1:04 AM Monday7 - July 2025
ಬ್ರೇಕಿಂಗ್ ನ್ಯೂಸ್
ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಕಲಬುರ್ಗಿ: ವಕ್ಫ್ ಬೋರ್ಡ್ ಸದಸ್ಯರಾಗಿ ಆಯ್ಕೆಯಾದ ಹಫೀಜ್ ಮುಹಮ್ಮದ್ ಅಲಿ ಅಲ್ ಹುಸೇನಿಗೆ ಅದ್ಧೂರಿ ಸ್ವಾಗತ

25/11/2024, 19:09

ಶಿವು ರಾಠೋಡ್ ಹುಣಸಗಿ ಕಲಬುರ್ಗಿ

info.reporterkarnataka@gmail.com

ವಕ್ಫ್ ಬೋರ್ಡ್ ಸದಸ್ಯರಾಗಿ ನೂತನವಾಗಿ ಆಯ್ಕೆಯದ ಕೆಬಿಎನ್ ದರ್ಗಾದ ಸಜ್ಜಾದೆ ನಶೀನ ಹಫೀಜ ಸಯ್ಯದ ಮುಹಮ್ಮದ್ ಅಲಿ ಅಲ್ ಹುಸ್ಸೇನಿ ಅವರನ್ನು ಕಲಬುರ್ಗಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಗರದ ಹುಮ್ನಾಬಾದ್ ರಿಂಗ್ ರೋಡ್ ನಲ್ಲಿ ಹೂವುಗಳಿಂದ ತುಂಬಿದ ಜೇಸಿಬಿಗಳಿಂದ ಅಲಿ ಹುಸೇನಿರಿಗೆ ಪುಷ್ಪಾರ್ಪಣೆ ನಡೆಯಿತು. ಅಲ್ಲದೇ 600 ಕೆಜಿ ಹಾಗೂ 50 ಮೀಟರ ಉದ್ದದ ಮಾಲಾರ್ಪಣೆಗೆ ನೆರೆದ ಸಮೂಹ ಸಾಕ್ಷಿಯಾಯಿತು.
ಹೂ ಮಳೆಯ ನಂತರ ಕಪನೂರ ಏರಿಯಾದ ಬಾಬಾಸಾಹೇಬ ಅಂಬೇಡ್ಕರ ಮೂರ್ತಿಗೆ ಅಲಿ ಅಲ ಹುಸ್ಸೇನಿ ಮಾಲಾರ್ಪಣೆ ಮಾಡಿದರು.

ಪುಂಜಾ ಗ್ರೂಪ್ ಆಫ್ ಇಂಡಸ್ಟ್ರಿ (ಕರಿಗಾರ ಕುಟುಂಬ),ದರ್ಗಾ ಹಜರತ್ ಬೈ ಬಿ ಕುಂಜಾ ಮಸಾಬಿ ದರ್ಗಾ, ಅಯಾಜ್ ಖಾನ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ನಯೀಮ್ ಖಾನ ಸೇರಿದಂತೆ ಅನೇಕ ಜನ ಅವರಿಗೆ ರೋಡ ಶೋ ರ್ಯಾಲಿಯಲ್ಲಿಯೇ ಸನ್ಮಾನ ಮಾಡಿ ಅಭಿನಂದಿಸಿದರು. ರೋಡ ಶೋ ಉದ್ದಕ್ಕೂ “ಅಲಿ ಹಮಾರಿ ಜಾನ್ ಹೈ, ಗುಲ್ಬರ್ಗಾ ಕಿ ಶಾನ ಹೈ ” ಎಂಬ ಜೈಕಾರ ಕೇಳಿ ಬಂತು.
ಹಫೀಜ ಮುಹಮ್ಮದ ಅಲಿ ಅಲ್ ಹುಸ್ಸೇನಿ ಇವರು ಜನರನ್ನು ಉದ್ದೇಶಿಸಿ ಮಾತನಾಡಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಸಹಸ್ರಾರು ಜನರು ಪಾಲ್ಗೊಂಡಿದ್ದ ಈ ರ್ಯಾಲಿ ಕಮಲಾಪುರದಿಂದ ಪ್ರಾರಂಭವಾಗಿ ಕಪ್ನೂರ್,ಹುಮನಾಬಾದ್ ಸರ್ಕಲ್, ನಾಗೇಶ್ವರ ಶಾಲೆ, ಮುಸ್ಲಿಂ ಚೌಕ್, ಮಕ್ಬಾರಾ ಮಸೀದಿ, ಜಲಾಲವಾಡಿ, ಕೆಬಿಎನ್ ದರ್ಗಾ. ದರ್ಗಾ ತಲುಪಿದ ನಂತರ ಖಾಜಾ ಬಂದಾನವಾಜರ ಆಶೀರ್ವಾದ ಪಡೆದ ಅಲಿ ಅಲ್ ಹುಸ್ಸೇನಿ ದೇವಡಿ ತೆರಳಿದರು. ದೇವಡಿಯಲ್ಲಿ ಭಕ್ತರು ಅನುಯಾಯಿಗಳು ಸನ್ಮಾನ ಮಾಡಿದರು. ಶಾಂತಿಯುತವಾಗಿ ನಡೆದ ರ್ಯಾಲಿಯಲ್ಲಿ ಪೊಲೀಸ್
ಬಿಗಿ ಬಂದೋಬಸ್ತ್ ಮಾಡಲಾಗಿತು.

ಇತ್ತೀಚಿನ ಸುದ್ದಿ

ಜಾಹೀರಾತು