5:37 PM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ರಾಜ್ಯಮಟ್ಟದ ಮಂಗಳೂರು ದಸರಾ ಹಾಫ್ ಮ್ಯಾರಥಾನ್: 2 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

06/10/2024, 18:54

* ಜೂಯಿಸ್ ಫಿಟ್ನೆಸ್ ಕ್ಲಬ್ ಮತ್ತು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಆಯೋಜನೆ

ಮಂಗಳೂರು(reporterkarnataka.com): ಬೆಳಗ್ಗೆ ಸುಮಾರು 5 ಗಂಟೆಯ ವೇಳೆ ಚುಮು ಚುಮು ಚಳಿಯ ಮಧ್ಯೆಯೂ ಕುದ್ರೋಳಿ ಕ್ಷೇತ್ರದ ಪರಿಸರದಲ್ಲಿ ಸೇರಿದ ಸಹಸ್ರಾರು ಮಂದಿಯಲ್ಲಿ ಬತ್ತದ ಉತ್ಸಾಹ.. ಗೆಲುವಿನ ಖುಷಿ…


ಇಂತಹ ಅದ್ಭುತ ಸನ್ನಿವೇಶಕ್ಕೆ ಕಾರಣವಾಗಿದ್ದು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ-2024ರ ಅಂಗವಾಗಿ ಜೂಯಿಸ್ ಫಿಟ್ನೆಸ್ ಕ್ಲಬ್ ವತಿಯಿಂದ ನಡೆದ ರಾಜ್ಯಮಟ್ಟದ ಮಂಗಳೂರು ದಸರಾ ಹಾಫ್ ಮ್ಯಾರಥಾನ್-2024 ಸ್ಪರ್ಧೆ.
‘ವನ್ ಸಿಟಿ ವನ್ ಸ್ಪಿರಿಟ್’ ಧ್ಯೇಯದೊಂದಿಗೆ ದಕ್ಷಿಣಕನ್ನಡ ಜಿಲ್ಲೆಯನ್ನು ವ್ಯಸನಮುಕ್ತವಾಗಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಸ್ಪರ್ಧೆಯಲ್ಲಿ ಚಿಣ್ಣರಿಂದ ವೃದ್ಧರವರೆಗೂ ಸುಮಾರು ಎರಡು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ ವಿಶೇಷ ಮೆರಗು ನೀಡಿದರು. ಕೇರಳ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಪಾಲ್ಗೊಂಡರು. ಧಾರ್ಮಿಕ ಕ್ಷೇತ್ರದಿಂದ ಇಂತಹ ಸಮಾಜಮುಖಿ ಧ್ಯೇಯದೊಂದಿಗೆ ಮ್ಯಾರಾಥಾನ್ ಆಯೋಜಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. 21 ಕಿ.ಮೀ, 10 ಕಿ.ಮೀ ಸ್ಪರ್ಧೆ ಮತ್ತು 5 ಕಿ.ಮೀಟರ್ ಫನ್ ರನ್ ನಡೆಯಿತು.
ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಯಿತು. 21 ಕಿ.ಮೀ. ಪ್ರಥಮ ವಿಜೇತರಿಗೆ 25 ಸಾವಿರ ರೂ., ದ್ವಿತೀಯ ಬಹುಮಾನ 15 ಸಾವಿರ ರೂ. ಹಾಗೂ ತೃತೀಯ 10 ಸಾವಿರ ರೂ., 10 ಕಿ.ಮೀ. ಹಾಫ್ ಮ್ಯಾರಥಾನ್‌ಗೆ ಪ್ರಥಮ 15 ಸಾವಿರ ರೂ., ದ್ವಿತೀಯ 10 ಸಾವಿರ ರೂ. ಹಾಗೂ ತೃತೀಯ 5 ಸಾವಿರ ರೂ. ಬಹುಮಾನ ನೀಡಲಾಯಿತು.
ಉದ್ಘಾಟನೆ: ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕುದ್ರೋಳಿ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಟ್ರಸ್ಟಿ ಸಂತೋಷ್ ಜೆ.ಪೂಜಾರಿ, ಕುದ್ರೋಳಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ದ.ಕ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಅನಿಲ್ ಲೋಬೋ, ಜೂಯಿಸ್ ಫಿಟ್ನೆಸ್ ಕ್ಲಬ್‌ನ ರಾಜೇಶ್ ಪಾಟಾಲಿ, ಕಬಡ್ಡಿಪಟು ರವಿ ಉರ್ವ, ಗೋಕರ್ಣನಾಥ ಸೇವಾದಳ ಸದಸ್ಯರು ಮೊದಲಾದವರು ಇದ್ದರು. ಆರ್.ಜೆ ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿಜೇತರು
10ಕೆ ಪುರುಷರ ವಿಭಾಗ
ಪ್ರಥಮ: ಮಂಗಳೂರಿನ ರಂಗಣ್ಣ ನಾಯ್ಕರ (33 ನಿಮಿಷ 53ಸೆಕೆಂಡ್),
ದ್ವಿತೀಯ: ಬೆಂಗಳೂರಿನ ಶ್ರೀಧರ ಎಸ್.ಎನ್(33.55)
ತೃತೀಯ: ಬೆಂಗಳೂರಿನ ಗೋವಿಂದರಾಜ ಎಚ್. (35.15)

10ಕೆ ಮಹಿಳಾ ವಿಭಾಗ
ಪ್ರಥಮ: ಬೆಂಗಳೂರಿನ ಸ್ಮಿತಾ ಡಿ.ಆರ್.(41.09)
ದ್ವಿತೀಯ: ಮೈಸೂರಿನ ಉಷಾ ಆರ್. (42.01)
ತೃತೀಯ: ಮೈಸೂರಿನ ಪ್ರೀಯಾಂಕಾ ಮಾರುತಿ(44.48)
22ಕೆ ಪುರುಷರ ವಿಭಾಗ
ಪ್ರಥಮ: ಬೆಳಗಾಂನ ಶಿವಾನಂದ ಚಿಗರಿ (1ಗಂಟೆ 12ನಿಮಿಷ 07 ಸೆಕೆಂಡ್)
ದ್ವಿತೀಯ: ಹಾವೇರಿಯ ಪುರುಷೋತ್ತಮ ಆರ್. (1.13.28),
ತೃತೀಯ: ಮೈಸೂರಿನ ಸಚಿನ್ ನಂದು (1.14.13)
22ಕೆ ಮಹಿಳಾ ವಿಭಾಗ
ಪ್ರಥಮ: ಕೇರಳದ ಆಶಾ ಟಿ.ಪಿ (1.30.20)
ದ್ವಿತೀಯ: ಬೆಂಗಳೂರಿನ ಪ್ರಿಯಾಂಕಾ ಸಿ (1.35.18)
ತೃತೀಯ: ಮೈಸೂರಿನ ಅರ್ಚನಾ ಕೆ. ಎಂ(1.36.14)

ಇತ್ತೀಚಿನ ಸುದ್ದಿ

ಜಾಹೀರಾತು