11:47 AM Sunday22 - December 2024
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ಸಿ.ಟಿ. ರವಿಗೆ ಭಾರೀ ಸ್ವಾಗತ; ಮೆರವಣಿಗೆ ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು…

ಇತ್ತೀಚಿನ ಸುದ್ದಿ

ಕರಾವಳಿ ಸಂಗೀತ ಕಲಾವಿದರ ಒಕ್ಕೂಟ: ಸ್ವರ ಕುಡ್ಲ ಸೀಸನ್- 6 ಸಂಗೀತ ಸ್ಪರ್ಧೆ ಉದ್ಘಾಟನೆ

19/09/2024, 10:54

ಮಂಗಳೂರು(reporterkarnataka.com):ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ. ಉಡುಪಿ ಜಿಲ್ಲೆ ವತಿಯಿಂದ ಸ್ವರ ಕುಡ್ಲ ಸೀಸನ್- 6 ಸಂಗೀತ ಸ್ಪರ್ಧೆ ಉದ್ಘಾಟನೆ ನಡೆಯಿತು.


ಸ್ಪರ್ಧೆಯನ್ನು ಉದ್ಘಾಟಿಸಿದ ಜ್ಯೋತಿಷಿ ಹಾಗೂ ಗಾಯಕ ಉದಯ ಕುಮಾರ್ ಅವರು ಮಾತನಾಡಿ, ಯಾವುದೇ ಕಲೆಯ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಮುನ್ನ ಶ್ರದ್ಧೆ ಮತ್ತು ಛಲದಿಂದ ಅದನ್ನು ಕರಗತ ಮಾಡಿಕೊಳ್ಳುವ ಅವಿರತ ಪ್ರಯತ್ನ ಇರಬೇಕು. ಎಂದು ಅಭಿಪ್ರಾಯಪಟ್ಟರು.
ಒಕ್ಕೂಟದ ಅಧ್ಯಕ್ಷ ದೀಪಕ್ ರಾಜ್ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ್, ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಕಂದುಕ, ರತ್ನಾಸ್ ವೈನ್ ಗೇಟ್ ಮಾಲಕ ಡಿ.ರಮೇಶ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದರು. ಒಕ್ಕೂಟದ ಸ್ಥಾಪಕ ಅಧ್ಯಕ್ಷ ಸದಾಶಿವ ದಾಸ್ ಪಾಂಡೇಶ್ವರ, ಉಪಾಧ್ಯಕ್ಷ ರಾಧಾಕೃಷ್ಣ ಭಟ್ ಉಡುಪಿ , ಪ್ರಧಾನ ಕಾರ್ಯದರ್ಶಿ ಕೇಶವ ಕನಿಲ, ಖಜಾಂಚಿ ಸತೀಶ್ ಅತಿಥಿಗಳನ್ನು ಗೌರವಿಸಿದರು. ಒಕ್ಕೂಟದ ಗೌರವ ಸಲಹೆಗಾರ ತೋನ್ಸೆ ಪುಷ್ಕಳ ಕುಮಾರ ಸ್ವಾಗತಿಸಿದರು. ಮಾಜಿ ಅಧ್ಯಕ್ಷರುಗಳಾದ ಜಗದೀಶ್ ಶೆಟ್ಟಿ, ಮಹಮದ್ ಇಕ್ಬಾಲ್, ನವಗಿರಿ ಗಣೇಶ್, ರಮೇಶ್ ಸಾಲ್ಯಾನ್, ಮಲ್ಲಿಕಾ ಶೆಟ್ಟಿ, ಹಾಗೂ ಸುಭಾಷಿತ್ ಕುಮಾರ್, ಮುಕ್ತ ಶ್ರೀನಿವಾಸ್ ಉಡುಪಿ , ಹುಸೇನ್ ಕಾಟಿಪಳ್ಳ, ದಿನಕರ ಪಾಂಡೇಶ್ವರ್, ಧನುರಾಜ್, ಕೆ.ಆರ್. ಕಾರಂತ್, ಚೈತ್ರಾ ಸುವರ್ಣ ಧನ್ಯಶ್ರೀ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು. ಆಡಿಷನ್ ಮತ್ತು ಸೆಮಿ ಫೈನಲ್ ಸ್ಪರ್ಧೆಯ ತೀರ್ಪುಗಾರರಾಗಿ ಮುರಳಿಧರ್ ಕಾಮತ್, ಶಿನಾಯ್, ಪಲ್ಲವಿ ಪ್ರಭು, ಕಿರಣ್ ಕುಮಾರ್, ಯಶವಂತ್ ಜಿ., ಸೌಮ್ಯ ಭಟ್ ಸಹಕರಿಸಿದರು. ವಿ ಜೆ ಶೀಶಾನ್ ಕೌಡೂರು ನಿರೂಪಿಸಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು