12:52 AM Saturday11 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ಗ್ಲೋಬಲೈಜ್ ಪ್ರಭಾವದಿಂದ ಸಾಹಿತ್ಯ ರಚನೆಯಲ್ಲಿ ವಿವಿಧ ಭಾಷೆಗಳ ಪ್ರವೇಶ ಸಾಮಾನ್ಯವಾಗಿದೆ: ಸಾಹಿತಿ ಚಂದ್ರಕಲಾ ನಂದಾವರ

09/09/2024, 20:03

ಮಂಗಳೂರು(reporterkarnataka.com):ಸಾಹಿತ್ಯದ ರಚನೆಯಲ್ಲಿ ವಿವಿಧ ಭಾಷೆಗಳು ತುರುಕಿ ಬರುವುದು ಈಗಿನ ಗ್ಲೋಬಲೈಜ್ ನಿಂದ ಸಾಮಾನ್ಯ. ನಾವು ಸಾಹಿತ್ಯದ ಬರವಣಿಗೆ ಮಾಡುವಾಗ ಮೂಲ‌ ಆಂಗ್ಲ ಶಬ್ದ ಬರೆದರೆ ಸರಿಯಾದ ಸಾಂದರ್ಭಿಕ ಅರ್ಥ ಬರಲು ಸುಲಭ ಆದೀತು ಎಂದು ಹಿರಿಯ ಶಿಕ್ಷಕಿ ಸಾಹಿತಿ ಚಂದ್ರಕಲಾ ನಂದಾವರ ಹೇಳಿದರು.
ಅವರು ಪ್ರೆಸ್ ಕ್ಲಬ್ ನಲ್ಲಿ ರೇಮಂಡ್ ಡಿಕೂನಾ ತಾಕೊಡೆ ಬರೆದ ಆಭರಣಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ‌ಪುಸ್ತಕ‌ ಪರಿಚಯ ಮಾಡಿ ಮಾತನಾಡುತ್ತಿದ್ದರು.
ಪತ್ರಕರ್ತರ ಜೀವನ ಮತ್ತು ಸಾಹಿತಿ ಹಾಗೂ ಶಿಕ್ಷಕರ ಜೀವನ ಒಂದು ಪ್ರೆಶರ್ ನಲ್ಲಿ ಈಗ ಇದೆ. ಯಾವುದು ಬರೆಯಬೇಕು, ಹೇಳಬೇಕು, ಕಲಿಸಬೇಕು ಎಂದು ಹೇಳುವ ಒತ್ತಡ ಇಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಮುಕ್ತವಾಗಿ ಮತ್ತು ಸರಳವಾಗಿ ಎಲ್ಲವೂ ಇದ್ದರೆ ಒಳ್ಳೆಯದು ಎಂಬುವ ಅಭಿಪ್ರಾಯ ವ್ಯಕ್ತಪಡಿಸಿದರು.
ಪುಸ್ತಕ ಬಿಡುಗಡೆ ಮಾಡಿದ ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ ಸಾಹಿತ್ಯದ ಮಗ್ಗುಲುಗಳನ್ನು ಪತ್ರಕರ್ತರ ಜೀವನದ ಒಂದು ಅಂಶ ಅದನ್ನು ಮರೆಯದೆ ಬರೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೆಸ್ ಕ್ಲಬ್ ಆಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಪ್ರತಿಯೊಬ್ಬ ಪತ್ರಕರ್ತರು ತಮ್ಮ ಬೈಲೈನ್ ಆರ್ಟಿಕಲ್ಸ್ ಸಂಗ್ರಹಿಸಿ ಪುಸ್ತಕ ಪ್ರಕಟ ಮಾಡಬೇಕು. ಇಲ್ಲವಾದರೆ ನಾವು ಎಷ್ಟು ದೊಡ್ಡ ಪತ್ರಕರ್ತರು ಆದರೂ‌ ಮತ್ತೆ ಮರೆತು ಹೋಗುತ್ತವೆ ಎಂದರು.
ಹಿರಿಯ ಪತ್ರಕರ್ತ ಬಹುಭಾಷಾ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿದರು. ರಿಯಾನಾ ಡಿಕೂನಾ ವಂದಿಸಿದರು. ಪತ್ರಕರ್ತರ ಸಂಘದ ಉಪಾಧ್ಯಕ್ಷ ಪತ್ರಕರ್ತ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು