6:38 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಈ ಕುಗ್ರಾಮಕ್ಕೆ ಜೋಳಿಗೆಯೇ ಆ್ಯಂಬ್ಯುಲೆನ್ಸ್!: ಸಕಾಲದಲ್ಲಿ ಚಿಕಿತ್ಸೆ ಲಭಿಸದೆ 19ರ ಯುವಕ ಸಾವು; 3 ವರ್ಷದಲ್ಲಿ 3ನೇ ಬಲಿ!!

31/08/2024, 15:59

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಸಮೀಪದ ಕೋಣೆಗೂಡು ಗ್ರಾಮದ ಯುವಕನೊಬ್ಬ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಮೃತಪಟ್ಟ ದಾರುಣ ಘಟನೆ ನಡೆದಿದೆ. ಈ ಕುಗ್ರಾಮಕ್ಕೆ ಜೋಳಿಗೆಯೇ ಆ್ಯಂಬ್ಯುಲೆನ್ಸ್ ಆಗಿದೆ. ಜೋಳಿಗೆಯಲ್ಲೇ ಅನಾರೋಗ್ಯಪೀಡಿತ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ, ಮೃತದೇಹವನ್ನು ಜೋಳಿಗೆಯಲ್ಲೇ ವಾಪಸ್ ತರಲಾಗಿದೆ.


ಕೋಣೆಗೂಡು ಗ್ರಾಮದ ಅವಿನಾಶ್ ಎಂಬ 19ರ ಹರೆಯದ ಯುವಕ ಅನಾರೋಗ್ಯಕ್ಕೀಡಾಗಿದ್ದರು. ರಸ್ತೆ ಸಂಪರ್ಕವಿಲ್ಲದ ಕುಗ್ರಾಮ ಆಗಿರುವುದರಿಂದ ಅನಾರೋಗ್ಯಪೀಡಿತ ಯುವಕನನ್ನು ಬೆನ್ನ ಮೇಲೆ ಹಾಕಿ ಕೊಂಡು ಸಂಬಂಧಿಕರು ಮರದ ಕಾಲುಸಂಕವಿರುವ ತೋಡು ದಾಟಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದರು. ಮತ್ತೆ ಮೃತದೇಹವನ್ನು ಅದೇ ರೀತಿ ಜೋಳಿಗೆಯಲ್ಲಿ ಹಾಕಿ ಸಾಗಿಸಲಾಯಿತು. ಇಲ್ಲಿಗೆ ಆ್ಯಂಬ್ಯುಲೆನ್ಸ್ ಬಂದ್ರೂ ನಿಲ್ಲೋದು ಊರಿನಿಂದ 1.5 ಕಿ.ಮೀ. ದೂರದಲ್ಲಿ!. ಆ್ಯಂಬ್ಯುಲೆನ್ಸ್ ಬಂದ್ರು ಹಳ್ಳ ದಾಟೋಕ್ಕೆ ಆಗೋಲ್ಲ.
ಜೋಳಿಗೆಯಲ್ಲಿ ಹೊತ್ಕೊಂಡೆ ಕಾಲು ಸಂಕ ದಾಟಬೇಕು.
ಮೂರು ವರ್ಷದಲ್ಲಿ ಒಂದೇ ಗ್ರಾಮದ ಮೂರು ಜನ ಸಾವನ್ನಪ್ಪಿದ್ದಾರೆ. ಗಂಭೀರ ಕಾಯಿಲೆ ಬಿದ್ರೆ ಊರಿನ ಜನ ಇದ್ರೆ ಮಾತ್ರ ಜೀವ ಉಳಿಯೋದು ಎನ್ನುವ ಪರಿಸ್ಥಿತಿ ಇದೆ.
ಜೀವ ಉಳಿಸಿಕೊಳ್ಳೋಕೆ ಸೇತುವೆ ರಸ್ತೆ ಮಾಡಿ‌ ಎಂದು ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಕೋಣೆಗೂಡು ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು