8:37 AM Sunday27 - September 2026
ಬ್ರೇಕಿಂಗ್ ನ್ಯೂಸ್
ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!: ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಮಾಜಿ ಸಿಎಂ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ವಿಜಯನಗರ | ಹೊಸಪೇಟೆ ಬಳಿ ರೈಲು ಡಿಕ್ಕಿಯಾಗಿ 8 ಎಮ್ಮೆಗಳು ಸ್ಥಳದಲ್ಲಿಯೇ ಸಾವು *ಕಾಡಾನೆ ನಿಯಂತ್ರಣ ಚಟುವಟಿಕೆಗೆ ವಾಹನಗಳ ಕೊಡುಗೆ: ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಕೇಂದ್ರ ಹಣಕಾಸು… ಬಂಗಾಳ ಕೊಲ್ಲಿಯಲ್ಲಿ ವಾಯಭಾರ ಕುಸಿತ: ಮಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ ಮಳೆ ಅ.11ರಿಂದ ಕೆಆರ್‌ಎಸ್‌ನಲ್ಲಿ ಸಂಪ್ರದಾಯಬದ್ಧ ಕಾವೇರಿ ಆರತಿ: ಮುಖ್ಯಮಂತ್ರಿ ಉದ್ಘಾಟನೆ *ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ*

ಇತ್ತೀಚಿನ ಸುದ್ದಿ

ಕುಲಶೇಖರ ಚರ್ಚ್ ಸಭಾಭವನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ‘ಶೌರ್ಯ’ ಕರಾಟೆ ಚಾಂಪಿಯನ್‌ಶಿಪ್

07/09/2024, 20:17

ಮಂಗಳೂರು (reporterkarnataka.com) : ಕಡಲನಗರಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸೆಲ್ಫ್​ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೋಜೋ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ‘ಶೌರ್ಯ’ ಕರಾಟೆ ಚಾಂಪಿಯನ್‌ಶಿಪ್, ನಗರದ ಕುಲಶೇಖರ ಚರ್ಚ್ ಸಭಾಭವನದಲ್ಲಿ ಆರಂಭವಾಗಿದ್ದು, ಸೆ. 8 ರವರೆಗೆ ನಡೆಯಲಿದೆ.
ಅಂತಾರಾಷ್ಟ್ರೀಯ ಮಟ್ಟದ ಈ ಸ್ಪರ್ಧೆಯಲ್ಲಿ, ದೇಶ – ವಿದೇಶಗಳ 1,500ಕ್ಕೂ ಅಧಿಕ ಕರಾಟೆ ಪಟುಗಳು ಭಾಗವಹಿಸಿದ್ದಾರೆ.
ಜಪಾನ್, ಶ್ರೀಲಂಕಾ,ಮಲೇಷ್ಯಾ,`ಜೋರ್ಡಾನ್, ತಾಂಜಾನಿಯಾ ಮುಂತಾದ ದೇಶಗಳಿಂದ ತಂಡಗಳು ಭಾಗವಹಿಸುತ್ತಿವೆ. ಮುಖ್ಯ ತೀರ್ಪುಗಾರರು ಕರಾಟೆಯ ಕೇಂದ್ರಸ್ಥಾನ ಜಪಾನ್‌ನಿಂದ ಆಗಮಿಸಿದ್ದಾರೆ. ವಿಜೇತರಿಗೆ ಸರ್ಟಿಫಿಕೆಟ್ ಹಾಗೂ ಪದಕ ನೀಡಲಾಗುತ್ತಿದೆ. ಮೊದಲ ದಿನ 6 ರಿಂದ 14 ವರ್ಷದೊಳಗಿನ ಎಲ್ಲ ವಿಧದ ಕಲರ್ ಬೆಲ್ಟ್​ಗಳ ಕರಾಟೆ ಪಟುಗಳಿಗೆ ಸ್ಪರ್ಧೆ ನಡೆಯಿತು. ಸೆ. 7ರಂದು 14 ವರ್ಷ ಮೇಲ್ಪಟ್ಟವರಿಗೆ ಪಂದ್ಯಾಟ ಜರುಗಿತು. 8 ರಂದು ಕಪ್ಪುಬೆಲ್ಟ್​ನವರ ಪಂದ್ಯಗಳು ನಡೆಯಲಿವೆ. ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ ನಡೆಯುತ್ತಿದೆ. ಕೋರ್ಡೆಲ್ ಹಾಲ್‌ನ ಒಳಭಾಗವನ್ನು ಮ್ಯಾಟ್ ಹಾಕಿ ಕರಾಟೆ ಪಂದ್ಯಾಟ ನಡೆಯುತ್ತಿದೆ.1,500 ರಷ್ಟು ಕರಾಟೆ ಪಟುಗಳು, ಜತೆಗೆ ತೀರ್ಪುಗಾರರು, ಟೀಂ ಮ್ಯಾನೇಜರ್‌ಗಳು ಪಾಲ್ಗೊಳ್ಳುತ್ತಿದ್ದಾರೆ. ಏಕಕಾಲದಲ್ಲಿ 7 ರಿಂದ 9 ಪಂದ್ಯಗಳನ್ನು ನಡೆಸಬಹುದಾಗಿದೆ. ವೈಯುಕ್ತಿಕ ಕಟಾ, ಟೀಂ ಕಟಾ, ಕುಮಿಟೆ ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು