ಇತ್ತೀಚಿನ ಸುದ್ದಿ
ಹಂಪನಕಟ್ಟೆ ಸುಲಭ್ ಶೌಚಾಲಯ ಬಳಿಯ ಫ್ರೀ ಪಾರ್ಕಿಂಗ್ ನಲ್ಲಿ ಶುಲ್ಕ ವಸೂಲಿ ಶುರು!: ವಿಶೇಷವೆಂದರೆ ಇಲ್ಲಿ ಸ್ವಚ್ಛತೆಯೇ ಇಲ್ಲ!!
02/09/2024, 21:06
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ನಗರದ ಹೃದಯ ಭಾಗದಲ್ಲಿರುವ ಹಂಪನಕಟ್ಟೆಯ ಸಾರ್ವಜನಿಕ ಶೌಚಾಲಯದ ಬಳಿ ಇರುವ ಕಾರು ಮತ್ತು ದ್ವಿಚಕ್ರ ವಾಹನ ಪಾರ್ಕಿಂಗ್ ಗೆ ಇದೀಗ ಶುಲ್ಕ ವಸೂಲಿ ಜಾರಿಯಾಗಿದೆ.
ಹಂಪನಕಟ್ಟೆಯ ಶೌಚಾಲಯದ ಬಳಿ ಇರುವ ಖಾಲಿ ಜಾಗದಲ್ಲಿ ಹಲವು ದಶಕಗಳಿಂದ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿತ್ತು. ಇದು ಫ್ರೀ ಪಾರ್ಕಿಂಗ್ ಪ್ರದೇಶ. ಆದರೆ ಇದೀಗ ಪಾರ್ಕಿಂಗ್ ಗೆ ಪೈಸಾ ವಸೂಲಿ ಶುರುವಾಗಿದೆ. ದ್ವಿಚಕ್ರ ವಾಹನಗಳಿಗೆ 10 ರೂ. ಹಾಗೂ ಕಾರುಗಳಿಗೆ 30 ರೂ. ವಸೂಲಿ ಮಾಡಲಾಗುತ್ತಿದೆ. ಸುಮಾರು ಒಂದು ತಿಂಗಳಿನಿಂದ ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಶುಲ್ಕ ಸಂಗ್ರಹ ಶುರುವಾಗಿದೆ. ವಿಚಿತ್ರವೆಂದರೆ ಇಲ್ಲಿ ಸ್ವಚ್ಛತೆಯ ಕೊರತೆಯಿದೆ. ಅಲ್ಲಲ್ಲಿ ತ್ಯಾಜ್ಯ ರಾಶಿ ಬಿದ್ದಿದೆ. ಪಕ್ಕದಲ್ಲೇ ಶೌಚಾಲಯವಿದೆ. ಸನಿಹದಲ್ಲೇ ಮಲ್ಟಿ ಸ್ಟೋರ್ಡ್ ಕಾರು ಪಾರ್ಕಿಂಗ್ ಕಾಮಗಾರಿ ಶುರುವಾಗಿ ಆರಂಭದಲ್ಲೇ ನಿಂತು ಹೋಗಿದೆ.