11:37 PM Thursday10 - April 2025
ಬ್ರೇಕಿಂಗ್ ನ್ಯೂಸ್
ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:… Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್… HDK | ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ಸರಕಾರದಿಂದ ದ್ವಿಮುಖ ನೀತಿ: ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

ಕುಲಶೇಖರದ ಹೋಲಿ ಕ್ರಾಸ್ ಚರ್ಚಿನ ಸಭಾಂಗಣದಲ್ಲಿ 21 ಆಯೋಗದ ಸದಸ್ಯರಿಗೆ ಕಾರ್ಯಾಗಾರ

24/10/2024, 14:55

ಮಂಗಳೂರು(reporterkarnataka.com):ಮಂಗಳೂರು ಧರ್ಮಪ್ರಾಂತ್ಯದ ಸಿಟಿ ವಲಯದ ವ್ಯಾಪ್ತಿಯಲ್ಲಿ ಬರುವ ಕುಲಶೇಖರ, ಬೊಂದೇಲ್, ನೀರುಮಾರ್ಗ, ಪಾಲ್ದನೆ, ಬಜಾಲ್, ಕೆಲರೈ, ದೇರೆಬೈಲ್, ಪೆರ್ಮಯ್, ವಾಮಂಜೂರು, ಅಂಜೆಲೊರ್, ಶಕ್ತನಗರ ಇದರ 21 ಆಯೋಗದ ಸದಸ್ಯರಿಗೆ ಕಾರ್ಯಾಗಾರವನ್ನು ನಗರದ ಕುಲಶೇಖರದ ಹೋಲಿ ಕ್ರಾಸ್ ಚರ್ಚಿನ ಸಭಾಂಗಣದಲ್ಲಿ ಏರ್ಪಡಿಸಲಾಗಿತು.
ಈ ಕಾರ್ಯಾಗಾರದಲ್ಲಿ ಚರ್ಚಿನ 21 ಆಯೋಗದ ಸದಸ್ಯರಿಗೆ ಮಾಹಿತಿ, ವಿಚಾರ ವಿನಿಮಯ, ಸಂದೇಹಗಳಿಗೆ ಉತ್ತರ ನೀಡುವ ಮೂಲಕ ಸಹಕಾರಿಯಾಯಿತು. ಕಾರ್ಯಾಗಾರದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವುಲ್ ಸಲ್ಡಾನ ಅವರು ಕಾರ್ಯಾಗಾರದ ಉದ್ಘಾಟಣೆ ಮಾಡಿ ಮಾಹಿತಿ ನೀಡಿದರು. ಮುಂದೆ ಸುಮಾರು 2 ಗಂಟೆಗಳ ಕಾಲ ವಂದನೀಯ ಪಾ| ಪಾವೊಸ್ತಿನ್ ಲೋಬೊ ಅವರು ಆಯೋಗದ ಬಗ್ಗೆ ಸವಿಸ್ತಾರವಾದ ವಿವರ ನೀಡಿದರು.
ವೇದಿಕೆಯಲ್ಲಿ ಸಿಟಿ ವಲಯದ ವಿಕಾರ್ ವಾರ್ ವಂ| ಪಾ| ಜೇಮ್ಸ್ ಡಿ’ಸೋಜ ಅವರು ಕಾರ್ಯಗಾರದ ಮಹತ್ವ ವಿವರಿಸಿ ಸ್ವಾಗತಿಸಿದರು. ವಂ| ಪಾ| ವಿಜಯ್ ಮೊಂತೆರೋ ಅವರು ಪ್ರಾರ್ಥನಾ ವಿದಿ ನೆರವೇರಿಸಿದರು.
ವ| ಪಾ| ಕ್ಲಾನೀ ಡಿ’ಸೋಜಾ, ವಂ| ಪಾ| ಆಲ್ವಿನ್ ಡಿ’ಸೋಜ, ಕೊರ್ಡೆಲ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ| ಕ್ಲಿಫರ್ಡ್ ಫೆರ್ನಾಂಡಿಸ್, ಧರ್ಮಪ್ರಾಂತ್ಯದ ಸಾರ್ವಜನಿಕ ಅಧಿಕಾರಿ ರೋಯ್ ಕ್ಯಾಸ್ಟಲೀನೊ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಎಲ್ಲಾ ಚರ್ಚುಗಳ ಧರ್ಮಗುರುಗಳು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಆಯೋಗದ ಸಂಚಾಲಕರು, ಧರ್ಮ ಭಗಿನಿಯರು ಭಾಗವಹಿಸಿದ್ದರು.
ಆಂಜೆಲೋರ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ| ಫೆಡ್ರಿಕ್ ಮೊಂತೇರೊ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಂತೋಷ್ ಡಿ’ಕೋಸ್ತಾ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು