡೆದಿದೆ.
ಅಮರೇಗೌಡ ಅವರ ಐ ಪೋನ್ ಅಪಘಾತದ ಸಂದೇಶ ಕಳಿಸಿದ್ದು ಸಂಬಂಧಿಕರಿಗೆ ತಿಳಿದಿದೆ.

ಅಮರೇಗೌಡ ಅವರಿಗೆ ಬಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತರ ಶವಗಳನ್ನು ಬಿಮ್ಸ್ ಆಸ್ಪತ್ರೆಗೆ ತರಲಾಗಿದೆ. ಡಾ.ಗೋವಿಂದರಾಜುಲು ಅವರು ಈ ಭಾಗದಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡುವಲ್ಲಿ ಖ್ಯಾತರಾಗಿದ್ದರು. ಬಡ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅವರ ಗುಣ ಮೆಚ್ಚುಗೆಯಾಗಿತ್ತು. ಇವರ ಸಾವಿಗೆ ಬಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಮತ್ತು ಸಿಬ್ಬಂದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು