7:09 AM Sunday5 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

‘ಮರ್ಯಾದೆ ಪ್ರಶ್ನೆ’ ನವೆಂಬರ್ 22ಕ್ಕೆ ಬೆಳ್ಳಿತೆರೆಗೆ: ನಾಗರಾಜ್‌ ಸೋಮಯಾಜಿ ನಿರ್ದೇಶನ; ರಾಕೇಶ್ ಅಡಿಗ ನಾಯಕ ನಟ

11/10/2024, 21:44

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಮರ್ಯಾದೆ ಪ್ರಶ್ನೆ ತುಂಬಾ ದಿನಗಳಿಂದ ಈ ಸಿನಿಮಾದ ಹೆಸರು ಕೇಳಿ ಬರುತ್ತಲೇ ಇದೆ. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ನವೆಂಬರ್ 22ಕ್ಕೆ ತೆರೆಕಾಣುತ್ತಿದೆ. ಸಕ್ಕತ್ ಸ್ಟುಡಿಯೋದ ಸಂಸ್ಥಾಪಕ ಆರ್.ಜೆ ಪ್ರದೀಪ್ ಈ ಸಿನಿಮಾವನ್ನು
ನಿರ್ಮಿಸಿದ್ದು, ನಾಗರಾಜ್‌ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ.
ತೀರ್ಥಹಳ್ಳಿಯ ಯುವ ನಟ ರಾಕೇಶ್ ಅಡಿಗ ಅವರು ನಾಯಕ ನಟನಾಗಿ ನಟಿಸಿದ್ದಾರೆ.
ಸಿನಿಮಾದ ಬಿಡುಗಡೆ ಹಿನ್ನೆಲೆಯಲ್ಲಿ ತೀರ್ಥಹಳ್ಳಿಗೆ ಆಗಮಿಸಿದ್ದ ನಾಯಕ ನಟ ಹಾಗೂ ನಿರ್ಮಾಪಕರು
ತಮ್ಮ ಕನಸಿನ ಬಗ್ಗೆ ಮಾತನಾಡಿದರು.ನಿರ್ಮಾಪಕ ಆರ್.ಜೆ.ಪ್ರದೀಪ್ ಮಾತನಾಡಿ, ಸಕ್ಕತ್ ಸ್ಟುಡಿಯೋ ನಮ್ಮ ಕನಸು. ಒಂದೊಳ್ಳೆ ಚಿತ್ರ ಮಾಡಬೇಕು ಅನ್ನೋದು ಇತ್ತು. ನಾನು
ನಾಗರಾಜ್ ಕಥೆ ಬಗ್ಗೆ ಚರ್ಚೆ ಮಾಡಿದ್ದೇವೆ. ಇಬ್ಬರು ಸೇರಿ ಸಿನಿಮಾಗಾಗಿ ಕೈ ಜೋಡಿಸಿದೆವು ಎಂದರು.
ಒಂದೊಳ್ಳೆ ಸಿನಿಮಾ ಮಾಡಿಕೊಂಡು ಜನರಿಗೆ ತಲುಪಿಸಲು ಡೇಟ್ ಫಿಕ್ಸ್‌ ಮಾಡಿಕೊಂಡು ನಿಮ್ಮ ಮುಂದೆ ಬಂದಿದ್ದೇವೆ. ಈಗಾಗಲೇ ಚಿತ್ರ ಬಿಡುಗಡೆಗೆ 45 ದಿನ ಇದ್ದು ಅಷ್ಟರೊಳಗೆ ಚಿತ್ರದ ಹಾಡುಗಳು ಬಿಡುಗಡೆ ಆಗಲಿದೆ. ಒಂದು ಹಾಡಿಗೆ ನಟ ಶರಣ್ ಹಾಡಿದ್ದಾರೆ ಎಂದರು.

‘ಮರ್ಯಾದೆ ಪ್ರಶ್ನೆ’ ಸಿನಿಮಾದಲ್ಲಿ ರಾಕೇಶ್ ಅಡಿಗ,
ಸುನೀಲ್ ರಾವ್, ಶೈನ್ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡೂರು, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್ ಮುಖ್ಯ ತಾರಾಗಣದಲ್ಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು