11:20 AM Saturday16 - November 2024
ಬ್ರೇಕಿಂಗ್ ನ್ಯೂಸ್
ಚಾರ್ಮಾಡಿ ಘಾಟ್‌ ರಸ್ತೆಗೆ 343.74 ಕೋಟಿ ಬಿಡುಗಡೆ: ಅಭಿವೃದ್ಧಿ ಹೆಸರಿನಲ್ಲಿ 10 ವರ್ಷ… ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯ: ನ. 17ರಂದು ಚಿಕ್ಕಜಾತ್ರಾ ಮಹೋತ್ಸವ, 19ರಂದು ತೆಪ್ಪೋತ್ಸವ ತೈವಾನ್ ಎಕ್ಸಲೆನ್ಸ್ ತಂತ್ರಜ್ಞಾನ, ಸಂಸ್ಕೃತಿ ಮತ್ತು ನಾವೀನ್ಯಗಳ ರೋಮಾಂಚನಕಾರಿ ಪ್ರದರ್ಶಕ್ಕೆ ಚಾಲನೆ: ಬಾಲಿವುಡ್… ಆರಗ ಜ್ಞಾನೇಂದ್ರ ಶಾಸಕ ಸ್ಥಾನವನ್ನು ಗಿರವಿ ಇಟ್ಟಿದ್ದಾರಾ?; ಅವರನ್ನು ಆಯ್ಕೆ ಮಾಡಿದ್ದೆ ನಮ್ಮ… ಚಿಕ್ಕಮಗಳೂರು: ನಕ್ಸಲ್ ಚಟುವಟಿಕೆ ಪ್ರಕರಣ; ಇಬ್ಬರು ಶಂಕಿತ ನಕ್ಸಲರು ಸೇರಿ 4 ಮಂದಿ… ಬೆಂಗಳೂರು ಸೈಂಟ್ ಜೋಸೆಫ್ ವಿವಿಯ ಫ್ಯಾಕಲ್ಟಿ ಡೆವಲಪ್ ಮೆಂಟ್ ಪ್ರೋಗ್ರಾಂ: ಹೆಲ್ತ್ ಕೇರ್… ಶ್ರೀನಿವಾಸಪುರ ತಾಲೂಕು ವಕೀಲರಿಂದ ಅನಿರ್ದಿಷ್ಟ ಪ್ರತಿಭಟನೆ: ನ್ಯಾಯಾಲಯ ಕಲಾಪಕ್ಕೆ ಬಹಿಷ್ಕಾರ ಪವಿತ್ರ ಯಾತ್ರಾ ಸ್ಥಳ ಸುತ್ತೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ರಂಗಸ್ವಾಮಿ ಅವಿರೋಧ… ತುಮಕೂರಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ-2024: ಸಿಎಂ ಸಿದ್ದರಾಮಯ್ಯ ಲಾಂಛನ ಅನಾವರಣ ಮೂಡಿಗೆರೆ: ಮದುವೆ ಸಮಾರಂಭದಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನ ಎಗರಿಸಿದ ಖದೀಮರು

ಇತ್ತೀಚಿನ ಸುದ್ದಿ

ಚಾರ್ಮಾಡಿ ಘಾಟ್‌ ರಸ್ತೆಗೆ 343.74 ಕೋಟಿ ಬಿಡುಗಡೆ: ಅಭಿವೃದ್ಧಿ ಹೆಸರಿನಲ್ಲಿ 10 ವರ್ಷ ರಸ್ತೆ ಮುಚ್ಚುವ ಹುನ್ನಾರ?; ಚರ್ಚೆ ಆರಂಭ

15/11/2024, 22:18

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮಂಗಳೂರು- ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಒಕ್ಕೂಟ ಸರ್ಕಾರ 343.74 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವ ಹೇಳಿಕೆ ಬೆನ್ನಲ್ಲೇ ಗಂಭೀರ ಚರ್ಚೆಗಳು ಆರಂಭವಾಗಿವೆ.

ಹಣ ಬಿಡುಗಡೆ ಬಗ್ಗೆ ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಂಗಳೂರಿನಿಂದ ಮೂಡಿಗೆರೆ – ತುಮಕೂರಿಗೆ ಸಂಪರ್ಕಿಸುವ ರ ಚಾರ್ಮಾಡಿ ಘಾಟಿಯಲ್ಲಿ 75 ಕಿ.ಮೀ ನಿಂದ 86.20 ಕಿ.ಮೀ.ದ್ವಿಪಥವಾಗಿ ಅಗಲೀಕರಣಗೊಳ್ಳಲಿದೆ ಎಂದಿದ್ದಾರೆ.
ರಾಜ್ಯದ ಪ್ರಮುಖ ಹೆದ್ದಾರಿ ಚಾರ್ಮಾಡಿ ಘಾಟ್‌ನ್ನು ಮೇಲ್ದರ್ಜೆಗೇರಿಸುವುದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲದ ಜೊತೆಗೆ ಸುಗಮ ಸರಕು ಸಾಗಣೆಯೊಂದಿಗೆ ಈ ಭಾಗದ ವ್ಯಾಪಾರ-ವಹಿವಾಟು ಕೂಡ ವೃದ್ಧಿಸಲಿದೆ ಎನ್ನುವುದು ಸಂಸದರ ಅಭಿಪ್ರಾಯ.
ಮತ್ತೊಂದು ದುರಂತ ? :ಚಾರ್ಮಾಡಿ ರಸ್ತೆಗೆ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿರುವುದು ಸಂತೋಷ, ಆದರೆ ಸರಿಯಾದ ಕ್ರಿಯಾ ಯೋಜನೆ ಇಲ್ಲದೆ ರಸ್ತೆ ಮಾಡಲು ಹೊರಟಿರೋದು ಮತ್ತೊಂದು ಶಿರಾಡಿ ಘಾಟ್ ದುರಂತ ಆಗುವುದಿಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ.
ಡಬಲ್ ರೋಡ್ ಮಾಡಲು ಜಾಗಾನೇ ಇಲ್ಲ ,ಸ್ವಲ್ಪ ಜಾಸ್ತಿ ಹಣ ಆದರೂ ಪರವಾಗಿಲ್ಲ ಉತ್ತಮವಾದ ಸುರಂಗ ಮಾರ್ಗನೋ ಅಥವಾ ಫ್ಲೈ ಓವರ್ ರೀತಿಯ ಕ್ರಿಯಾ ಯೋಜನೆ ಮಾಡಿ, ಆಗು ಹೋಗುಗಳ ಬಗ್ಗೆ ಚರ್ಚಿಸಿ ಮತ್ತಷ್ಟು ಹಣ ಸೇರಿಸಿ ಉತ್ತಮವಾದ ರಸ್ತೆ ನಿರ್ಮಿಸಿ ಎನ್ನುವ ಸಲಹೆ ಚಾರ್ಮಾಡಿ ರಸ್ತೆ ಉಳಿಸಿ ಹೋರಾಟ ಸಮಿತಿ ಸಂಚಾಲಕ ಸಂಜಯ್ ಕೊಟ್ಟಿಗೆಹಾರ ರವರದು.
ಅಭಿವೃದ್ಧಿಯ ಹೆಸರಲ್ಲಿ ಸುಮಾರು 10 ವರ್ಷಗಳ ಕಾಲ ರಸ್ತೆ ಮುಚ್ಚುವ ಹುನ್ನಾರ ನಡೆದಿದೆ, 3 ವಿಭಾಗದ ಟೆಂಡರ್ ಆಗಿದ್ದು ಒಂದು ವಿಭಾಗದ ರಸ್ತೆ ಮಾಡಲು 5 ವರ್ಷ ಬೇಕು, ಹೀಗಾದರೆ ಕೊಟ್ಟಿಗೆಹಾರ ಹತ್ತು ವರ್ಷಗಳಲ್ಲಿ ನಿರ್ನಾಮವಾಗಲಿದೆ ಎನ್ನುವ ಆತಂಕ ಹೊರ ಹಾಕಿ ನಮಗೇನು ಡಬಲ್ ರಸ್ತೆ ಬೇಕಾಗಿಲ್ಲ,ಗುಂಡಿ ಮುಚ್ಚಿದರೆ ಸಾಕು ಎಂದಿದ್ದಾರೆ.
ಡಬಲ್ ರಸ್ತೆ ಹೆಸರಿನಲ್ಲಿ ವಿದ್ಯಾರ್ಥಿಗಳ ಹಾಗೂ ನಾವು ನಂಬಿರುವ ದಕ್ಷಿಣ ಕನ್ನಡ ಆಸ್ಪತ್ರೆಗೆ ಹೋಗಲು ಬಹಳ ತೊಂದರೆ ಆಗಲಿದೆ , ಎಲ್ಲರೂ ಕೈ ಜೋಡಿಸಿದರೆ ಒಂದು ದೊಡ್ಡ ಮಟ್ಟದ ಹೋರಾಟ ಮಾಡೋಣ ಎಂದು ಕೆಲವರು ಪ್ರತಿಕ್ರಿಯಿಸಿದ್ದು ಹೋರಾಟದ ರೂಪುರೇಷೆ ನಿರ್ಧರಿಸಲು ಸಭೆಯನ್ನು ಕರೆಯಲಾಗಿದೆ

ಇತ್ತೀಚಿನ ಸುದ್ದಿ

ಜಾಹೀರಾತು