9:35 PM Thursday14 - November 2024
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಸೈಂಟ್ ಜೋಸೆಫ್ ವಿವಿಯ ಫ್ಯಾಕಲ್ಟಿ ಡೆವಲಪ್ ಮೆಂಟ್ ಪ್ರೋಗ್ರಾಂ: ಹೆಲ್ತ್ ಕೇರ್… ಶ್ರೀನಿವಾಸಪುರ ತಾಲೂಕು ವಕೀಲರಿಂದ ಅನಿರ್ದಿಷ್ಟ ಪ್ರತಿಭಟನೆ: ನ್ಯಾಯಾಲಯ ಕಲಾಪಕ್ಕೆ ಬಹಿಷ್ಕಾರ ಪವಿತ್ರ ಯಾತ್ರಾ ಸ್ಥಳ ಸುತ್ತೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ರಂಗಸ್ವಾಮಿ ಅವಿರೋಧ… ತುಮಕೂರಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ-2024: ಸಿಎಂ ಸಿದ್ದರಾಮಯ್ಯ ಲಾಂಛನ ಅನಾವರಣ ಮೂಡಿಗೆರೆ: ಮದುವೆ ಸಮಾರಂಭದಲ್ಲಿ 3 ಲಕ್ಷ ರೂ. ಮೌಲ್ಯದ ಚಿನ್ನ ಎಗರಿಸಿದ ಖದೀಮರು ಸಂಡೂರು ವಿಧಾನಸಭೆ ಉಪ ಚುನಾವಣೆ: ಶೇ.76.24ರಷ್ಟು ಮತದಾನ ಕಾಫಿನಾಡಿನಲ್ಲಿ ಮತ್ತೆ ನಕ್ಸಲ್ ಚಟುವಟಿಕೆ?: ನಕ್ಸಲ್ ನಿಗ್ರಹ ಪಡೆಯಿಂದ ಕೂಂಬಿಂಗ್ ಆರಂಭ ಗಣಿ ಮಾಫಿಯಾ, ಹಣದ ಶಕ್ತಿ, ಸುಳ್ಳು ಪ್ರಚಾರದಿಂದ ರಕ್ಷಿಸಲು ಮತ ಚಲಾಯಿಸಿ: ಗೋಪಿನಾಥ್… ಶ್ವಾನವನ್ನು ಬೆನ್ನಟ್ಟಿ ಬಾವಿಗೆ ಬಿದ್ದ 10ರ ಹರೆಯದ ಚಿರತೆ; ಅರಣ್ಯ ಇಲಾಖೆಯಿಂದ ರಕ್ಷಣೆ ಎಜ್ಯುಟೆಕ್ ಸ್ಟಾರ್ಟ್ ಅಪ್ ಭಾಂಜು ವಿಶ್ವಾದ್ಯಂತ ವಿಸ್ತರಿಸಲು ಸರಣಿ ಬಿ ನಿಧಿಯಡಿ 16.5…

ಇತ್ತೀಚಿನ ಸುದ್ದಿ

‘ಕಾಸ್ಕ್’ ಸಂಸ್ಥೆಯಿಂದ ಮಂಗಳೂರು ಫಳ್ನೀರ್ ನ ಮದರ್ ತೆರೇಸಾ ಹೋಮ್ ನಲ್ಲಿ ಆರೋಗ್ಯ ತಪಾಸಣಾ ಶಿಬಿರ

13/11/2024, 15:30

ಮಂಗಳೂರು(reporterkarnataka.com): ಕ್ಯಾಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ‘ಕಾಸ್ಕ್’ ಸಂಸ್ಥೆಯಿಂದ ಆರೋಗ್ಯ ತಪಾಸಣಾ ಶಿಬಿರವು ನವೆಂಬರ್ 10ರಂದು ಜರಗಿತು.
ಈ ಕಾರ್ಯಕ್ರಮವು ನಗರದ ಫಳ್ನೀರ್’ನಲ್ಲಿರುವ ಮದರ್ ತೆರೇಸಾ ಹೋಂನಲ್ಲಿ, ಕಣಚೂರು ಆಸ್ಪತ್ರೆಯ ಸಹಯೋಗದಲ್ಲಿ ನಡೆಯಿತು.
‘ಕಾಸ್ಕ್’ ಉಪಾಧ್ಯಕ್ಷರಾದ ಡಾ. ರೋಹನ್ ಮೋನಿಸ್ ಮತ್ತು ಮಾರ್ಜೋರಿ ಟೆಕ್ಸೇರಾ ಶಿಬಿರದ ನೇತೃತ್ವ ವಹಿಸಿದ್ದರು.
ಕಣಚೂರು ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರು ಮತ್ತು ಸಿಬ್ಬಂದಿಯ ತಂಡ 48 ಹಿರಿಯ ನಿವಾಸಿಗಳು ಮತ್ತು 13 ಜನ ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ ಮತ್ತು ಸಮಾಲೋಚನೆಗಳನ್ನು ನೀಡಿತು. ಇದರ ಜೊತೆಗೆ ಶಿಬಿರದಲ್ಲಿನ ಎಲ್ಲಾ ಶಿಬಿರಾರ್ಥಿಗಳಿಗೆ ಉಚಿತ ಔಷಧಗಳನ್ನು ನೀಡಲಾಯಿತು. ನಿವಾಸಿಗಳ ಪೈಕಿ ಕೆಲವರಿಗೆ ಕಣ್ಣಿನ ಪೊರೆಯ ಸಮಸ್ಯೆಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಗುರುತಿಸಲಾಯಿತು.
ಕಣಚೂರು ಮೆಡಿಕಲ್ ಕಾಲೇಜಿನ ನಿರ್ದೇಶಕ ಅಬ್ದುಲ್ ರಹಮಾನ್, ‘ಕಾಸ್ಕ್’ ಅಧ್ಯಕ್ಷ ರೋನಾಲ್ಡ್ ಗೋಮ್ಸ್, ಮದರ್ ತೆರೇಸಾ ಹೋಮ್, ಫಳ್ನೀರ್‌ನ ಮದರ್ ಸುಪೀರಿಯರ್ ಸಿಸ್ಟರ್ ಯೇಸು ತೆರೇಸಾ ಸೇರಿದಂತೆ ಗಣ್ಯ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
‘ಕಾಸ್ಕ್’ ಕೋಶಾಧಿಕಾರಿ ರೊನಾಲ್ಡ್ ಮೆಂಡೊನ್ಸಾ, ಕಾರ್ಯದರ್ಶಿ ಪೀಟರ್ ಪಿಂಟೊ, ಸಮಿತಿ ಸದಸ್ಯರಾದ ಪ್ರೊಫೆಸರ್ ಜೆರಾರ್ಡ್ ಡಿ’ಸೋಜಾ, ಇಯಾನ್ ಲೋಬೊ, ಮಾರ್ಸೆಲ್ ಮೊಂತೇರೊ, ಡಾ. ಹೆನ್ರಿಕ್ ಲೋಬೊ, ಡಾ. ಎರಿಕ್ ಲೋಬೊ, ಸದಸ್ಯರಾದ ಅನಿತಾ ಗೋಮ್ಸ್ ಮತ್ತು ನೀನಾ ಮೊಂತೇರೊ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು