6:21 AM Tuesday16 - December 2025
ಬ್ರೇಕಿಂಗ್ ನ್ಯೂಸ್
Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ…

ಇತ್ತೀಚಿನ ಸುದ್ದಿ

ಕೃಷಿ ರಾಸಾಯನಿಕಗಳು ಜೀವ ವೈವಿಧ್ಯಕ್ಕೆ ಮಾರಕವಾಗದಿರಲಿ: ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ

30/11/2024, 16:46

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmal.com

ಕೃಷಿ ಪರಿಕರಗಳ ಮಾರಾಟಗಾರರ ಜವಾಬ್ದಾರಿ ಹೆಚ್ಚಿಸಲು ಈ ಕಾರ್ಯಕ್ರಮ ಮಾಡಲಾಗಿದೆ. ಇದರ ಸದುಪಯೋಗ ಆಗಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಭಾರತ ಸರ್ಕಾರ, ಮ್ಯಾನೇಜ್ ಹೈದರಾಬಾದ್, ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ರಾಯಚೂರು, ಕೃಷಿ ಇಲಾಖೆ – ಕೃಷಿ ತಂತ್ರಜ್ಞರ ಸಂಸ್ಥೆ ಬಳ್ಳಾರಿ ಇವರ ಸಹಯೋಗದಲ್ಲಿ ಬಳ್ಳಾರಿ ನಗರದ ಖಾಸಗಿ ಹೊಟೇಲ್’ನಲ್ಲಿ ಏರ್ಪಡಿಸಿದ್ದ (ಕೃಷಿ ವಿಸ್ತರಣಾ ಸೇವೆ) ಕೃಷಿ ಪರಿಕರಗಳ ಮಾರಾಟಗಾರರಿಗಾಗಿ ಡಿಪ್ಲೋಮಾ ಪ್ರಮಾಣ ಪತ್ರಗಳ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೀವು ಕೃಷಿಕರಿಗೆ ಒದಗಿಸುವ ರಾಸಾಯನಿಕ, ಗೊಬ್ಬರ ಅವರ ಬದುಕನ್ನೇ ನಿರ್ಧರಿಸುತ್ತದೆ, ನೀವು ನೀಡುವ ಯಾವುದೇ ವಸ್ತುಗಳು ಕೃಷಿ ಮಾತ್ರವಲ್ಲ, ಇಡೀ ಪರಿಸರದ ಮೇಲೆ ಪರಿಸರ ಬೀರುತ್ತದೆ, ಹೀಗಾಗಿ ನಿಮ್ಮ ಕೆಲಸ ಜವಾಬ್ದಾರಿಯುತವಾದದ್ದು ಎಂದರು.
ರೈತರಿಗೆ ಬೆಳೆ ಚೆನ್ನಾಗಿ ಬಂದರೆ ಮಾತ್ರ ನಿಮಗೆ ಹಣ ಸಿಗುತ್ತದೆ, ಇಲ್ಲದಿದ್ದರೆ ಕಷ್ಟ, ರೈತರಿಗಿಂತ ಸಂಕಷ್ಟದ ಕೆಲಸ ನಿಮ್ಮದು, ನೀವು ಉತ್ತಮ ರಾಸಾಯನಿಕ ನೀಡಿದಾಗ ಉತ್ತಮ ಬೆಳೆ ಬರುತ್ತದೆ, ಅದರಿಂದ ಜನರ ಆರೋಗ್ಯ ಕಾಪಾಡಲು ಸಾಧ್ಯ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ರಾಸಾಯನಿಕಗಳು ಜೀವ ವೈವಿಧ್ಯ, ಜೀವ ಸಂಕುಲವನ್ನು ಹಾಳು ಮಾಡಬಾರದು ಎಂದು ಹೇಳಿದ ಅವರು, ಮನುಷ್ಯ ಬದುಕಬೇಕು ಅದರ ಜೊತೆಗೆ ಎಲ್ಲ ಜೀವಿಗಳು ಕೂಡ ಉಳಿಯಬೇಕು ಎಂದರು.
ಕೃಷಿ ಪರಿಕರಗಳ ಮಾರಾಟಗಾರರ ಕೆಲಸ ಬುದ್ಧಿವಂತರ ಕೆಲಸ, ಜನರ ನಡುವೆ ಇರುವ, ಜನರ ಮನವೊಲಿಸುವ ಕೌಶಲ್ಯ ಇದ್ದವರು ಈ ಕೆಲಸ ಮಾಡಲು ಸಾಧ್ಯ ವಿನಃ ಕೇವಲ ಅತಿ ಹೆಚ್ಚು ಅಂಕ ಗಳಿಸುವರಿಗೆ ಕಷ್ಟಕರವಾದುದು ಎಂದರು.
ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಈ ವೇಳೆ ಡಾ.ಜಾಧವ ಎಸ್.ಎನ್, ಡಾ.ಬಿ.ಡಿ.ಬಿರಾದಾರ, ಸೋಮಸುಂದರ ಕೆ.ಎಂ, ಮಂಜುನಾಥ ಎನ್, ಡಾ.ರವಿಶಂಕರ್ ಜಿ, ಡಾ.ಗೋವಿಂಪ್ಪ ಎಂ.ಆರ್, ದಯಾನಂದ ಎಂ ಸೇರಿದಂತೆ ಮೊದಲಾದವರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು