1:26 AM Thursday11 - September 2025
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆದರಿಕೆ: ಆರೋಪಿ ಬಂಧನ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ…

ಇತ್ತೀಚಿನ ಸುದ್ದಿ

ಮೂಡಿಗೆರೆ ತಾಪಂ ಇಓ ಕರೆದುಕೊಂಡು ಬರಲು ಕೊಟ್ಟಿಗೆಹಾರಕ್ಕೆ ಸರಕಾರಿ ಜೀಪ್ ಸವಾರಿ: ಸಾರ್ವಜನಿಕರ ಆಕ್ರೋಶ

18/09/2024, 14:21

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com

ಕೊಟ್ಟಿಗೆಹಾರ ಸರಕಾರಿ ಬಸ್ ನಿಲ್ದಾಣದಲ್ಲಿ ಬಸ್ ಕಾಯುತ್ತೆ ತಾಪಂ ಇಓ ಜೀಪ್…!
ತಾಪಂ ಇಓ ಬಂದ ಕೂಡಲೇ ಮೂಡಿಗೆರೆವರೆಗೆ ಪಿಕ್ ಅಪ್ ಮಾಡುತ್ತದೆ. ಮೂಡಿಗೆರೆ ತಾಪಂ ಇಓ ದಯಾವತಿ ವಿರುದ್ಧ ಸ್ಥಳೀಯರ ಆರೋಪ ಮಾಡಿದ್ದಾರೆ.
ವಿಶೇಷವೆಂದರೆ
ಅದೇ ಸರ್ಕಾರಿ ಬಸ್ ಮೂಡಿಗೆರೆಗೂ ಬರುತ್ತೆ… ಆದ್ರೆ, ಇಓ ಮೇಡಂ ಅದೇ ಬಸ್ಸಲ್ಲಿ ಬರಲ್ಲ…!

 


ಉಜಿರೆಯಿಂದ ಬಂದು ಕೊಟ್ಟಿಗೆಹಾರದಲ್ಲಿ ಇಳಿದ ಬಳಿಕ ದಯಾವತಿ ಅವರನ್ನು ಜೀಪ್ ಹೋಗಿ ಕರ್ಕಂಡ್ ಬರ್ಬೇಕು…!
ಸರ್ಕಾರಿ ಅಧಿಕಾರಿಯ ದರ್ಬಾರ್ ಗೆ ಸಾರ್ವಜನಿಕರ ಕಿಡಿ ಕಾರಿದ್ದಾರೆ.
ನಿತ್ಯ ಮೂಡಿಗೆರೆಯಿಂದ 60 ಕಿ.ಮೀ. ದೂರದ ಉಜಿರೆಯಿಂದ ಅಪ್ ಅಂಡ್ ಡೌನ್…! ಇಓ ಮೇಡಂ ನಿತ್ಯ ಕೊಟ್ಟಿಗೆಹಾರ ಬರ್ತಾರೆ, ಮೂಡಿಗೆರೆಯಿಂದ ಹೋಗಿ ಪಿಕ್ ಅಪ್ ಮಾಡ್ಬೇಕು…!


ಸರ್ಕಾರಿ ಅಧಿಕಾರಿಗಳು ಸ್ವಸ್ಥಾನದಲ್ಲೇ ಇರಬೇಕೆಂಬ ಸರ್ಕಾರದ ಕಾನೂನಿದೆ.
ಆದ್ರೆ, ಇಓ ಮೇಡಂ ಪಾಲಿಗೆ ಸರ್ಕಾರದ ಕಾನೂನು ಕಡತಕ್ಕಷ್ಟೆ ಸೀಮಿತ…!

ವಾರದಲ್ಲಿ ಒಂದು-ಎರಡು ದಿನ ಸರ್ಕಾರಿ ಜೀಪಲ್ಲಿ ಉಜಿರೆಗೆ ಡ್ರಾಪ್…!
ಅಧಿಕಾರಿಯ ಅಂದಾದರ್ಬಾರ್ ಗೆ ಸರ್ಕಾರದ ಗಾಡಿ-ದುಡ್ಡು ಎರಡೂ ವ್ಯಯ…!

ಇತ್ತೀಚಿನ ಸುದ್ದಿ

ಜಾಹೀರಾತು