5:32 AM Monday8 - September 2025
ಬ್ರೇಕಿಂಗ್ ನ್ಯೂಸ್
ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆದರಿಕೆ: ಆರೋಪಿ ಬಂಧನ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ… Kodagu | ಚೋರರಿದ್ದಾರೆ ಎಚ್ಚರಿಕೆ: ಕುಶಾಲನಗರ; ಹೆಚ್ಚುತ್ತಿರುವ ಶ್ರೀಗಂಧ ಮರಗಳ ಕಳ್ಳತನ ಹೃದಯಘಾತ: ಕಾರಿನಲ್ಲೇ ಉಸಿರು ನಿಲ್ಲಿಸಿದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ Kodagu | ಸರಣಿ ಅಪಘಾತ: ರಸ್ತೆ ಮಧ್ಯೆ ಅಡ್ಡ ನಿಂತಿದ್ದ ಟ್ರ್ಯಾಕ್ಟರ್ ಗೆ… ವಿರಾಜಪೇಟೆ ಕೊಡಗು ಗೌಡ ಸಮಾಜಕ್ಕೆ ಸುಳ್ಯದ ಕುರುಂಜಿ ವೆಂಕರಮಣ ಗೌಡ ಕುಟುಂಬದಿಂದ 3.5… ಕೋಲಾರ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ Mysore | ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ: ಸಾಹಿತಿ ಬಾನು ಮಸ್ತಾಕ್…

ಇತ್ತೀಚಿನ ಸುದ್ದಿ

ರಸ್ತೆ ಆಳುವ ಬೀದಿ ನಾಯಿಗಳು: ಶ್ರೀನಿವಾಸಪುರದಲ್ಲಿ ಶ್ವಾನಗಳದ್ದೇ ಕಾಟ; ಕಣ್ಮುಚ್ಚಿ ಕುಳಿತ ಪುರಸಭೆ ಅಧಿಕಾರಿಗಳು!

09/09/2024, 16:09

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಶ್ರೀನಿವಾಸಪುರ ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದ್ದು, ಕೆಲ ಕಡೆ ಜನರು ಸಂಚರಿಸುವುದೇ ಕಷ್ಟವಾಗಿದೆ.
ಪಟ್ಟಣದಲ್ಲಿನ ಬಹುತೇಕ ರಸ್ತೆಗಳಲ್ಲಿ ಬೀದಿ ನಾಯಿಗಳು ಹೆಚ್ಚಿವೆ. ಹೆಜ್ಜೆ ಹೆಜ್ಜೆಗೂ ಗುರ್‌ ಎನ್ನುವ ನಾಯಿಗಳು ಸಹಜವಾಗಿಯೇ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸುತ್ತಿವೆ. ಬೀದಿ ನಾಯಿಗಳ ಹಾವಳಿಯಿಂದ ಜನರು ರೋಸಿ ಹೋಗಿದ್ದಾರೆ. ಪಾದಚಾರಿಗಳು ಮತ್ತು ದ್ವಿ ಚಕ್ರ ವಾಹನಗಳ ಸವಾರರ ಸಂಚಾರಕ್ಕೆ ಸಂಚಕಾರ ಎದುರಾಗಿದೆ.
ಬಡಾವಣೆಗಳಲ್ಲಿ ತಿಂಡಿ, ತಿನಿಸುಗಳನ್ನು ಹಿಡಿದು ಸಾಗುವ ಪುಟ್ಟ ಮಕ್ಕಳ ಮೈಮೇಲೆ ಬೀದಿ ನಾಯಿಗಳು ದಾಳಿ ಇಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
ಬೀದಿ ನಾಯಿಗಳ ಹಾವಳಿ ಪಟ್ಟಣದ ರಾಜಾಜಿ ರಸ್ತೆ , ಆಜಾದ್ ರಸ್ತೆ , ಹೈದರಾಲಿ ಮೊಹಲ್ಲಾ ,ಗಫರ್ ಖಾನ್ ಮೊಹಲ್ಲಾ, ಜಾಕಿರ್ ಹುಸೇನ್ ಮೊಹಲ್ಲಾ , ಪಟ್ಟಣದ ಹಲವು ಬಡಾವಣೆಗಳಲ್ಲಿ ಬೀದಿಗಳ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳ ಕಾಟ ತಪ್ಪಿಸುವಲ್ಲಿ ಸ್ಥಳೀಯ ಪುರಸಭೆ ಅಧಿಕಾರಿಗಳು ಮತ್ತು ಪುರಸಭೆ ಸದಸ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಬೀದಿ ನಾಯಿಗಳ ಕಾಟದಿಂದ ಆರೋಗ್ಯ ಸಮಸ್ಯೆಗಳು ಉಂಟುವಾಗುತ್ತಿದೆ ನಾಯಿಗಳಿಂದ ಹರಡುವ ರೋಗಗಳು, ಸುಸ್ತು, ಮತ್ತು ಕೀಟಗಳು ಇತರ ಜೀವಿಗಳನ್ನು ಬಾಧಿಸುತ್ತವೆ. ಬೀದಿ ನಾಯಿಗಳು ಸಾಮಾನ್ಯವಾಗಿ ಜ್ವರ, ಕಾಂಟ್ಯಾರಿಯನ್ ಇತ್ಯಾದಿ ಕಾಯಿಲೆಗಳನ್ನು ಹರಿಸುತ್ತವೆ, ಇದರಿಂದ ಪಟ್ಟಣದಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟುವಾಗುತ್ತಿದೆ ಎಂದು ಸ್ಥಳೀಯರು ಹೇಳಲಾಗುತ್ತಿದೆ.
*ಮಾಂಸಭಕ್ಷಣೆಗೆ ನಾಯಿಗಳು:*
ಪಟ್ಟಣದಲ್ಲಿರುವ ಮಾಂಸದ ಅಂಗಡಿಗಳ ತ್ಯಾಜ್ಯಕ್ಕಾಗಿ ದಿನವಿಡಿ ಹತ್ತಾರು ನಾಯಿಗಳು ಕಾಯುತ್ತಾ ಇರುತ್ತವೆ. ರಾತ್ರಿಯಲ್ಲೂ ಇದೇ ಮಾಂಸದಂಗಡಿಗಳ ಮುಂದೆ ಇರುವ ರಸ್ತೆಗಳಲ್ಲಿ ಬೀಡು ಬಿಟ್ಟಿರುವ ನಾಯಿಗಳು ಬೈಕ್‌ಗಳ ಮೇಲೆರಗುತ್ತಿವೆ.
ಬೆಳಗಿನ ಜಾವ ವ್ಯಾಯಾಮ ಹೋಗುವ ಮಹಿಳೆಯರು ಮತ್ತು ವೃದ್ಧಾಪ್ಯ ಸ್ಥಳೀಯರು , ನಮಾಜ್ , ಅರಬ್ಬಿ ಮದ್ರಸಗಳಿಗೆ , ಶಾಲೆಗಳು ತೆರಳುವ ಮೇಲೆ ಮತ್ತು ಚಿಕ್ಕ ಮಕ್ಕಳಗಳ ಮೇಲೆ ನಾಯಿಗಳ ಗುಂಪು ದಾಳಿ ಮಾಡಲು ಮುಂದಾಗುವುದು , ಬೆಳಗಿನ ಹೊತ್ತಿನಲ್ಲೂಕಪ್ಪು ಬಣ್ಣದ ಪ್ಲಾಸ್ಟಿಕ್‌ಗಳಲ್ಲಿ ಯಾವುದೇ ತಿಂಡಿ, ತಿನಿಸುಗಳನ್ನು ಬೈಕ್‌ ಹಾಗೂ ಸೈಕಲ್‌ ಹ್ಯಾಂಡಲ್‌ಗೆ ಹಾಕಿಕೊಂಡು ಹೋಗುತ್ತಿರುವುದು ನಾಯಿಗಳ ಕಣ್ಣಿಗೆ ಬಿದ್ದರೆ, ಅವುಗಳನ್ನು ಬಾಯಿಯಿಂದ ಕಚ್ಚಿ ಕಿತ್ತುಕೊಳ್ಳುತ್ತಿವೆ. ಜಾಕಿರ್ ಹುಸೇನ್ ಮೊಹಲ್ಲಾ ಹಾಗೂ ಕೆಲ ಬಡಾವಣೆಗಳಲ್ಲಿ ನಾಯಿಗಳ ದಾಳಿಗೆ ಕುರಿ , ಮೇಕೆ ಮತ್ತು ಕೋಳಿಗಳು ಸಹ ಬಲಿ ಯಾಗಿದ್ದಾರೆ , ಚಿಕ್ಕಮಕ್ಕಳು ಅಂಗಡಿಗಳಿಂದ ಬಿಸ್ಕಿಟ್‌, ಬನ್‌ಗಳನ್ನು ತರುವುದಕ್ಕೂಹೆದರುತ್ತಿದ್ದಾರೆ.
ಈಗಲಾದರೂ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀದಿ ನಾಯಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು. ಅಲ್ಲದೇ ಮಾಂಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು