11:02 PM Wednesday27 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ರಾಜ್ಯದಲ್ಲಿ ಕ್ರಿಶ್ಚಿಯನ್ ಮಿಷನರಿಗಳ ಕಾರ್ಯ ಶ್ಲಾಘನೀಯ: ಬಳ್ಳಾರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

27/11/2024, 22:54

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmail.com

ಸಮಾಜದಲ್ಲಿ ಇಂದಿಗೂ ಜಾತಿ ಬೇಧ ಬೇರೂರಿದೆ. ಇದನ್ನು ಹೋಗಲಾಡಿಸಲು ರಾಜ್ಯದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಗುಣ ಮಟ್ಟದ ಶಿಕ್ಷಣ ನೀಡಿರುವ ಕಾರ್ಯ ಶ್ಲಾಘನೀಯ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಬುಧವಾರ ಸಂಜೆ ಬಳ್ಳಾರಿಯಲ್ಲಿ ಬಳ್ಳಾರಿ ಕ್ರೈಸ್ತ ಧರ್ಮ‌ಪ್ರಾಂತದ ಅಮೃತ ಮಹೋತ್ಸವದ ಎರಡು ದಿನಗಳ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಸಮುದಾಯಕ್ಕೆ ಅಕ್ಷರ ಕಲಿಸುವುದು ಮುಖ್ಯ.


ಭಾರತ ಬಹುತ್ವದ ದೇಶ, ಇಲ್ಲಿ ಎಲ್ಲಾ ಧರ್ಮ, ಜಾತಿ, ಭಾಷಿಕರು ಇದ್ದಾರೆ. ನಾವೆಲ್ಲರು ಮೂಲತಃ ಮಾನವರು, ಅದಕ್ಕೆ ಸರ್ವ ಧರ್ಮ ಸಮನ್ವಯ ಈ ದೇಶದಲ್ಲಿ ನೋಡಲು ಸಾಧ್ಯ. ಈ ಪರಂಪರೆಯನ್ನು ಉಳಿಸಿ, ಬೆಳಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಬೇಕು. ನಾವು ವಿಶ್ವ ಮಾನವರಾಗಬೇಕೆ ಹೊರತು ಅಲ್ಪ‌ಮಾನವರಾಗಬಾರದು. ದ್ವೇಷ ಅಸೂಯೆ ನಮ್ಮ ಮಧ್ಯ ಇರಬಾರದು. ಅದು ಇದ್ದರೆ ಸಮಾಜದ ಒಡಕು ಆಗುತ್ತದೆ ಎಂದರು.
ಬೇರೆ ಧರ್ಮದ ಬಗ್ಗೆ ಸಹಿಷ್ಣತೆಯನ್ನು ಬೆಳಸಿಕೊಳ್ಳಬೇಕು ಎಂಬುದನ್ನು ಸಂವಿಧಾನ ಹೇಳಿದೆ. ಅದನ್ನು ನಾವು ಪಾಲಿಸಬೇಕು. ನಾನು ಮುಸ್ಲೀಂರನ್ನು ಓಲೈಸುತ್ತೇನೆಂದು ಹೇಳುತ್ತಾರೆ, ಹಿಂದುಗಳಂತೆ ಎಲ್ಲರನ್ನೂ ಪ್ರೀತಿಸುತ್ತೇನೆ ಎಂದರು.
ಜಾತೀಯತೆಯಿಂದ ಅಸಮಾನತೆ ಸೃಷ್ಟಿಯಾಗಿ ಸಮಾಜದಲ್ಲಿ ಇನ್ನೂ ಅಸಮಾಧಾನ ಇದೆ. ರಾಜಕೀಯ ಪ್ರಜಾಪ್ರಭುತ್ವ ಸಿಕ್ಕಿದೆ. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಇಲ್ಲ. ಅಸಮಾನತೆ ಹೋಗಬೇಕೆಂದರೆ ಶಿಕ್ಷಣ ಬೇಕು. ಮೀಸಲಾತಿ ಬೇಕು. ಅಸಮಾನತೆ ಹೋಗಲಾಡಿಸಲು ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದೆ ಎಂದರು.
ಏಸು, ಕನಕದಾಸ, ಪೈಗಂಬರ್ ಮೊದಲಾದ ದಾರ್ಶನಿಕರು ಸಮಾನತೆಯನ್ನು ಬೋಧಿಸಿದರು. ಆದರೂ ಅಸಮಾನತೆ ಹೋಗಲಿಲ್ಲ. ಶಿಕ್ಷಣದಿಂದ ಮಾತ್ರ ಅಸಮಾನತೆ ಹೋಗಲಾಡಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಧರ್ಮ ಜಾತಿ ಆಧಾರದಲ್ಲಿ ಸಮಾಜವನ್ನು ಒಡೆಯುವ ಕಾರ್ಯ ನಡೆಯುತ್ತದೆ. ಅಂಥವರ ವಿರುದ್ದ ಎಚ್ಚರಿಕೆಯಿಂದ ಇರಬೇಕು. ಜಾತ್ಯತೀತಯನ್ನು ಸಂವಿಧಾನದಿಂದ ತೆಗೆಯುವ ಕೆಲಸ ಆಗಬಾರದು. ಸಂವಿಧಾನಕ್ಕೆ ವಿರುದ್ದವಾದವರು ಈ ಕೆಲಸ ಮಾಡುತ್ತಾರೆ. ಸಂವಿಧಾನದ ಬಗ್ಗೆ ಎಲ್ಲರೂ ತಿಳಿಯಬೇಕು. ಅದರ ರೀತಿಯಲ್ಲಿಯೇ ಎಲ್ಲಾ ಪಕ್ಷಗಳು ನಡೆಯಬೇಕು. ಅದರ ಆಶಯವನ್ನು ಜಾರಿ‌ಮಾಡಬೇಕು ಎಂದು ಮುಖ್ಯಮಂತ್ರಿ ನುಡಿದರು.
ಈ ವೇಳೆ ಬಳ್ಳಾರಿ ಧರ್ಮ ಪ್ರಾಂತ್ಯದಿಂದ ಬಡ ಜನತೆ ನಿರ್ಮಿಸಿದ ಮನೆ, ಕೊಡಲು ಉದ್ದೇಶಿಸಿರುವ ನಿವೇಶನಗಳ ಹಂಚಿಕೆಯನ್ನು, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಮುಖ್ಯಮಂತ್ರಿಗಳು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಬಿಷಪ್ ಹೆನ್ರಿಕ್ ಡಿಸೋಜ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಸ್ಥಳೀಯ ಕೊಟ್ಟೂರು ಸ್ವಾಮಿ ಮಠದ ಬಸವಲಿಂಗಸ್ವಾಮಿ, ಕಲ್ಯಾಣ ಮಠದ ಕಲ್ಯಾಣ ಸ್ವಾಮಿ,ಕೆ.ಜೆ.ಜಾರ್ಜ್, ಅಲ್ಲಂ ವೀರಭದ್ರಪ್ಪ, ಶಾಸಕರಾದ ಡಾ.ಅಜಯ್ ಸಿಂಗ್, ನಾರಾ ಭಾರತ್ ರೆಡ್ಡಿ , ನಾಗೇಂದ್ರ , ಗಣೇಶ್, ಅನ್ನಪೂರ್ಣ, ಮೊದಲಾದವರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು