11:06 AM Saturday23 - November 2024
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ… ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು; ಡಾ.ಸಂಪತ್… ಮೂವರು ಯುವತಿಯರ ಸಾವಿಗೆ ಕಾರಣವಾದ ಸೋಮೇಶ್ವರ ಬೀಚ್ ರೆಸಾಟ್೯ಗೆ ಬೀಗಮುದ್ರೆ ಬಂಟ್ವಾಳ ಸಮೀಪದ ಗಡಿಯಾರದಲ್ಲಿ ಸಿಡಿಲು ಬಡಿದು ಬಾಲಕ ಮೃತ್ಯು: ಮನೆಯಂಗಳದಲ್ಲಿ ನಿಂತಿದ್ದ ವೇಳೆ… ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಸಡಗರ -ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿದ ಚಿಕ್ಕ… ಸಹಕಾರಿ ಕ್ಷೇತ್ರ ಜಾತಿ, ಪಕ್ಷಗಳ ಆಧಾರದಲ್ಲಿ ಕಾರ್ಯ ನಿರ್ವಹಿಸಬಾರದು: ಮಂಗಳೂರಿನಲ್ಲಿ ಸಚಿವ ಕೆ.ಎನ್.… ಉತ್ತರ ಪ್ರದೇಶ: ಝಾನ್ಸಿ ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅಪಘಾತ; ಕನಿಷ್ಠ 10 ನವಜಾತ…

ಇತ್ತೀಚಿನ ಸುದ್ದಿ

ಇಟಲಿಯ ಮೀರ್ ಗ್ರೂಪ್ ಮಂಗಳೂರಿನಲ್ಲಿ ಬಂಡವಾಳ ಹೂಡಿಕೆ: ಎಂಎಸ್‌ಇಝಡ್ ಜತೆ ಒಪ್ಪಂದಕ್ಕೆ ಸಹಿ

22/11/2024, 19:35

ಮಂಗಳೂರು(reporterkarnataka.com): ಇಟಲಿಯ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಸಾಮಗ್ರಿ ಉತ್ಪಾದನಾ ಕಂಪನಿಯಾಗಿರುವ ಮೀರ್ ಗ್ರೂಪ್ ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡಲಿದ್ದು, ಈ ಕುರಿತು ಗುರುವಾರ ಒಪ್ಪಂದ ಮಾಡಿಕೊಂಡಿದೆ.
ಶುಕ್ರವಾರ ಮಂಗಳೂರು ನಗರದ ಓಷನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಸಮಕ್ಷಮದಲ್ಲಿ ಎಂಎಸ್‌ಇಝಡ್ ಸಿಇಒ ಸೂರ್ಯನಾರಾಯಣ ರಾವ್ ಹಾಗೂ ಮೀರ್ ಗ್ರೂಪ್‌ನ ಮುಖ್ಯಸ್ಥ ರಫೇಲೆ ಮರಾಝೊ ಅವರು ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.
ಸಮಾರಂಭದಲ್ಲಿ , ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಭಾಗವಹಿಸಿದ್ದರು, ಈ ಸಂದರ್ಭದಲ್ಲಿ ಮಾತನಾಡಿದ ಚೌಟ ಅವರು ಚುನಾವಣೆ ಸಂದರ್ಭದಲ್ಲಿ ನೀಡಿದ ಮಾತಿನಂತೆ ಸ್ಥಳೀಯರಿಗೆ ಉದ್ಯೋಗ ಅವಕಾಶಗಳು ದೊರೆಯಬೇಕು ಅಲ್ಲದೆ , ಊರಿನ ಯುವಕರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗದೆ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಜಿಲ್ಲೆಯಲ್ಲೇ ಉದ್ಯಮಗಳನ್ನು ಸ್ಥಾಪಿಸಲು ಹುಟ್ಟೂರಿನಿಂದ ದೂರ ಹೋಗಿರುವ ಸ್ಥಳೀಯರನ್ನು ಪ್ರೇರೇಪಿಸುವ ಕೈಗೊಂಡಿದ್ದು, ಅದರ ಭಾಗವಾಗಿ ಮಂಗಳೂರು ಜಿಲ್ಲೆಗೆ ಬಂಡವಾಳವನ್ನು ತರುವ ಉದ್ದೇಶದಿಂದ. ಅವರು “ಬ್ಯಾಕ್ ಟು ಊರು” ಎಂಬ ಉಪಕ್ರಮದೊಂದಿಗೆ ಜಿಲ್ಲೆಗೆ ಅಭಿವೃದ್ಧಿಯ ಬಗ್ಗೆ ಉತ್ಸುಕರಾಗಿದ್ದೇವೆ. ಇಂದು ಇಟಲಿಯ ಕಂಪನಿ ಮಂಗಳೂರಿನ ಎಸ್ ಈ ಝಡ್ ನಲ್ಲಿ ಹೂಡಿಕೆ ಮಾಡಲು ಮುಂದಾಗಿದೆ ಎಂದರು.
ಮಂಗಳೂರು ಮೂಲದ ನಿತಿಕ್ ರತ್ನಾಕರ್ ಅವರು ಮೀರ್ ಗ್ರೂಪ್‌ನ ಕಾರ್ಯ ನಿರ್ವಾಹಕ ನಿರ್ದೇಶಕರಾಗಿದ್ದು,ಅವರು ಮಂಗಳೂರಿನಲ್ಲಿ ಇಟಲಿ ಕಂಪನಿ ಹೂಡಿಕೆಗೆ ಬಲವಾದ ಬೆಂಬಲ ನೀಡಿದ್ದಾರೆ. ಈ ಮೂಲಕ ೧೫೦೦ ಕೋಟಿ ರೂ. ನಷ್ಟು ಹೂಡಿಕೆಯಾಗಲಿದ್ದು, ಜಿಲ್ಲೆಯಲ್ಲಿ ೫೦೦-೬೦೦ ಮಂದಿಗೆ ಉದ್ಯೋಗಾವಕಾಶ ಲಭಿಸಲಿದೆ ಎಂದರು.
ಇದು ಒಂದು ವಿದೇಶಿ ನೇರ ಹೂಡಿಕೆಯಾಗಿದ್ದು ಮೀರ್ ಗ್ರೂಪ್‌ನ ಮುಖ್ಯಸ್ಥರು ಹಾಗೂ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಶನಿವಾರ ದಿಲ್ಲಿಗೆ ತೆರಳಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಲಿದ್ದಾರೆ. ಮೊದಲ ಹಂತದಲ್ಲಿ ಅವರು ಎಸ್ ಇಝಡ್ ನಲ್ಲಿ ೧೦ ಎಕ್ರೆ ಜಾಗ ಕೇಳಿದ್ದು, ಮುಂದೆ ಹಂತ ಹಂತವಾಗಿ
ಇನ್ನಷ್ಟು ಉದ್ಯಮ ವಿಸ್ತರಣೆ ಮಾಡುವ ನಿರೀಕ್ಷೆಗಳಿವೆ, ಮುಂದಿನ ಎರಡು ವರ್ಷಗಳಲ್ಲಿ ಕಂಪನಿ ಕಾರ್ಯಾರಂಭಿಸುವ ಸಾಧ್ಯತೆಗಳಿವೆ ಎಂದರು.
ಈ ವೇಳೆ ಮಾತನಾಡಿದ ಎಂಎಸ್‌ಇಝಡ್ ಸಿಇಒ ಸೂರ್ಯನಾರಾಯಣ ವಿ ಅವರು, ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ ಮೂಲಸೌಕರ್ಯ, ಮಂಗಳೂರಿನ ಬಂದರು ಸೌಲಭ್ಯ ಮತ್ತಿತರ ಮಹತ್ವವನ್ನು ಅರಿತುಕೊಂಡಿರುವ ಮೀರ್ ಗ್ರೂಪ್ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ನಿರ್ಮಿಸುವ ಸೌಲಭ್ಯವನ್ನು ಸ್ಥಾಪಿಸಲು ಮುಂದಾಗಲಿದೆ ಎಂದರು.

ಮೀರ್ ಗ್ರೂಪ್ ಸಿಇಒ ರಫೇಲೆ ಅವರು ಮಾತನಾಡಿ, ಮಂಗಳೂರು ನಮಗೊಂದು ಮುಖ್ಯವಾದ ಸ್ಥಳವಾಗಿದ್ದು, ಇಲ್ಲಿ ನಮ್ಮ ಉತ್ಪಾದನಾ ಘಟಕ ಸ್ಥಾಪಿಸಲಿದ್ದೇವೆ, ಈ ಮೂಲಕ ಮಧ್ಯಪ್ರಾಚ್ಯ, ಆಫ್ರಿಕನ್ ರಾಷ್ಟ್ರಗಳಿಗೆ ಪರಿಸರ ಸ್ನೇಹಿ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ರಫ್ತು ಮಾಡುವುದು ಸುಲಭವಾಗಲಿದೆ ಎಂದು ನುಡಿದರು.
ಪರಿಸರಕ್ಕೆ ಯಾವುದೇ ತೊಂದರೆಯಾಗದ ಕಾರ್ಬನ್ ನೆಗೆಟಿವ್ ಕಟ್ಟಡಗಳನ್ನು ನಿರ್ಮಿಸುವುದು ನಮ್ಮ ಆದ್ಯತೆ, ಸೋಲಾರ್ ಪ್ಯಾನೆಲ್ ಒಳಗೊಂಡ ಗೋಡೆಗಳು, ಇತರ ಸುಸ್ಥಿರ ಆವಿಷ್ಕಾರಿ ಉತ್ಪನ್ನಗಳು ಇರಲಿವೆ. ನಮಗೆ ೪೫ ಎಕ್ರೆಯಷ್ಟು ಜಾಗ ಒಟ್ಟು ಬೇಕಾಗಬಹುದು, ಒಟ್ಟು ಯೋಜನೆ ಹಂತಗಳಲ್ಲಿ ಅನುಷ್ಠಾನಗೊಳ್ಳಲಿದೆ ಎಂದರು. ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಮಂಗಳೂರು ಮೂಲದ ನಿತಿಕ್ ರತ್ನಾಕರ್ ಅವರು ಮಾತನಾಡಿ, ಮಂಗಳೂರನ್ನು ಹಸಿರು ಇಂಧನದ ಕೇಂದ್ರವನ್ನಾಗಿ ಮಾಡುವ ಗುರಿ ಇದೆ. ಇದು ಕೇವಲ ದೇಶಕ್ಕಷ್ಟೇ ಅಲ್ಲದೆ ಜಾಗತಿಕ ಮಾರುಕಟ್ಟೆಗೂ ನೆರವಾಗಲಿದೆ. ಕಲ್ಲು ,ಇಟ್ಟಿಗೆಯ ಗೋಡೆಗಳ ಪರ್ಯಾಯವಾಗಿ ಸೋಲಾರ್ ಪ್ಯಾನೆಲ್ ಸಹಿತವಾದ, ವಿದ್ಯುತ್ ಉತ್ಪಾದಿಸುವಂತಹ ಗೋಡೆಗಳನ್ನು ಕಂಪನಿ ಸಿದ್ಧಪಡಿಸುತ್ತದೆ ಎಂದು ನುಡಿದರು.
ಮೀರ್ ಕಂಪನಿಯ ಕಾನೂನು ಘಟಕ ಮುಖ್ಯಸ್ಥ ಕ್ಲಾಡಿಯೊ, ಚಂದ್ರುಪರ್ವತ್ ರೆಡ್ಡಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು