ಇತ್ತೀಚಿನ ಸುದ್ದಿ
ಶಾಲೆಗೆ ಚಕ್ಕರ್, ಸಂಬಳಕ್ಕೆ ಹಾಜರ್!: ವಿಜಯನಗರ ಜಿಲ್ಲೆಯ ಕೆಲವು ಸರಕಾರಿ ಶಾಲಾ ಶಿಕ್ಷಕರ ಕರ್ಮಕಾಂಡ!!
29/11/2024, 11:42
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಕೆಲವೆಡೆ ಉಡಾಳ ಪುಂಡ ಮಕ್ಕಳು, “ಶಾಲೆಗೆ ಚಕ್ಕರ್ ಊಟಕ್ಕೆ ಹಾಜರ್” ಎಂಬ ಮಾತು ಕೇಳಿದ್ದೀರಿ ಆದ್ರೆ..ಆ ಜಾಗವನ್ನು ಜಿಲ್ಲೆಯ ಹಲವೆಡೆಗಳಲ್ಲಿನ ಸರ್ಕಾರಿ ಶಾಲೆಗಳ ಕೆಲ ಶಿಕ್ಷಕರು ತುಂಬಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನವಂಬರ್ 26ರಂದು ಜರುಗಿದ, ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಈ ಗಂಭೀರ ಆರೋಪ ಕೇಳಿಬಂದಿದೆ.
ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜಿಲ್ಲೆಯಾಧ್ಯಂತ ಸಾಕಷ್ಟು ವೈರಲ್ ಆಗಿ ಸದ್ದು ಮಾಡುತ್ತಿದೆ. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಹೂವಿನ ಹಡಗಲಿಯ SDMC ಸಮನ್ವಯ ಸಮಿತಿ ಹಾಗೂ ಅಖಿಲ ಭಾರತೀಯ ರೈತ ಪಾರ್ಟಿ ರಾಜ್ಯ ಮಹಿಳಾಧ್ಯಕ್ಷೆ ಎಸ್.ಯಶೋಧ ಈ ಗಂಭೀರ ಆರೋಪ ಮಾಡಿದ್ದಾರೆ. ಅವರು ಕಾರ್ಯಾಗಾರದಲ್ಲಿ ಮಾತನಾಡಿ ಶಾಲೆಗಳಿಗೆ ಕೆಲ ಉಡಾಳ ಮಕ್ಕಳು, ಕುಂಟು ನೆಪ ಹೇಳಿ ಚಕ್ಕರ್ ಹೊಡೆಯೋದು ಕೇಳಿದ್ದೀವಿ. ಆದರೆ ಜಿಲ್ಲೆಯ ಹಲೆವೆಡೆಯ ಕೆಲ ಶಿಕ್ಷಕರು ಶಾಲೆಯ ಹಾಜರಾತಿಗೆ ಸಹಿ ಮಾಡಿ, ಶಾಲೆಗೆ ಚಕ್ಕರ್ ಹೊಡೆದು. ಬಿಟ್ಟಿಯಾಗಿ ಭಾರೀ ಮೊತ್ತದ ಸಂಬಳ ಪಡೆಯೋರಿದ್ದಾರೆ. ಈ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆರೋಪಗಳು ಕೇಳಿಬಂದಿದ್ದು, ಸೂಕ್ತ ಸಾಕ್ಷ್ಯಾಧಾರಗಳ ಸಮೇತ ಹೋರಾಟ ಹಮ್ಮಿಕೊಳ್ಳಲಾಗುವುದು. ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ದೂರುಗಳು ಬಂದಿವೆ ಎಂದು, ಎಸ್.ಯಶೋಧ ಕಾರ್ಯಾಗಾರದಲ್ಲಿ ಪ್ರಸ್ಥಾಪಿಸಿದ್ದಾರೆ. ಇದರಿಂದಾಗಿ ಕುಪಿತರಾದ ಕೆಲ ಶಿಕ್ಷಕರು, ಅವರ ಆರೋಪದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. SDMC ಯವರು ಹಲವು ಶಿಕ್ಷಕರ ನಡುವೆ ಸ್ವಲ್ಪ ಹೊತ್ತು, ಕಾರ್ಯಾಗಾರದಲ್ಲಿ ವಾಗ್ವಾದ ಕೋಲಾಹಲ ಸೃಷ್ಠಿಯಾಗಿದೆ. ಇದನ್ನು ಸಾಬೀತು ಪಡಿಸುವ ವೀಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಾಕ್ಷಿಯಾಗಿ ಸಾಬೀತು ಮಾಡಿದೆ. ಈ ಸಂಬಂಧಿಸಿದಂತೆ ಹೋರಾಟಗಾರ್ತಿ ಎಸ್.ಯಶೊಧರವರು ಸ್ಪಷ್ಟೀಕರಣ ನೀಡಿದ್ದಾರೆ, ಹಲವೆಡೆಯ ಸಾರ್ವಜನಿಕರಿಂದ ಕೆಲ ಶಿಕ್ಷಕರ ಮೇಲೆ ಗಂಭಿರ ಆರೋಪವಿದೆ. ಹಲವೆಡೆಗಳಿಂದ ತಮಗೆ ಲಿಖಿತ ದೂರು ಬಂದಿದ್ದು , ಅದು ಗಂಭೀರ ಸ್ವರೂಪದ್ದಾಗಿದೆ ಕಾರಣ ಕಾರ್ಯಾಗಾರದಲ್ಲಿ ಪ್ರಸ್ತಾಪಿಸಿರುವೆ ಎಂದು ಆರೋಪ ಸಮರ್ಥಿಸಿಕೊಂಡಿದ್ದಾರೆ. *ಶಿಕ್ಷಕರ ಸಂಘ ನೌಕರರ ಸಂಘಗಳು ಜವಾಬ್ದಾರಿ ಮೆರೆಯಲಿ:* ಇಂತಹ ಆರೋಪಗಳು ದೂರುಗಳು ಬಂದಾಗ, ಇಲಾಖಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಅಥವಾ ನಮ್ಮ ಸಮನ್ವಯ ವೇದಿಕೆಯವರು, ಅದಕ್ಕೆ ಪರಿಹಾರ ಕಂಡುಕೊಳ್ಳೋ ಮಾರ್ಗ ಸೂಚಿಸುವವರಿದ್ದರು. ಆದರೆ ಕುಂಬಳ ಕಾಯಿ ಕಳ್ಳ ಅಂದರೆ ಕೆಲವರು ಎದ್ದು ನಿಂತು ವಾಗ್ವಾದಕ್ಕಿಳಿದು, ಉಡಾಳತನ ತೋರಿ ತಾವೇಕೆ ಹೆಗಲು ಮುಟ್ಟಿಕೊಳ್ಳಬೇಕು.!? ಎಂದು ಪ್ರೆಶ್ನಿಸಿದ್ದಾರೆ. ಇದು ಕೇವಲ ಹೂವಿನ ಹಡಗಲಿಯ ತಾಲೂಕಿನ ಹಲವು ಸರ್ಕಾರಿ ಶಾಲೆಗಳ ಸಮಸ್ಯೆ ಮಾತ್ರವಲ್ಲ, ಜಿಲ್ಲೆಯ ಹಲವೆಡೆಗಳ ಕೆಲ ಶಾಲೆಗಳಲ್ಲಿನ ಉಡಾಳ ಶಿಕ್ಷಕರ ಉಡಾತನಕ್ಕೆ ಸಾಕ್ಷಿಯಾಗಿದೆ. ದಾಖಲಾತಿಗೆ ಹಾಜರ್ ಆಗಿ ಶಾಲೆಗೆ ಚಕ್ಕರ್ ಹಾಕೋ ಉಡಾಳ ಶಿಕ್ಷಕರ ವಿರುದ್ಧ, ಸ್ಥಳೀಯ ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದಿದ್ದು. ಇದರ ವಿರುದ್ಧ ಅಗತ್ಯ ಸಾಕ್ಷ್ಯಾಧಾರಗಳ ಸಮೇತ ಉನ್ನತಾಧಿಕಾರಿಗೆ, ಲಿಖಿತ ದೂರು ಸಲ್ಲಿಸಲಾಗುವುದು ಹಾಗೂ ಕಾನೂನು ಹೋರಾಟ ನಡೆಸಲಾಗುವುದೆಂದು ತಿಳಿಸಿದ್ದಾರೆ. ಕಾರ್ಯಗಾರದಲ್ಲಿ ಜಿಲ್ಲೆಯಾಧ್ಯಂತ ಇರೋ ಶಾಲೆಗಳ ಮಖ್ಯ ಶಿಕ್ಷಕರು, ಹಾಗೂ SDMC ಸಮನ್ವಯ ಸಮಿತಿ ರಾಜ್ಯ ಮುಖಂಡರು. ಜಿಲ್ಲಾ ಮುಖಂಡರು ಎಲ್ಲಾ ತಾಲೂಕುಗಳ ಮುಖಂಡರು, ಪದಾಧಿಕಾರಿಗಳು ಹಾಜರಿದ್ದ ಹಿನ್ನಲೆಯಲ್ಲಿ ಈ ಗಂಭೀರ ಸಮಸ್ಯೆಯನ್ನು. ಕಾರ್ಯಾಗಾರದಲ್ಲಿ ಚರ್ಚಿಸಬೇಕಾಯಿತು, ಇದು ಕೇವಲ ಹೂವಿನಹಡಗಲಿ ತಾಲೂಕಿ ಮಾತ್ರವಲ್ಲ, ಜಿಲ್ಲೆಯ ಹಲವು ತಾಲೂಕುಗಳ ಕೆಲವೆಡೆಯ. ಕೆಲವೇ ಕೆಲ ಶಾಲೆಗಳಲ್ಲಿನ ಬೆರಲೆಣಿಕೆಯಷ್ಟು ಸಂಖ್ಯೆಯ, ಉಡಾಳ ಶಿಕ್ಷಕರ ಮೇಲಿರುವ ಗಂಭೀರ ಆರೋಪದ ಸಮಸ್ಯೆಯಾಗಿದೆ ಎಂದು ಸ್ಪಷ್ಟ ಪಡಿಸಿದರು.
ಸಾರ್ವಜನಿಕ ವಲಯದಿಂದ ಬಂದ ದೂರುಗಳನ್ನು, ಗಂಭೀರವಾಗಿ ಪರಿಗಣಿಸಿ ಅಗತ್ಯ ಶಿಸ್ಥು ಕ್ರಮ ಜರುಗಿಸಬೇಕಿದೆ. ಸಮಾಜದಲ್ಲಿ ಸ್ವಾಸ್ಥ್ಯ ಪಾಡುವ ನಿಟ್ಟಿನಲ್ಲಿ ಕಾಳಜಿಯನ್ನು, ಶಿಕ್ಷಕರ ಸಂಘ ನೌಕರರ ಸಂಘ ತೋರಬೇಕಿದೆ. ಶಿಕ್ಷಕರಿಗೆ ಅನಗ್ಯ ಕಿರುಕುಳ ಅನ್ಯಾಯವಾದಾಗ, ಎಲ್ಲರೂ ಅನ್ಯಾಯದ ವಿರುದ್ಧ ಧ್ವನಿಯಾಗಬೇಕಿದೆ, ಅಂತಹ ಸಂದರ್ಭದಲ್ಲಿ SDMC ಶಿಕ್ಷಕರ ಸಂಘ ನೌಕರರ ಸಂಘದಿಂದಿಗೆ ಸದಾ ಇರುತ್ತದೆ ಎಂದರು. ಕಾರಣ ಸಂಘಟನೆಗಳು ತಮ್ಮ ಜವಾಬ್ದಾರಿಗಳನ್ನು, ದೇಯೋದ್ದೇಶಗಳನ್ನು ಅರಿಯಬೇಕಿದೆ ಹಾಗೇಯೇ ಪಾಲಿಸಬೇಕಿದೆ ಎಂದು ಯಶೋಧ ತಿಳಿಸಿದ್ದಾರೆ. ಸಾರ್ವಜನಿಕರ ಹಿತಕ್ಕಾಗಿ ಸದುದ್ಧೇಶಕ್ಕೆ ಸಂಘ ಸಹಕರಿಸಬೇಕೇ ಹೊರತು, ದುರುದ್ಧೇಶಗಳಿಗೆ ಸಹಕರಿಸಿದರೆ ಸಂಘಕ್ಕೆ ಮೂರುಕಾಸಿನ ಮರ್ಯಾದೆ ಇರೋದಿಲ್ಲ ಎಂದಿದ್ದಾರೆ. *ಸಾರ್ವಜನಿಕರ ಹಣದಲ್ಲಿ ಬದುಕುವ ನೌಕರರ ಜನಪ್ರತಿನಿಧಿಗಳ ಮಕ್ಕಳನ್ನು, ಸರ್ಕಾರಿ ಶಾಲೆಗೆ ಸೆೇರಿಸುವುದು ಕಡ್ಡಾಯವಾಗಲಿ- ಹಕ್ಕೊತ್ತಾಯ* ಶಿಕ್ಷಕರ ಸಂಘದವರು ನೌಕರರ ಸಂಘದವರು, ನೈತಿಕತೆ ಬದ್ಧತೆಯಿದ್ದರೆ ತಮ್ಮ ಕರ್ಥವ್ಯದ ಮೇಲೆ ನಂಬಿಕೆ ಇದ್ದರೆ. ಅವರೆಲ್ಲರೂ ಮೊದಲು ತಮ್ಮ ಮಕ್ಕಳನ್ನು, ಸರ್ಕಾರಿ ಶಾಲೆಗಳಿಗೆ ಸೇರಿಸಲಿ. ಸರ್ಕಾರಿ ಸಂಬಳ ಪಡೆಯೋ ಪ್ರತಿಯೊಬ್ಬರೂ, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಇದನ್ನು ಖಡ್ಡಾಯಗೊಳಿಸಿ ಕಾಯ್ದೆ ಜಾರಿ ತರಬೇಕಿದೆ. ರಾಜಕಾರಣಿಗಳು ಜನಪ್ರತಿನಿಧಿಗಳಾಗಲು ಮೊದಲು, ಅವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕಿದೆ. ಈ ನಿಯಮ ಖಡ್ಡಾಯಗೊಳಿಸಿ ಸರ್ಕಾರ ಕಾನೂನು ಜಾರಿತರಬೇಕಿದೆ, ಅಂದಾಗ ಮಾತ್ರ ಸರ್ಕಾರಿ ಶಾಲೆಗಳ ಸುಧಾರಣೆ ಉಳಿವು ಸಾಧ್ಯ ಎಂದು ಹೋರಾಟ ಗಾರ್ತಿ ಎಸ್.ಯಶೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲವಾದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಅಭಿವೃದ್ಧಿ ಸುಧಾರಣೆ ಕೇವಲ ಭಾಷಣ, ಲೆಕ್ಕ ಪತ್ರ ದಾಖಲುಗಳಿಗೆ ಹೋರಾಟಗಳಿಗೆ ಆಹಾರವಾಗಿ ಸೀಮಿತಿ ಆಗಲಿಗಲಿದೆ. ಮೊದಲನೇ ಹಂತವಾಗಿ ಈ ನಿಟ್ಟಿನಲ್ಲಿ ಒತ್ತು ಕೊಡೋ, ಹಾಗೂ ತಮ್ಮ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸುವ ಪಕ್ಷಗಳಿಗೆ. ಸಾರ್ವಜನಿಕರು ಮತದಾರ ಭಾಂದವರು ಚುನಾವಣೆ ಸಂದರ್ಭದಲ್ಲಿ, ಒಲವು ತೋರಬೇಕಿದೆ. ಅಂದಾಗ ಮಾತ್ರ ಕಾನೂನು ಜಾರಿಯಾವಗಲು ಸಾಧ್ಯ, ಸರ್ಕಾರಿ ಶಾಲೆಗಳು ಉಳಿಯಲು ಮತ್ತು ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆ ಇರಲು ಸಾಧ್ಯ ಎಂದರು. *ತಿದ್ದಿ ಕೊಳ್ಳದಿದ್ದಲ್ಲಿ “ತಪ್ಪಿತಸ್ಥರಿಗೆ-ತಕ್ಕ ಶಿಕ್ಷೆಗಾಗಿ” ಹೋರಾಟ _ಎಚ್ಚರಿಕೆ*-
ಗಂಭೀರವಾದ ಆರೋಪ- ಪ್ರತ್ಯಾರೋಪಗಳು ಬಂದಾಗ, ತಾಳ್ಮೆಯಿಂದ ಚರ್ಚೆಯ ಮೂಲಕ ಸಮಸ್ಯಗೆ ಪರಿಹಾರೋಪಾಯ ಕಂಡು ಕೊಳ್ಳಬೇಕಿದೆ ಹೊರತು. ಹೀಗೆ ಪುಂಡಾಟಿಕೆಯಿಂದಲ್ಲ ಇದು ಪರಿಸ್ಥಿತಿಯನ್ನು, ಮತ್ತಷ್ಟು ಜಟಿಲಗೊಳಿಸುತ್ತದೆ ಹೋರಾಟ ತೀವ್ರಗತಿಯಲ್ಲಿ ಮಾಡಲಾಗುತ್ತದೆ. ಒಂದು ದಿನವೆಲ್ಲಾ ಬೆವರಿಳಿಸಿ ದುಡಿಯೋ ಕಾರ್ಮಿಕನಿಗೆ, ಕೂಲಿ ಮುನ್ನೂರು ರೂಪಾಯಿ ಸಿಗುತ್ತದೆ. ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲೆಂದು, ತಿಂಗಳಿಗೆ ಹತ್ತಾರು ಸಾವಿರ ರೂಪಾಯಿ ಸಂಬಳ ದಿನಕ್ಕೆ ಸಾವಿರ ರೂಗಳಿಗೂ ಅಧಿಕ ಕೂಲಿ ಪಡೆಯೋ ಶಿಕ್ಷಕ. ತನ್ನ ಜವಾಬ್ದಾರಿ ಅರಿಯದೇ ಉಡಾಳತನ ಮೆರೆದೆರೆ ಹೇಗೆ.!?, ಸಾರ್ವಜನಿಕರ ಹಣದಿಂದ ಸರ್ಕಾರ ನೀಡೋ ಸಂಬಳ ಪಡೆದು, ಬೇಜವಾಬ್ದಾರಿಯಿಂದ ವರ್ತಿಸುವ ಇವರು, ನಾಚಿಕೆ ಇಲ್ಲದೇ ಸಮಾಜದಲ್ಲಿ ಹೊಣೆಗೇಡಿತನ ತೋರಿದರೆ ಹೇಗೆ..!?. ಎಂದು ಅವರು ಪ್ರೆಶ್ನಿಸಿದ್ದಾರೆ. ಇಂತಹದ ಅಶಿಸ್ಥಿನ ಕೆಲವೇ ಕೆಲ ಶಿಕ್ಷಕರಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ, ಖಾಸಗೀ ಶಾಲೆಗಳು ನಾಯಿ ಕೊಡೆಗಳಂತೆ ಹುಟ್ಟುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಗಾರದಲ್ಲಿ ತಾವು ಈ ಗಂಭೀರ ಸಮಸ್ಯೆಯ ಕುರಿತು, ನಾಲ್ಕು ಮೂಲೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳೋ ಸದುದ್ಧೇಶದಿಂದ ಪ್ರಸ್ತಾಪಿಸಿದೆ. ಆದರೆ ತಾಳ್ಮೆ ಇಲ್ಲದ ಕೆಲ ಉಡಾಳ ಶಿಕ್ಷಕರು, “ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡ” ಎಂಬಂತೆ, ಕೆಲವರು ಪುಂಡಾಕಿ ತೋರಿ ಜಗಜಾಹೀರ ಮಾಡಿಕೊಂಡಿದ್ದಾರೆ ಎಂದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತುಂಬಾ ಗಂಭೀರವಾಗಿ ಚರ್ಚೆಗೆ ಈಡಾಗಿದೆ. ಕೆಲವೇ ಕೆಲ ಶಿಕ್ಷಕರ ಅಶಿಸ್ಥಿನ ನಡೆ ಬಗ್ಗೆ, ಸಾರ್ವಜನಿಮ ವಲಯದಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಮತ್ತು ಇದು ಹೊಣೆಗೇಡಿತನ ಹಾಗೂ ನಾಚಿಕೆಗೇಡಿತನಕ್ಕೆ ಸಾಕ್ಷಿಯಾಗಿದ್ದು, ತಾವೂ ಕೂಡ ಕಠೋರವಾಗಿ ಖಂಡಿಸುವುದಾಗಿ ಅವರು ತಿಳಿಸಿದರು. ಶಿಕ್ಷಕರ ಮೇಲೆ ತಮಗೆ ಅಪಾರ ಗೌರವವಿದೆ, ಬಹುತೇಕ ಶಿಕ್ಷಕರು ತಮ್ಮನ್ನ ಸ್ವಯಂ ವಿಮರ್ಶೆಗೆ ಒಳಪಡಿಸಿಕೊಂಡಿದ್ದಾರೆ. ಸಾರ್ವಜನಿಕರಿಂದ ಗಂಭೀರ ಆರೋಪಗಳು ಕೇಳಿ ಬಂದಾಗ, ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಜವಾಬ್ದಾರಿ ತೋರಿದ್ದಾರೆ. ಆದರೆ ಉಡಾಳತನದ ಪುಂಡತನದ ಬೆರಳೆಣಿಕೆಯಷ್ಟು ಶಿಕ್ಷಕರಿಂದಾಗಿ, ಅಪಾರ ಗೌರವಾನ್ವಿತ ಇಡೀ ಶಿಕ್ಷಕ ವೃಂಧವೇ ಗುರಿಯಾಗುತ್ತಿದೆ. ಕಾರಣ ಅಂತಹ ಉಡಾಳ ಶಿಕ್ಷಕರನ್ನು ಶಿಕ್ಷಕರ ಸಂಘವೇ ಗುರುತಿಸಿ, ಅವರಿಗೆ ಸೂಕ್ತ ರೀತಿಯ ಅರಿವು ಮೂಡಿಸುವ ಕಾರ್ಯವಾಗಬೇಕು ಇಲ್ಲವೇ ನಿರ್ಧಾಕ್ಷಿಣ್ಯ ಶಿಸ್ತು ಕ್ರಮ ಜರುಗಿಸಬೇಕಿದೆ. ಹಾಗಾಗದಿದ್ದಲ್ಲಿ ಸಾರ್ವಜನಿಕರ ಹಿತಕ್ಕಾಗಿ, ಎಲ್ಲಾ ಹಂತದ ಕಾನೂನಾತ್ಮಕ ಹೋರಾಟ ನಡೆಸಲಾಗುವುದು. ಸೂಕ್ತ ಸಾಕ್ಷ್ಯಧಾರಗಳೊಂದಿಗೆ ಹಾಗೂ ಪತ್ರಕೆ ಮಾಧ್ಯಮ ವಲಯದ ನೆರವಿನೊಂದಿಗೆ, “ದಾಖಲಾತಿಗೆ ಹಾಜರಾಗಿ ಶಾಲೆಗೆ ಚಕ್ಕರ್ ಹೊಡೆಯೋ”. ಉಡಾಳ ಪುಂಡ ಶಿಕ್ಷಕರ ವಿರುದ್ಧ ಕಾನೂನು ಹೋರಾಟ ಅನಿವಾರ್ಯ ಎಂದು, ಹೋರಾಟಗಾರ್ತಿ ಹಾಗೂ ABRP ರಾಜ್ಯ ಮಹಿಳಾಧ್ಯಕ್ಷೆ ಎಸ್.ಯಶೋಧ ಆಕ್ರೋಶ ಭರಿತರಾಗಿ ಎಚ್ಚರಿಸಿದ್ದಾರೆ.