ಇತ್ತೀಚಿನ ಸುದ್ದಿ
ಆಯತಪ್ಪಿ ಬಾವಿಗೆ ಬಿದ್ದ ಮಹಿಳೆ: 4 ತಾಸು ಬಾವಿಯಲ್ಲೇ ವಾಸ: ಕೊನೆಗೂ ಅಗ್ನಿಶಾಮಕ ದಳದಿಂದ ರಕ್ಷಣೆ
08/10/2024, 22:32
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಬಾವಿಗೆ ಬಿದ್ದಿದ್ದ ಮಹಿಳೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ ಘಟನೆ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆಯಲ್ಲಿ ನಡೆದಿದೆ.
ಇಂದಿರಾ ನಗರದ ಚೌಡಿಕಟ್ಟಿ ಹತ್ತಿರದ ಸರ್ಕಾರಿ ಬಾವಿಗೆ ಗುಲಾಬಿ ಪೂಜಾರ್ತಿ (58) ಎಂಬ ಮಹಿಳೆ ಆಯತಪ್ಪಿ ಬಾವಿಗೆ ಬಿದ್ದಿದ್ದರು. ಬಾವಿಯಲ್ಲಿ ಇದ್ದಂತಹ ಗಟ್ಟಿ ಮುಟ್ಟಾದ ಗಿಡವನ್ನು ಹಿಡಿದು ಮಹಿಳೆ ಕುಳಿತ್ತಿದ್ದರು. ಸೋಮವಾರ ಮಧ್ಯಾಹ್ನ ಬಾವಿಗೆ ಬಿದ್ದಿದ್ದು ಸಂಜೆಯ ವೇಳೆ ಸ್ಥಳೀಯರಿಗೆ ವಿಷಯ ತಿಳಿದಿದೆ. ವಿಷಯ ತಿಳಿದು ತೀರ್ಥಹಳ್ಳಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಾಕ ದಳದ ಸಿಬ್ಬಂದಿಗಳು ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುಲಾಬಿಯವರಿಗೆ ಸಣ್ಣ ಪುಟ್ಟ ಪೆಟ್ಟಾಗಿದ್ದು ನಂತರ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಸಂತೋಷ್ ಶೆಟ್ಟಿ, ಚಾಲಕರಾದ ಪ್ರಶಾಂತ್ ಕುಮಾರ್ ಹಾಗೂ ಶರತ್ ಎಂ, ಶಶಿಕುಮಾರ್, ನಿಂಗಪ್ಪ ಇಟ್ಟಣ್ಣನವರ್ ಸೇರಿ ಸ್ಥಳೀಯರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.