ಇತ್ತೀಚಿನ ಸುದ್ದಿ
ಶಿರನಾಳದ ಹಿರಿಯಜ್ಜಿ ಇನ್ನಿಲ್ಲ: ಶತಾಯುಷಿ 108ರ ಹರೆಯದ ಭಾಗವ್ವ ಬಿ. ಪೂಜಾರ್ ದೈವಾಧೀನ
30/09/2024, 19:51
ವಿಜಯಪುರ(reporterkarnataka.com): ರಿಪೋರ್ಟರ್ ಕರ್ನಾಟಕದ ಉತ್ತರ ಕನ್ನಡ ಬ್ಯುರೋ ಸ್ಥಾನೀಯ ಸಂಪಾದಕ ಭೀಮಣ ಮಲಕಾರಿ ಪೂಜಾರ್
ಅವರ ಅಜ್ಜಿ ಶತಾಯುಷಿ ಶಿರನಾಳ ಗ್ರಾಮದ ಭಾಗವ್ವ ಬಿ. ಪೂಜಾರಿ(108) ಇಂದು ನಿಧನರಾದರು.
ಅವರು ಶಿರನಾಳ ಗ್ರಾಮದ ಹಿರಿಯಜ್ಜಿ ಎಂದೇ ಪ್ರಸಿದ್ಧರಾಗಿದ್ದರು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಅವರು ಮತ ಚಲಾಯಿಸಿ ಗಮನ ಸೆಳೆದಿದ್ದರು. ಶತಾಯುಷಿ ಭಾಗವ್ವ ಅವರು ಕೊನೆಯುಸಿರೆಳೆಯುವವರೆಗೂ ಆರೋಗ್ಯವಾಗಿಯೇ ಇದ್ದರು. ಆಹಾರ ಸೇವನೆ ಮಾಡುತ್ತಿದ್ದರು. ಸೊಸೆ,
ಮಗಳು ಹಾಗೂ ಮೊಮ್ಮಕ್ಕಳ ಸಹಾಯದಿಂದ ನಡೆದಾಡುತ್ತಿದ್ದರು.
ಭೀಮಣ ಪೂಜಾರ್ ಅವರು ಭಾಗವ್ಚ ಅವರ ಮಗ ದಿವಂಗತ ಮಲಕಾರಿ ಭೀಮ್ ಪೂಜಾರ್ ಅವರ ಪುತ್ರ.
ಮೃತರು ಪುತ್ರಿ ಕೋಂತ್ತವ ಪೂಜಾರ್, ಸೊಸೆ ಹಿರಬಾಯಿ ಮಲಕಾರಿ ಪೂಜಾರ್, ಮೊಮ್ಮಕ್ಕಳಾದ ಭೀಮಣ ಮಲಕಾರಿ ಪೂಜಾರ್, ಶಿಲಶಿದ್ದ ಮಲಕಾರಿ ಪೂಜಾರ್,
ಸವಿತಾ ಮಲಕಾರಿ ಪೂಜಾರ್ ಹಾಗೂ ಅನಿತಾ ಮಲಕಾರಿ ಪೂಜಾರ್ ಅವರನ್ನು ಅಗಲಿದ್ದಾರೆ.