12:34 PM Saturday17 - May 2025
ಬ್ರೇಕಿಂಗ್ ನ್ಯೂಸ್
ಆಪರೇಷನ್ ಸಿಂಧೂರ್; ಶಾಸಕ ಕೊತ್ತೂರು ಮಂಜುನಾಥ್ ಹೇಳಿಕೆ ಕಾಂಗ್ರೆಸ್ ಅಂತರಾತ್ಮದ ದನಿ: ಕೇಂದ್ರ… Davanagere | ಸ್ವಾಭಿಮಾನದಿಂದ‌ ಎರಡನೇ ವರ್ಷದ ಸಂಭ್ರಮಾಚರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದುರ್ಬಲ ಗ್ರಾಪಂಗಳ ದತ್ತು ಪಡೆದು ಸಮಗ್ರ ಅಭಿವೃದ್ಧಿಪಡಿಸಿ: ಸಿಇಒಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ… ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ: ಇಂದಿನಿಂದ ಜಾರಿ; ಪ್ರಾಧಿಕಾರ ರಚನೆ ಮರದ ಕೊಂಬೆಗಳ ಮಧ್ಯೆ ಸಿಲುಕಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯ ರಕ್ಷಣೆ: ಅಗ್ನಿಶಾಮಕ ದಳ… ಲೋಕಾಯುಕ್ತ ಅಧಿಕಾರಿಗಳಿಂದ ಮತ್ತೆ ಭ್ರಷ್ಟರ ಭೇಟೆ: ಬೆಂಗಳೂರು, ಮಂಗಳೂರು ಸಹಿತ 7 ನಗರಗಳ… ಮಂಗಳೂರು: ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ;… Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ

ಇತ್ತೀಚಿನ ಸುದ್ದಿ

ನವೀನ್ ಪಿರೇರಾ ಸುರತ್ಕಲ್ ಹಾಗೂ ಗೋವಾದ ಉದಯ್ ನರಸಿಂಹ ಮೆಂಬ್ರೊಗೆ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸನ್ಮಾನ

18/09/2024, 23:07

ಮಂಗಳೂರು(reporterkarnataka.com):ಗೋವಾದ ಪಣಜಿಯಲ್ಲಿ ನಡೆಯುವ ಮೂರನೆಯ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರದ ಚಾರೊಳಿ ಸಾಹಿ‌ತ್ಯದ ಅತ್ಯುನ್ನತ ಸನ್ಮಾನವನ್ನು ಮಂಗಳೂರಿನ ಆಶು ಕವಿ ಪೊಯೆಟಿಕಾ ಕವಿ ಕೂಟದ ಪ್ರವರ್ತಕ ಸಿವಿಲ್ ಇಂಜಿನಿಯರ್ ನವೀನ ಪಿರೇರಾ ಸುರತ್ಕಲ್ ಅವರು ಗೋವಾದ ರಾಜ್ಯ ಸರಕಾರದ ಹಲವು ಪ್ರಸಸ್ತಿಗಳ ಭಾಜನ ಅತ್ಯುತ್ತಮ ಕವಿಗಳಲ್ಲಿ ಒಬ್ಬರಾದ ಉದಯ್ ನರಸಿಂಹ ಮೆಂಬ್ರೊ ಅವರ ಜೊತೆಯಲ್ಲಿ ಜಂಟಿಯಾಗಿ ಪಡೆಯಲಿದ್ದಾರೆ ಎಂದು ಹಿರಿಯ ಪತ್ರಕರ್ತರು, ಬಹು ಭಾಷಾ ಸಾಹಿತಿ ಹಾಗೂ ಅಖಿಲ ಭಾರತ ಚಾರೊಳಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ತಿಳಿಸಿದ್ದಾರೆ.
ಇದೇ ಸಪ್ಟೆಂಬರ್ 22ರಂದು ರ ಗೋವಾದ ಪಣಜಿಯಲ್ಲಿ ನಡೆಯುವ ಮೂರನೆಯ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಸನ್ಮಾನ ನಡೆಯಲಿದೆ.
ಕೇರಳ, ಕರ್ನಾಟಕ, ಗೋವಾ, ಆಂದ್ರ, ಮಹಾರಾಷ್ಟ್ರ, ದೆಹಲಿ ಪ್ರದೇಶದ ಕೊಂಕಣಿ ಮಾತೃಭಾಷೆ ಚಾರೊಳಿ ಸಾಹಿತಿಗಳು, ಚಿಂತಕರು, ವಿಷಯಗಳ ಮಂಡನೆ ಹಾಗೂ ಕವಿವಾಣಿ ಸಾಧರ ಪಡಿಸುವರು.
ಇದರ ಹಿಂದೆ ಮೊದಲಿಗೆ 2022 ರಲ್ಲಿ ಗೋವಾದ ಕಲಾ ಶಿಕ್ಷಕರು ಹಾಗೂ ಕವಿ, ಸಾಹಿತಿ ಗೌರೀಶ ವರ್ಣೇಕರ್ ಹಾಗೂ ಕೇರಳದ ಹಿರಿಯ ಕವಿ ಆರ್. ಎಸ್. ಭಾಸ್ಕರ್ ಹಾಗೂ 2023ರ ದ್ವಿತೀಯ ಸಮ್ಮೇಳನದಲ್ಲಿ ಮಂಗಳೂರಿನ ಜೊಸ್ಸಿ ಪಿಂಟೊ ಕಿನ್ನಿಗೋಳಿ ಹಾಗೂ ಗೋವಾದ ರಾಜಯ್ ಪವಾರ್ ಸನ್ಮಾನಿತರಾಗಿದ್ದರು.
ಮೊದಲ ಸಮ್ಮೇಳನ ಮಂಗಳೂರು, ದ್ವಿತೀಯ ಮತ್ತು ಇದು ತೃತೀಯ ಗೋವಾದಲ್ಲಿ ರಾಷ್ಟ್ರೀಯ ಸಮ್ಮೇಳನಗಳು ನಡೆಯುತ್ತಲಿವೆ.
ಸ್ಥಳೀಯ ಗೋವಾದ ಕವಿಕೂಟ ಉಗ್ತೆಂ ಮೊಳಬ್ ಈ ಬಾರಿಯ ಸ್ಥಳೀಯ ಸಂಯೋಜಕ ಸಂಸ್ಥೆಯಾಗಿ ಸಮ್ಮೇಳನದ ಆಯೋಜನೆ ಮಾಡಲಿದೆ.
ಕಳೆದ 2023 ರ ಗೋವಾ ರಾಜ್ಯದ ‌ಕೊಂಕಣಿ ಲೇಖಕರ ಸಂಘ ಸಮ್ಮೇಳನ ಸಂಯೋಜನೆ ಮಾಡಿದ್ದರು.
ಆಖಿಲ ಭಾರತ ಕೊಂಕಣಿ ಚಾರೊಳಿ ಸಾಹಿತ್ಯ ಪರಿಷತ್ತಿನ ಸ್ಥಾಪಕ ಆಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಈ ಬಾರಿ ಗೋವಾದ ವಿವೇಕ ಪಿಸೂಲೆಕರ್, ಗೌರೀಶ ವರ್ಣೇಕರ್, ಕಾರವಾರದ ಸಂದೇಶ ಬಾಂದೇಕರ್,ಈ ರಾಷ್ಟ್ರೀಯ ಸಮ್ಮೇಳನದ ಸಂಯೋಜನೆ ‌ಮಾಡಲು ರೇಮಂಡ್ ಡಿಕೂನಾ ತಾಕೊಡೆ ಜೊತೆಯಲ್ಲಿ ಸಂಚಾಲಕರಾಗಿ ಇದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು