1:57 AM Friday10 - January 2025
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಆಗಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಸಂಕಷ್ಟಕ್ಕೀಡಾದ ಬಿಗ್ ಬಾಸ್ ಸೀಸನ್ 11: ಶೋ ನಿಲ್ಲಿಸುವಂತೆ ಬೆಂಗಳೂರು ಜಿಪಂ ಸಿಇಒ… ಶೃಂಗೇರಿ ದೇಗುಲಕ್ಕೆ ನಾಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ: ಸುವರ್ಣ ಮಹೋತ್ಸವದಲ್ಲಿ ಭಾಗಿ ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆ: ಸರಕಾರಿ ನೌಕರರ ಸಂಘಕ್ಕೆ ಚುನಾವಣೆಗೆ ಸಿವಿಲ್ ಕೋರ್ಟ್… ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರಕಾರಿ ಬಸ್: ಪ್ರಯಾಣಿಕರಲ್ಲಿ ಆತಂಕ ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ, ರಾಹುಲ್ ಗಾಂಧಿ ಕೊಟ್ಟಿದ್ದ ಭರವಸೆ ಸಾಕಾರ: ಸಚಿವ… ನಿಮ್ಹಾನ್ಸ್‌ನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಯ ನೇಮಕಾತಿಗೆ ಕ್ರಮ ಕೈಗೊಳ್ಳಿ: ಮುಖ್ಯಮಂತ್ರಿ ಸೂಚನೆ ದೇಸಿ ತಿನಿಸಿನ ಬೇಡಿಕೆ ಹೆಚ್ಚಸಲು ಕ್ರಮ: ಸಚಿವ ಎನ್. ಚಲುವರಾಯಸ್ವಾಮಿ ನಂಜನಗೂಡು: ಶಿವಶರಣ ಒಕ್ಕಲಿಗರ ಮುದ್ದಣನವರ ಪ್ರಪ್ರಥಮ ಜಯಂತಿ ಆಚರಣೆ ಬಳ್ಳಾರಿ: ಎಲ್ಲ ರೈಲುಗಳ ಆರಂಭಕ್ಕಾಗಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಒಂದು ತಿಂಗಳ…

ಇತ್ತೀಚಿನ ಸುದ್ದಿ

ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!!

19/09/2024, 22:03

ಮಂಗಳೂರು(reporterkarnataka.com): ನೂತನ ಮೇಯರ್ – ಉಪ ಮೇಯರ್ ಆಯ್ಕೆ ಬಳಿಕ ಅಭಿನಂದನಾ ಸಭೆ ನಡೆಯುತ್ತಿದ್ದಾಗಲೇ ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರಕ್ಕೆ ಇಡೀ ಸಭೆ ಸಾಕ್ಷಿಯಾಯಿತು.


ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರರಾದ ಡಿ. ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ ಅವರು ನೂತನ ಮೇಯರ್-ಉಪ ಮೇಯರ್‌ಗಳಿಗೆ ಅಭಿನಂದನೆ ಸಲ್ಲಿಸಿದ ಬಳಿಕ ನಿರ್ಗಮನ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಭಿನಂದನಾ ಭಾಷಣ ಮಾಡಿದರು.
ಈ ವೇಳೆ ಅವರು ಭಾಷಣ ಮಾಡುತ್ತಿದ್ದಾಗಲೇ ಪ್ರತಿಪಕ್ಷ ಸದಸ್ಯರು ನೂತನ ಮೇಯರ್-ಉಪ ಮೇಯರ್‌ಗಳಿಗೆ ಹೂಗುಚ್ಚ ನೀಡಿ ಅಭಿನಂದನೆ ಸಲ್ಲಿಸಲು ತೆರಳಿದರು. ಇದರಿಂದ ಸಿಡಿಮಿಡಿಗೊಂಡ ಸುಧೀರ್ ಶೆಟ್ಟಿ ಕಣ್ಣೂರು, ‘ಅರ್ಧದಲ್ಲೇ ಯಾಕೆ ಅಭಿನಂದನೆ ಸಲ್ಲಿಸುತ್ತಿದ್ದೀರಿ‌. ಎಸ್‌.ಸಿ. ಸಮುದಾಯದ ಸದಸ್ಯರೋರ್ವರು ಮೇಯರ್ ಆಗಿರುವಾಗ ನೀವು ಹೀಗೆ ಮಾಡುವುದು ಸರಿಯಲ್ಲ’ ಎಂದು ಆಕ್ಷೇಪಣೆ ಎತ್ತಿದ್ದಾರೆ.
ಆಗ ಪ್ರತಿಪಕ್ಷ ಸದಸ್ಯರು ಮಾತನಾಡಿ, ತಾವು ರಾಜ್ಯ ಸರಕಾರವನ್ನು ದೂಷಿಸುವುದು ಸರಿಯಲ್ಲ. ವಿನಾ ಕಾರಣ ಮೇಯರ್ ಅಭಿನಂದನಾ ಸಭೆಯಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ. ಈಗಾಗಲೇ ಮಾತನಾಡಿರುವ ಎಂಪಿ, ಎಂಎಲ್ಎಗಳು ರಾಜಕೀಯ ಮಾತನಾಡಿಲ್ಲ‌. ತಾವೇಕೆ ಹೀಗೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಈ ನಡುವೆ ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ಈ ಹಿಂದೆ ಮೇಯರ್ ಅಭ್ಯರ್ಥಿ ಮೀಸಲಾತಿ ನಾಲ್ಕು ಜನರಲ್ ಮೆರಿಟ್‌ಗೆ ಮಾತ್ರವಿತ್ತು. ಆದರೆ ಎಸ್ ಸಿ
ಮೀಸಲಾತಿ ಬರಬೇಕಾದರೆ ನಮ್ಮ ನಿಯೋಗ ನಗರಾಭಿವೃದ್ಧಿ ಸಚಿವರಲ್ಲಿಗೆ ಹೋಗಿ ಅವರ ಮನವೊಲಿಕೆ ಮಾಡಿದ್ದೀರಿ. ಆದ್ದರಿಂದ ಎಸ್ ಸಿ ಮೀಸಲಾತಿ ಬಂದು, ಎಸ್ಸಿ ಸಮುದಾಯದ ಸದಸ್ಯರೊಬ್ಬರು ಇದೀಗ ಮೇಯರ್ ಆಗಿದ್ದಾರೆ. ಆದ್ದರಿಂದ ಎಸ್ ಸಿ ಮೀಸಲಾತಿ ಬರಬೇಕಾದರೆ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಹೇಳಿದರು.
ಬಳಿಕ ಈ ವಾಕ್ಸಮರ ತಣ್ಣಗಾಗಿ, ಅಭಿನಂದನಾ ಸಭೆ ಮತ್ತೆ ಮುಂದುವರಿಯಿತು.

ಇತ್ತೀಚಿನ ಸುದ್ದಿ

ಜಾಹೀರಾತು