10:36 AM Tuesday22 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಕಂಗೆಟ್ಟಿದೆ: ಪಾವಗಡದಲ್ಲಿ ಮುಖ್ಯಮಂತ್ರಿ… ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಕಾಲಮಿತಿಯಲ್ಲಿ ಕಾನೂನು ಬದ್ದವಾಗಿ ನಡೆಯಲಿ: ಮಾಜಿ… ಧರ್ಮಸ್ಥಳ ಪ್ರಕರಣ; ಎಸ್‌ಐಟಿ ರಚನೆ ಸ್ವಾಗತಾರ್ಹ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ Kodagu | ಮಂಜಡ್ಕ ನದಿಯಲ್ಲಿ ಬೈಕ್ ಸಹಿತ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ… ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಆಡಿ-ಟೆಂಪೋ ಡಿಕ್ಕಿ: ಟ್ರಾಫಿಕ್ ಜಾಮ್ Kodagu | ಕುಶಾಲನಗರ: ಆಸ್ತಿಗಾಗಿ ಸ್ನೇಹಿತರ ಜತೆ ಸೇರಿ ತಂದೆಯನ್ನೇ ಕೊಂದ ಪಾಪಿ… SIT Dharmasthala | ಧರ್ಮಸ್ಥಳ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ರಚನೆ:… ಭಾರೀ ಮಳೆ ಮಧ್ಯೆಯೂ ಮುಳ್ಳಯ್ಯನಗಿರಿಗೆ ಪ್ರವಾಸಿಗರ ದಂಡು: ಕಾರು – ಜೀಪ್ ಮುಖಾಮುಖಿ… ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಜಸ್ಟಿಸ್ ವಿಭು ಬಖ್ರು ಅಧಿಕಾರ ಸ್ವೀಕಾರ: ರಾಜ್ಯಪಾಲ… Kodagu |ಪೊನ್ನಂಪೇಟೆ: ವ್ಯಾಘ್ರನ ಸೆರೆಗೆ 75 ಮಂದಿ ಅರಣ್ಯ ಸಿಬ್ಬಂದಿಗಳ ಕೂಂಬಿಂಗ್ ಕಾರ್ಯಾಚರಣೆ…

ಇತ್ತೀಚಿನ ಸುದ್ದಿ

ಮ್ಯಾಮ್ಕೋಸ್ ಸಂಸ್ಥೆಯ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿ: ಕಡ್ತೂರ್ ದಿನೇಶ್

21/11/2024, 18:56

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮ್ಯಾಮ್ಕೋಸ್ ಸಂಸ್ಥೆಯಲ್ಲಿ 33,000 ಷೇರುದಾರರಿದ್ದು ಆಡಳಿತ ಮಂಡಳಿಗೆ 19 ನಿರ್ದೆಶಕರನ್ನು ಆಯ್ಕೆ ಮಾಡಬೇಕಾಗಿರುತ್ತದೆ. ಹಾಲಿ ನಿಯಮದಂತೆ ನಿರ್ದೇಶಕರಿಗೆ 31,000 ಸದಸ್ಯರು ಮತ ಚಲಾಯಿಸುವ ಪದ್ಧತಿ ಜಾರಿಯಲ್ಲಿದ್ದು ಅದೊಂದು ಅವೈಜ್ಞಾನಿಕ ಹಾಗೂ ಪ್ರಯಾಸದಾಯಕ ಕ್ರಮವಾಗಿರುತ್ತದೆ ಎಂದು ಕಡ್ತೂರ್ ದಿನೇಶ್ ಹೇಳಿದರು.
ಗುರುವಾರ ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ತಾಲೂಕುವಾರು ಷೇರುದಾರರ ಅನುಪಾತಕ್ಕೆ ಅನ್ವಯಿಸಿ ನಿರ್ದೇಶಕರ ಸ್ಥಾನ, ಸಂಖ್ಯೆ ನಿಗದಿಪಡಿಸಿ ವಿಭಾಗವಾರು ಆಯ್ಕೆ ಮಾಡಬೇಕಾಗಿರುವುದು ಸಹಜ ಹಾಗೂ ಸುಲಭ ವಿಧಾನವಾಗಿರುತ್ತದೆ. ಗೊಂದಲಗಳಿಲ್ಲದೆ ನಿರ್ದೇಶಕರ ಆಯ್ಕೆ ನಡೆಯಬೇಕಾಗಿದ್ದು, ಬೈಲ ನಿಯಮವನ್ನು ಬದಲಾಯಿಸಲು ಆದೇಶ ಮಾಡುವಂತೆ ಸಾರ್ವಜನಿಕ ಹಿತ ದೃಷ್ಟಿಯಿಂದ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಬಹುಪಾಲು ಸದಸ್ಯರು ನಿರ್ದೇಶಕರ ಚುನಾವಣೆಯ ನಿಯಮಗಳನ್ನುಸರಳಿಕರಣಗೊಳಿಸುವಂತೆ ಅಗ್ರಹಿಸಿರುತ್ತಾರೆ. ಸಹಕಾರಿ ಭಾರತಿ ಎಂಬ ಹೆಸರಿನ ರಾಜಕೀಯ ಸಂಘಟನೆಯೊಂದರ ಪರವಾಗಿ ಈ ರೀತಿ ನಿಯಮಾವಳಿಗಳನ್ನು ರಚಿಸಿಕೊಳ್ಳಲಾಗಿದ್ದು, ಸಂಸ್ಥೆಯ ಹಾಗೂ ಷೇರುದಾರರ ಹಿತಾಸಕ್ತಿಗೆ ವಿರೋಧವಾಗಿರುತ್ತದೆ. ಮ್ಯಾಮ್ಕೋಸ್ ಸಂಸ್ಥೆಯ ರೈತ ವಿರೋಧಿ ನಿರ್ಧಾರಗಳಿಂದ ಅಡಿಕೆ ಬೆಳಗಾರರಿಗೆ ಅನೇಕ ಕಷ್ಟ ನಷ್ಟಗಳು ಉಂಟಾಗಿದ್ದು, ಇತ್ತೀಚೆಗೆ ರೈತರುಗಳು ಸಂಸ್ಥೆಯಲ್ಲಿ ಮಾರಾಟಕ್ಕೆ ಇಟ್ಟಿರುವ ಸುಮಾರು 20,000 ಮೂಟೆ ಅಡಿಕೆಗಳನ್ನು ಸಂಸ್ಥೆಯು ಸರಿಯಾಗಿ ವ್ಯಾಪಾರ ವಹಿವಾಟು ನಡೆಸದ ಕಾರಣ ಹಿಂದಕ್ಕೆ ಪಡೆದಿರುತ್ತಾರೆ. ಇದರಲ್ಲಿ ತೀರ್ಥಹಳ್ಳಿ ಶಾಖೆಯೊಂದರಲ್ಲಿ 1,450 ಅಡಿಕೆ ಮೂಟೆಗಳನ್ನು ರೈತರು ವ್ಯಾಪಾರದಿಂದ ಹಿಂದಕ್ಕೆ ಪಡೆದಿರುತ್ತಾರೆ.
ಮ್ಯಾಮ್ಕೋಸ್ ಆಡಳಿತ ಮಂಡಳಿಯ ಸಮರ್ಪಕ ಆಡಳಿತವಿಲ್ಲದೆ ಈ ಬಗ್ಗೆ ವ್ಯಾಪಕ ಆಕ್ರೋಶಗಳು, ಸಾಮಾಜಿಕ ಜಾಲತಾಣಗಳು ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು, ಸದರಿ ಸಂಸ್ಥೆಯು ತನ್ನ ನೈಜ
ಉದ್ದೇಶದಿಂದ ವಿಮುಖ ದಿಕ್ಕಿಗೆ ಸಾಗುತ್ತಿದೆ ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ. ಆದ್ದರಿಂದ ತಾವುಗಳು ನಮ್ಮ ಮನವಿಯನ್ನು ಪರಿಶೀಲಿಸಿ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘ ನಿ, ಶಿವಮೊಗ್ಗ ಸಂಸ್ಥೆಯು ಹಾದಿ ತಪ್ಪದಂತೆ ಸರ್ಕಾರ ಗಮನಹರಿಸಬೇಕಾಗಿರುವುದರಿಂದ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಮ್ರಪಾಲಿ ಸುರೇಶ್, ಆದರ್ಶ ಹುಂಚದಕಟ್ಟೆ, ಕೆಸ್ತೂರು ಮಂಜುನಾಥ್ ಸೇರಿ ಹಲವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು