11:38 PM Sunday22 - September 2024
ಬ್ರೇಕಿಂಗ್ ನ್ಯೂಸ್
2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬಾಲಕಿಯರ ಕ್ರೀಡಾ ವಸತಿ ನಿಲಯ ಕಟ್ಟಡ ಉದ್ಘಾಟನೆ ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ 30 ಅಡಿ ಎತ್ತರದಿಂದ ಗ್ರಾಪಂ ಆವರಣಕ್ಕೆ ಕಾರು… ವಿಶ್ವ ವಿಜ್ಞಾನಿಗಳ ಪಟ್ಟಿ: ಬಳ್ಳಾರಿಯ ವಿಎಸ್‌ಕೆಯುನ ಮೂವರು ಪ್ರಾಧ್ಯಾಪಕರಿಗೆ ಸ್ಥಾನ ​ ಸರಕಾರದ ನೇಮಕಾತಿಯಲ್ಲಿ ಮೀಸಲಾತಿ ಪರಿಗಣಿಸಿ: ಪಂಪಾಪತಿ ಆಗ್ರಹ ನಂಜನಗೂಡು: 20 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಚಾಲನೆ ಬೆಂಗಳೂರಿನ ಇಸ್ಕಾನ್ ಶ್ರೀರಾಧಾಕೃಷ್ಣ ದೇವಸ್ಥಾನದಲ್ಲಿ ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸಕ್ಕೆ ಚಿನ್ನದ ಹೊಳಪು ತೀರ್ಥಹಳ್ಳಿ: ಹಿಂದೂ- ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಛತ್ರಕೇರಿ ಗಣೇಶೋತ್ಸವ ಶೋಭಾಯಾತ್ರೆ ಮಿಸ್ಟರ್ ಕರಾವಳಿ, ಮಿಸ್ ಕರಾವಳಿ ಪ್ರಶಸ್ತಿ ರಂಜಿತ್ ಗಾಣಿಗ ಹಾಗೂ ರಿಷಾ ಟಾನ್ಯಾ… ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ

ಇತ್ತೀಚಿನ ಸುದ್ದಿ

ಬಣಕಲ್ ಹೋಬಳಿ ಕಸಾಪ ಪದಗ್ರಹಣ; ಚಿಂತನೆ ನಡೆಸಿದಾಗ ಮಾತ್ರ ಮನುಷ್ಯ ಕ್ರೀಯಾಶೀಲ: ಸೂರಿ ಶ್ರೀನಿವಾಸ್

22/09/2024, 23:32

ಸಂತೋಷ್ ಅತ್ರಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಿಂತನೆ ನಡೆಸಿದಾಗ ಮಾತ್ರ ಮನುಷ್ಯ ಕ್ರೀಯಾಶೀಲತೆ ಹೊಂದುತ್ತಾನೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಬಣಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬಣಕಲ್ ಕಸಾಪದ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಪ್ರತಿ ಜಿಲ್ಲೆ, ತಾಲ್ಲೂಕು ಹಾಗೂ ಪ್ರತಿ ಗ್ರಾಮಗಳಲ್ಲಿ ನುಡಿ ನಿತ್ಯೋತ್ಸವ ಕಾರ್ಯಕ್ರಮ ನಡೆಸಲು ಚಿಂತನೆ ಮಾಡಲಾಗಿದೆ’ಎಂದರು. ಯುರೇಕಾ ಆಕಾಡೇಮಿಯ ಅಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ’ಯಾವುದೇ ಕೆಲಸವನ್ನು ನಾಯಕನ ಜತೆಗೆ ತಂಡವಾಗಿ ಕೆಲಸ ನಿರ್ವಹಿಸಿದರೆ ಎಲ್ಲವೂ ಕೆಲಸಗಳು ಸುಲಭದಲ್ಲಿ ನಿರ್ವಹಿಸಬಹುದು’ಎಂದು ಹೇಳಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ ಗೌಡ ಮಾತನಾಡಿ’ಬಣಕಲ್ ನಲ್ಲಿ ಕಸಾಪದ ತಿಂಗಳ ಸಾಹಿತ್ಯ ಬೆಳೆಯಬೇಕಾದರೆ ಮೋಹನ್ ಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ ದೀಪಕ್ ದೊಡ್ಡಯ್ಯ,ಮಗ್ಗಲಮಕ್ಕಿ ಗಣೇಶ್ ಸೇರಿದಂತೆ ಹಲವರ ಪರಿಶ್ರಮ ಅಪಾರವಾಗಿದೆ ಎಂದು ಸ್ಮರಿಸಿದರು. ಸ್ಥಾಪಕ ಅಧ್ಯಕ್ಷ ಪೂರ್ವಾಧ್ಯಕ್ಷ ಸುರೇಶ್ ಎಸ್.ಶೆಟ್ಟಿ, ಟಿ.ಎಂ.ಆದರ್ಶ್,ಮುಖ್ಯ ಶಿಕ್ಷಕ ಜಿ.ಎಚ್.ಶ್ರೀನಿವಾಸ್,ಮಗ್ಗಲಮಕ್ಕಿಗಣೇಶ್,ಶಾಂತಕುಮಾರ್,
ಟಿ.ಎಂ.ಗಜೇಂದ್ರ,ಎಲ್.ಬಿ.ರಮೇಶ್,ಬಿ.ಕೆ.ದಿನೇಶ್,ಝರೀನಾ,ಬಿ.ಶಿವರಾಮ ಶೆಟ್ಟಿ,ಬಿ.ಎಂ.ಶಂಕರ್,ಎಲ್.ಬಿ.ಲೋಕೇಶ್ ಮಾತನಾಡಿದರು.

ಬಿ.ಕೆ.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಟಿ.ಎಂ.ಆದರ್ಶ್ ಅವರು ನೂತನ ಅಧ್ಯಕ್ಷ ಬಿ.ಕೆ. ಲೋಕೇಶ್ ಅವರಿಗೆ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅನಿತಾ ಜಗದೀಪ್, ವಿಶಾಲನಾಗರಾಜ್, ಭಕ್ತೇಶ್, ವಸಂತ್ ಹಾರ್ಗೋಡು, ಸಂಪತ್ ಬೆಟ್ಟಗೆರೆ , ನಾಟ್ಯರಂಜಿತ್, ಸಂಜಯ್ ಗೌಡ,ಸ್ವಾತಿ ನವೀನ್, ಆರೀಫ್, ಹೊರಟ್ಟಿ ರಘು, ಸಂಜಯ್ ಗೌಡ,ಬಕ್ಕಿ ಮಂಜುನಾಥ್,ರಾಮಚಂದ್ರ,ಬಿ.ಎಸ್.ವಿಕ್ರಂ,ಬಿ.ಕೆ.ದಿನೇಶ್,ಯತೀಶ್ ಕುಮಾರ್, ಶರತ್ ಫಲ್ಗುಣಿ ಮತ್ತಿತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು