ಇತ್ತೀಚಿನ ಸುದ್ದಿ
ಅಥಣಿ: ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ದಾರುಣ ಸಾವು
12/09/2024, 21:30
ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ
info.reporterkarnataka@gmail.com
ಶೌಚಕ್ಕೆ ಹೋದ ಸಂದರ್ಭದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ದಾರುಣ ಘಟನೆ ಅಥಣಿ ತಾಲೂಕಿನ ಹಲ್ಯಾಳ ಕರಿಮಸುತಿ ಏತ ನೀರಾವರಿ ಕಾಲುವೆಯಲ್ಲಿ ನಡೆದಿದೆ.
ಶಿವರಾಯ ಮಲ್ಲಪ್ಪ ಕಾಂಬಳೆ (21) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.
ಇಬ್ಬರು ಸ್ನೇಹಿತರ ಜೊತೆಯಾಗಿ ಮುಂಜಾನೆ ಕಾಲುವೆಯ ಮೇಲೆ ಶೌಚಕ್ಕೆ ತೆರಳಿದರು.ಶೌಚಕ್ಕೆ ನೀರು ತರಲು ಮುಂದಾದಾಗ ಶಿವರಾಯ ಕಾಲುಜಾರಿ ಕಾಲುವೆಗೆ ಬಿದ್ದರು.ಈಜು ಬಾರದ ಶಿವರಾಯ ರಭಸವಾಗಿ ಹರಿಯುತ್ತಿರುವ ನೀರು ಪಾಲಾದರು.ಅಥಣಿ ಪೊಲೀಸರು ಹಾಗೂ ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಸಿದರು.
ಘಟನೆ ನಡೆದ ಒಂದು ಕಿಲೋಮೀಟರ ಅಂತರದಲ್ಲಿ ಮೃತ ದೇಹಕ್ಕೆ ಪತ್ತೆಯಾಗಿದೆ.ಯುವಕನ ಕಳೆದುಕೊಂಡ ಕುಟುಂಬದಲ್ಲಿ ಅಕ್ರಂದನ ಮುಗಿಲು ಮುಟ್ಟಿದೆ.ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.