10:59 AM Monday10 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ನಿಡುವಾಳೆ ಗ್ರಾಪಂ ಉಪ ಚುನಾವಣೆ: ಒಂದು ಸ್ಥಾನಕ್ಕೆ ಸರ್ವಪಕ್ಷದ ಸಹಕಾರದಿಂದ ಕಮಲಮ್ಮ ಆಯ್ಕೆ

16/11/2024, 18:58

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ನಿಡುವಾಳೆ ಗ್ರಾಮ ಪಂಚಾಯಿತಿಯ ಒಂದು ಸದಸ್ಯರ ಸ್ಥಾನಕ್ಕೆ ನಡೆಯಬೇಕಾಗಿದ್ದ ಉಪಚುನಾವಣೆಗೆ ಸರ್ವ ಪಕ್ಷಗಳಾದ ಸಹಕಾರದಿಂದ ಕಮಲಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ‌.

ಬಿಜೆಪಿ,ಕಾಂಗ್ರೆಸ್, ಸಿಪಿಐ ಜೆಡಿಎಸ್ ಹಾಗೂ ನಿಡುವಾಳೆ ಗ್ರಾಮಸ್ಥರ ಸಹಕಾರದೊಂದಿಗೆ ಕಮಲಮ್ಮ ಅವರ ಅವಿರೋಧವಾಗಿ ಆಯ್ಕೆ ನಡೆದಿದೆ. ಆಡಳಿತಾವಧಿ ಕೇವಲ ಇನ್ನೂ ಒಂದು ವರ್ಷ ಮಾತ್ರ ಇರುವುದರಿಂದ ಸರ್ವ ಪಕ್ಷದವರ ಸಲಹೆ ಹಾಗೂ ಮಾರ್ಗದರ್ಶನದಂತೆ ಕಮಲಮ್ಮ
ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಬಿಜೆಪಿ ಬಾಳೂರು ಹೋಬಳಿ ಅಧ್ಯಕ್ಷ ಬಿ.ಬಿ. ಮಂಜುನಾಥ್, ಸಿಪಿಐ ತಾಲೂಕು ಕಾರ್ಯದರ್ಶಿ ರಮೇಶ್ ಕೆಳಗೂರು, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಶ್ರೀನಾಥ್ , ಜೆಡಿಎಸ್ ಯುವ ಮುಖಂಡ ಅಭಯ್ ಮರ್ಕಲ್ ಹಾಗೂ ಸ್ಥಳೀಯರಾದ ಸುಧಾಕರ್ ನಿಡುವಾಳೆ , ಎಂ.ಎಲ್. ವಿಜೇಂದ್ರ ಮರ್ಕಲ್, ಬ್ಯಾಂಡ್ ರವಿ ,ಚಂದ್ರಣ್ಣ ಎಚ್.ಆರ್, ಸೀನ , ಯಶ್ವಂತ್, ದಿಲೀಪ್, ಪ್ರದೀಪ್ ಕಾವಲನ್, ಚೇತನ್ ಶರ್ಮ , ವಸಂತ ಜಂಗಲ್,
ಸಂಜಯ್, ಸಂಜೀವ ಉರ್ವಿನ್ ಖಾನ್, ದಿನೇಶ್ ಉರ್ವಿನ್ ಖಾನ್ ,ತನಿಯಪ್ಪ, ಅಶೋಕ್, ಸ್ವಾಮಿ ಮರ್ಕಲ್, ಸಾಗರ್ ಚಂದ್ರು ಆಟೋ ಕೂವೆ ,ಪ್ರಮೋದ್ ,ಮಹೇಶ್ ಬಾಳೂರು, ಲಾರೆನ್ಸ್ ಬಾಳೂರು, ಸಂದೀಪ್ ಬಾಳೂರು, ಪರೀಕ್ಷಿತ್ ಜಾವಳಿ , ಚಂದ್ರಶೇಖರ್ ನಿಡುವಾಳೆ,ಸೀನ ಶಂಕರ ಹೇಮಾವತಿ, ವಿಜಯ್ ಕಲ್ಲಕ್ಕಿ, ರಾಜಕುಮಾರ್ ಕಲ್ಲಕ್ಕಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗುಲಾಬಿ ಹಾಗೂ ನವೀನ್ ಹಾವಳಿ, ಸಚಿನ್ ಮರ್ಕಲ್, ಕಮಲಮ್ಮ ಅವರ ಮಕ್ಕಳಾದ ಆನಂದ, ಉಮೇಶ್, ಅವರ ಮನೆಯವರಾದ ನಾರಾಯಣ ಅವರು ಸಹ ಜೊತೆಯಲ್ಲಿ ಇದ್ದರು. ಚುನಾವಣೆ ಅಧಿಕಾರಿಗಳಾದ ಶಿವರಾಂ, ಗ್ರಾಮ ಪಂಚಾಯತಿ ಪಿಡಿಒ ಮಹೇಶ್, ಬಾಳೂರು ಆರಕ್ಷಕ ಠಾಣ ಸಿಬ್ಬಂದಿಗಳಾದ ನಂದೀಶ್ ಹಾಗೂ ರಾಘವೇಂದ್ರ ಜನ್ನಾಪುರ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು