ಇತ್ತೀಚಿನ ಸುದ್ದಿ
ಅಂತರಗಂಗೆಯಲ್ಲಿ ಹೊಸ ದ್ಯಾವಮ್ಮ ಮೂರ್ತಿ ಪ್ರತಿಷ್ಠಾಪನೆ: ಗ್ರಾಮಸ್ಥರಿಂದ ಭವ್ಯ ಮೆರವಣಿಗೆ
26/08/2021, 10:45
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಮಸ್ಕಿ ತಾಲೂಕಿನ ಹಿರೇ ಅಂತರಗಂಗೆ ಗ್ರಾಮದಲ್ಲಿ ದ್ಯಾಮಮ್ಮ ಹೊಸ ಮೂರ್ತಿಯನ್ನು ಇಲಕಲ್ಲದಿಂದ ಬಾರಿ ವಿಜ್ರಂಭಣೆಯಿಂದ ಕಳಸ ಕನ್ನಡಿ, ಭಜನೆ ಬಾಜಿ ಡೊಳ್ಳು ಸಡಗರ ಸಂಭ್ರಮದಿಂದ ಅಂತರಗಂಗೆಗೆ ತರಲಾಯಿತು.
ಸುತ್ತಮುತ್ತಲ ಗ್ರಾಮಗಳಾದ ಮ್ಯಾದರಾಳ ಹಟ್ಟಿ , ಮೆದಿಕಿನಾಳ, ಬೈಲ್ ಗುಡ್ಡ, ನಾಗರಬೆಂಚಿ, ಅಂತರಗಂಗೆ ತಾಂಡಾ ಗ್ರಾಮಸ್ಥರಿಂದ ಟ್ರ್ಯಾಕ್ಟರ್ ನಲ್ಲಿ ಭವ್ಯ ಮೆರವಣಿಗೆ ಮೂಲಕ ಜೈಕಾರ ಹಾಕುತ್ತಾ ದ್ಯಾಮಮ್ಮ ಮೂರ್ತಿಯನ್ನು ತರಲಾಯಿತು.
ದ್ಯಾಮಮ್ಮ ದೇವಿಗೆ ಪಾರ್ವತಮ್ಮ ಕಾವಲಿ ಅವರ ಪೂಜಾರಿಯಾಗಿದ್ದು, ಅವರು ನಿಧನ ಬಳಿಕ ಅವರ ಕುಟುಂಬದವರ ಸೊಸೆ ಗುಡಿ ಪೂಜೆ ಪೂಜಾರಿ ವ್ಯವಸ್ಥೆಯ ನೋಡಿಕೊಂಡು ಬರುತ್ತಿದ್ದಾರೆ. ದೂರದ ಊರಾದ ಬಳ್ಳಾರಿ, ಸಿರುಗುಂಪ, ದಢೆಸುಗುರ್,ಮುದುಗಲ್,ಲಿಂಗಸುಗೂರು ಮುಂತಾದ ಕಡೆಗಳಿಂದ ಭಕ್ತರು ದ್ಯಾಮಮ್ಮ ಗುಡಿಗೆ ದರ್ಶನ ಮಾಡಲು ಆಗಮಿಸುತ್ತಾರೆ. ಕುಷ್ಟಗಿ ಶಾಸಕರು ಅಮರೇಗೌಡ ಪಾಟೀಲ್ ಬಯ್ಯಪೂರ್ ಅನುದಾನದಲ್ಲಿ ಗುಡಿ ಕಟ್ಟಡ ನಿರ್ಮಿಸಲಾಗಿದೆ. ಮಾಜಿ ಶಾಸಕ ಪ್ರತಾಪ ಗೌಡರು ಅನುದಾನ ಕೊಟ್ಟಿದ್ದರು.
ಮಂಗಳಾರತಿ, ಭಜನೆ, ಡೊಳ್ಳು ಕುಣಿತದೊಂದಿಗೆ ಅಮ್ಮನನ್ನು ಗುಡಿ ಒಳಗೆ ಕರೆತರಲಾಯಿತು. ಭಕ್ತರು ಸುತ್ತಮುತ್ತಲಿನ ದರ್ಶನ ಪಡೆದು ಪುನೀತರಾದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಗುರಪ್ಪ ಗೋಮರ್ಸಿ, ವೀರೇಶ್ ಚಿಕ್ಕ ಅಂತರಗಂಗೆ ಗವಿಯಪ್ಪ ಗೌಡ, ದುರ್ಗಣ್ಣ ಕುರ್ಲಿ,ಈರಣ್ಣ ಕುರ್ಲಿ , ವಾಲ್ಮೀಕಿ ಸಮಾಜ ಯುವ ಮಿತ್ರರು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.