ಇತ್ತೀಚಿನ ಸುದ್ದಿ
ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಉದ್ಯಮಿ ಮುತ್ತಾಝ್ ಅಲಿ ಮೃತದೇಹ ಕೂಳೂರು ನದಿಯಲ್ಲಿ ಪತ್ತೆ
07/10/2024, 12:13

ಮಂಗಳೂರು(reporterkarnataka.com): ಕೂಳೂರು ಸೇತುವೆ ಬಳಿ ಭಾನುವಾರ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯಿದಿನ್ ಬಾವರ ಸಹೋದರ, ಉದ್ಯಮಿ ಮುತ್ತಾಝ್ ಅಲಿ ಅವರ ಮೃತದೇಹ ಕೂಳೂರಿನ ಫಲ್ಗುಣಿ ನದಿಯಲ್ಲಿ ಸೋಮವಾರ ಪತ್ತೆಯಾಗಿದೆ.
ಭಾನುವಾರ ಮುಂಜಾನೆ 3 ಗಂಟೆಗೆ ಮನೆಯಿಂದ ಹೊರಟ
ಮುತ್ತಾಝ್ ಅಲಿ ಅವರ ಕಾರು ಕೂಳೂರು ಸೇತುವೆ ಬಳಿ ಪತ್ತೆಯಾಗಿತ್ತು.ಆಲಿ ಅವರ ಮೃತದೇಹವನ್ನು ನಗರದ ಎಜೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.