12:12 PM Thursday28 - November 2024
ಬ್ರೇಕಿಂಗ್ ನ್ಯೂಸ್
ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ…

ಇತ್ತೀಚಿನ ಸುದ್ದಿ

ಅ.19-21: ಎಸಿಪಿಐ ಮತ್ತು ಮಂಗಳೂರು ವಿವಿ ಕ್ರೈಸ್ತ ವಿದ್ಯಾಪೀಠದಿಂದ 47ನೇ ವಾರ್ಷಿಕ ಸಂಶೋಧನಾ ಸಮ್ಮೇಳನ

15/10/2024, 12:48

ಮಂಗಳೂರು(reporterkarmaka.com): ಭಾರತೀಯ ಕ್ರೈಸ್ತ ತತ್ತ್ವಶಾಸ್ತ್ರೀಯ ಚಿಂತಕರ ಒಕ್ಕೂಟ (ಎಸಿಪಿಐ) ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ವಿದ್ಯಾಪೀಠದ(ಸಿಐಸಿ) ಸಹಯೋಗದಲ್ಲಿ ಅಕ್ಟೋಬರ್ 19-21ರವರೆಗೆ ನಗರದ ಜೆಪ್ಪುಸಂತ ಜೋಸೆಫರ ಇಂಟರ್ ಡಯಾಸಿಸನ್ಸೆಮಿನರಿಯಲ್ಲಿ 47ನೇ ವಾರ್ಷಿಕ ತತ್ವಶಾಸ್ತ್ರ ಸಂಶೋಧನಾ ಸಮ್ಮೇಳನವನ್ನು ಆಯೋಜಿಸಲಾಗಿದೆ. *ಸಮ್ಮೇಳನದ ವಿಷಯ:* “ಭರವಸೆ: ಬಹು ಆಯಾಮಗಳೊಂದಿಗೆ ತತ್ತ್ವಶಾಸ್ತ್ರೀಯ ವಿಶ್ಲೇಷಣೆ.” ಈ ವಿಷಯವು 2025ರಲಿ ್ಲಪೋಪ್ಫ್ರಾನ್ಸಿಸ್ಘೋಷಿಸಿರುವ ಜ್ಯೂಬಿಲಿ ವರ್ಷದ “ಭರವಸೆಯ ಯಾತ್ರಿಕರು”ಎಂಬ ಧ್ಯೇಯ ವಾಕ್ಯಕ್ಕೆ ಪೂರಕವಾಗಿದೆ.
ಜಗತ್ತಿನಲ್ಲಿನ ಸಂಘರ್ಷಗಳು, ಅಸಹಿಷ್ಣುತೆ, ಪರಿಸರ ಮಾಲಿನ್ಯ ಹಾಗೂ ಹವಾಮಾನ ವೈಪರೀತ್ಯ ಮತ್ತು ಇತರ ಜಾಗತಿಕ ಸವಾಲುಗಳಿಂದನಲುಗಿದ ಇಂದಿನ ದಿನಗಳಲ್ಲಿ ಈ ಸಮ್ಮೇಳನವು ಭರವಸೆಯ ತಾತ್ತ್ವಿಕ ಮೌಲ್ಯಗಳನ್ನು ಮರುಪರಿಶೀಲಿಸಿ ಭವಿಷ್ಯದ ಉತ್ತಮ ಸಮಾಜವನ್ನು ಕಟ್ಟುವ ಕುರಿತು ಚಿಂತನೆ ನಡೆಸಲಿದೆ. ಮೂರು ದಿನಗಳಲ್ಲಿ ಭರವಸೆಯ ವಿವಿಧ ಆಯಾಮಗಳನ್ನು ಅವಲೋಕಿಸುವ 28 ಸಂಶೋಧನಾ ಪ್ರಬಂಧಗಳು ಭರವಸೆಯ ಸಮಾಜವನ್ನು ಕಟ್ಟಲು ಪ್ರೇರಣೆ ನೀಡಲಿವೆ.
1976ರಲ್ಲಿ ಡಾ. ರಿಚರ್ಡ್ ದೆ ಸ್ಮೆಟ್ ಮತ್ತು ಡಾ. ಆಲ್ಬರ್ಟ್ ನಂಬಿಯ ಪರಂಬಿಲ್‌ರವರಿಂದ ಸ್ಥಾಪಿತಗೊಂಡ ಎಸಿಪಿಐ, ಭಾರತೀಯ ಕ್ರೈಸ್ತತತ್ತ್ವಶಾಸ್ತ್ರೀಯ ಚಿಂತನೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಪ್ರತಿಷ್ಠಿತ ಒಕ್ಕೂಟವಾಗಿದೆ. 1987ರಲ್ಲಿ ಬಿಷಪ್ಬಾಸಿಲ್ಡಿ ಸೋಜಾ ಅವರಿಂದ ಸ್ಥಾಪಿಸಲ್ಪಟ್ಟ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತವಿದ್ಯಾಪೀಠವು ತತ್ತ್ವಶಾಸ್ತ್ರ, ನೀತಿಶಾಸ್ತ್ರ, ಅಂತರ್‌ಧರ್ಮೀಯ ಅಧ್ಯಯನಗಳನ್ನು ಉತ್ತೇಜಿಸುತ್ತಿದೆ ಮತ್ತು ಸಮಕಾಲೀನ ಸಾಮಾಜಿಕ ಮತು ಪರಿಸರ ಸಂಬಂಧಿತ ಸಮಸ್ಯೆಗಳನ್ನೂ ಚರ್ಚಿಸುತ್ತದೆ. ಸಮ್ಮೇಳನದಲ್ಲಿ ಈ ಕೆಳಗಿನ ಪ್ರಮುಖ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ:
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನ್ಹಾ,
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ,
ಮಂಗಳೂರು ವಿಶ್ವವಿದ್ಯಾನಿಲಯದ ಆಂಗ್ಲವಿಭಾಗದ ಮುಖ್ಯಸ್ಥೆ ಡಾ. ಪರಿಣಿತಾ
ಎಸಿಪಿಐ ಅಧ್ಯಕ್ಷರು, ರೆ.ವ. ಡಾ. ಜಾನ್ಪೀಟರ್ವಲ್ಲಭದಾಸ್,
ಸಂತ ಜೋಸೆಫರ ಇಂಟರ್ ಡಯಾಸಿಸ್ ಸೆಮಿನರಿಯ ರೆಕ್ಟರ್ ರೆವ. ಡಾ. ರೊನಾಲ್ಡ್ಸೆರಾವೊ
ಇವರಲ್ಲದೆ ಈಸಮ್ಮೇಳನದಲ್ಲಿ ದೇಶಾದ್ಯಂತ 100ಕ್ಕೂ ಹೆಚ್ಚು ವಿದ್ವಾಂಸರು, ತಜ್ಞರು, ಚಿಂತಕರು, ಶಿಕ್ಷಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಆಸಕ್ತರು ಉದ್ಘಾಟನಾ ಸಮಾರಂಭದಲ್ಲಿ ಹಾಗೂ ಡಾ. ಪರಿಣಿತಾ ಅವರ ಮುಖ್ಯ ಭಾಷಣವನ್ನು ಆಲಿಸಲು ಪಾಲ್ಗೊಳ್ಳಬಹುದು.
ಪತ್ರಿಕಾ ಗೋಷ್ಠಿಯಲ್ಲಿ ರೆ. ಡಾ. ರೊನಾಲ್ಡ್ ಸೆರಾವೊ, ರೆ.ಡಾ. ಐವನ್ ಡಿಸೋಜಾ , ರೆ.ಫಾ. ಫ್ರಾನ್ಸಿಸ್ ಡಿಸೋಜಾ , ಫಾ| ಜೋಸ್ವಿನ್ ಪ್ರವೀಣ್ ಡಿಸೋಜಾ, ಬ್ರದರ್ ಡೆರಿಕ್ ಮಸ್ಕರೇನ್ಹಸ್ ಹಾಗೂ ಫೋರ್‌ವಿಂಡ್ಸ್ ನಿರ್ದೇಶಕರಾದ ಎಲಿಯಾಸ್ ಫೆನಾಂಡಿಸ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು