ಇತ್ತೀಚಿನ ಸುದ್ದಿ
ಮೂವರು ಯುವತಿಯರ ಸಾವಿಗೆ ಕಾರಣವಾದ ಸೋಮೇಶ್ವರ ಬೀಚ್ ರೆಸಾಟ್೯ಗೆ ಬೀಗಮುದ್ರೆ
17/11/2024, 22:46

ಮಂಗಳೂರು(reporterkarnataka.com): ಮೂವರು ಯುವತಿಯರು ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ ಸೋಮೇಶ್ವರದ ವಾಝ್ಕೊ ಬೀಚ್ ರೆಸಾಟ್೯ಗೆ
ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.
ಈ ರೆಸಾಟ್೯ನ ಟ್ರೇಡ್ ಲೈಸನ್ಸ್ ಮತ್ತು ಟೂರಿಸಂ ಪರವಾನಿಗೆಯನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಮಂಗಳೂರು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
ವಾಝ್ಕೊ ಬೀಚ್ ರೆಸಾಟ್೯ನ ಈಜುಕೊಳದಲ್ಲಿ ಮುಳುಗಿ ಇಂದು ಬೆಳಗ್ಗೆ ಮೈಸೂರು ಮೂಲದ ಮೂವರು ಯುವತಿಯರು ಸಾವನ್ನಪ್ಪಿದ್ದರು.