11:08 PM Tuesday22 - April 2025
ಬ್ರೇಕಿಂಗ್ ನ್ಯೂಸ್
ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ…

ಇತ್ತೀಚಿನ ಸುದ್ದಿ

ತೀರ್ಥಹಳ್ಳಿಯಲ್ಲಿ ವಿಮೆ ಇಲ್ಲದೆ ಓಡಾಡುತ್ತಿರುವ ಸರಕಾರಿ ವಾಹನ: ಸಾರ್ವಜನಿಕರಿಗೊಂದು, ಸರಕಾರಕ್ಕೊಂದು ನ್ಯಾಯ ಸರಿಯೇ? ಸಾರ್ವಜನಿಕರ ಪ್ರಶ್ನೆ

14/08/2024, 16:30

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ವಾಹನ ಓಡಿಸುವಾಗ ಸರಿಯಾದ ದಾಖಲೆಗಳನ್ನು ಇಟ್ಟುಕೊಂಡು ಹೋಗಬೇಕು ಎಂಬುವುದು ಕಾನೂನು, ಆ ಕಾನೂನನ್ನು ಪ್ರತಿಯೊಬ್ಬರು ಚಾಚು ತಪ್ಪದೆ ಮಾಡಲೇಬೇಕು. ವಾಹನಗಳಲ್ಲಿ ಸರಿಯಾದ ದಾಖಲಾತಿ ಇಟ್ಟುಕೊಳ್ಳದೆ ಹೋದರೆ ದಂಡ ಕಟ್ಟಬೇಕಾಗುತ್ತದೆ.
ಹೀಗೆ ಸಾರ್ವಜನಿಕರ ವಾಹನಗಳನ್ನು ತಡೆದು ದಾಖಲಾತಿಗಳನ್ನು ಪರಿಶೀಲನೆ ಮಾಡುವುದು ಸರಿ. ಆದರೆ ಸರ್ಕಾರಿ ವಾಹನಗಳಲ್ಲೇ ದಾಖಲೆ ಕಟ್ಟದಿದ್ದರೆ ಅದಕ್ಕೆ ಹೊಣೆ ಯಾರು? ದಂಡ ಯಾರಿಗೆ ಎಂಬ ಪ್ರೆಶ್ನೆ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಹೌದು, ತೀರ್ಥಹಳ್ಳಿಯ ತಾಲೂಕು ದಂಡಾಧಿಕಾರಿಗಳ ವಾಹನದ ವಿಮೆ (ಇನ್ಶೂರೆನ್ಸ್) 2023ರ ನವೆಂಬರ್ ನಲ್ಲೇ ಮುಗಿದಿದೆ (ಲ್ಯಾಪ್ಸ್ ಆಗಿದೆ) ಇಲ್ಲಿಯವರೆಗೆ ಯಾರು ಕೂಡ ಪ್ರೆಶ್ನೆ ಮಾಡಿಲ್ಲವೇ? ಅಥವಾ ಅದರ ಬಗ್ಗೆ ಯಾರು ಪರಿಶೀಲನೆ ಮಾಡಲಿಲ್ಲವೇ ಎಂಬ ಅನುಮಾನ ಮೂಡಿದೆ. ಪ್ರತಿನಿತ್ಯ ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲನೆ ನಡೆಸುವ ಅಧಿಕಾರಿಗಳು ಸರ್ಕಾರಿ ವಾಹನದ ಬಗ್ಗೆ ಗಮನ ಹರಿಸಲಿಲ್ಲವೇ? ಅಥವಾ ಸರ್ಕಾರಿ ವಾಹನಗಳಲ್ಲಿ ದಾಖಲಾತಿ ಇರದಿದ್ದರೆ ಪರವಾಗಿಲ್ಲವೇ? ರಸ್ತೆಯಲ್ಲಿ ಏನಾದರು ಅವಘಡ ಸಂಭವಿಸಿದರೆ ಯಾರು ಹೊಣೆ? ಎಂಬುದಾಗಿ ಸಾರ್ವಜನಿಕರು ಪ್ರೆಶ್ನೆ ಮಾಡುತ್ತಿದ್ದಾರೆ.
ವಿಷಯ ತಿಳಿದು ತಾಲೂಕು ಕಚೇರಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ವಿಮೆ ನವೀಕರಿಸದಿರುವ ಬಗ್ಗೆ ಕೇಳಿದಾಗ ಇನ್ಶೂರೆನ್ಸ್ ಹಣವನ್ನು ಈಗಾಗಲೇ ಕಟ್ಟಿದ್ದೇವೆ. ಆದರೆ ಬಾಂಡ್ ಇನ್ನೂ ನಮಗೆ ಬಂದಿಲ್ಲ ಎಂದು ಸಂಬಂಧ ಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಅದೇನೇ ಆಗಲಿ ಸರ್ಕಾರಿ ವಾಹನಗಳಿಗೆ ಒಂದು ನ್ಯಾಯ ಸಾರ್ವಜನಿಕರ ವಾಹನಗಳಿಗೆ ಒಂದು ನ್ಯಾಯವೇ? ಅದಕ್ಕೆ ದಂಡ ಇಲ್ಲವೇ? ಹೀಗೆ ಮಾಡುವುದು ಸರಿಯೇ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು