1:09 AM Wednesday15 - October 2025
ಬ್ರೇಕಿಂಗ್ ನ್ಯೂಸ್
ಕಾವೇರಿಮನೆ ಚಂದನ್ ಗೆ ಯುಎನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪ್ರದಾನ ಇಡೀ ರಾಜ್ಯಕ್ಕೆ ಸುಭಿಕ್ಷೆ, ಶಾಂತಿ, ನೆಮ್ಮದಿ, ಮಳೆ- ಬೆಳೆ-ರೈತರ ಸಮೃದ್ಧಿಗಾಗಿ ಹಾಸನಾಂಬೆಗೆ ಪ್ರಾರ್ಥನೆ… ಮೆಡಿಕಲ್‌ ಅಗತ್ಯತೆಗೆ ಪೂರೈಕೆಗೆ ಡ್ರೋನ್‌ ಬಳಕೆಗೆ ಚಾಲನೆ: ಏರ್‌ಬೌಂಡ್‌ ಸಂಸ್ಥೆಯಿಂದ ಡ್ರೋನ್‌ ಮೂಲಕ… Shivamogga | ತೀರ್ಥಹಳ್ಳಿ ಬಾಳೆಬೈಲು ಬಳಿ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಸಾವು ಮಡಿಕೇರಿಯ ಚೇರಂಬಾಣೆಯಲ್ಲಿ ಅಸ್ಸಾಂ ಕಾರ್ಮಿಕರಿಗೆ ಸ್ಥಳೀಯನಿಂದ ಗೋವು ಮಾಂಸ ಮಾರಾಟ: ಆರೋಪಿ ಅರೆಸ್ಟ್ ವಿಜ್ಞಾನ ಓದಿಯೂ ಮೌಡ್ಯ ನಂಬುತ್ತೀರಿ ಅಂದರೆ ನೀವು ಓದಿದ್ದೇ ದಂಡ: ಸಿಎಂ ಸಿದ್ದರಾಮಯ್ಯ Chikkamagaluru | ಬಿಂಡಿಗ ದೇವೀರಮ್ಮನ ಜಾತ್ರಾ ಮಹೋತ್ಸ: ಬೆಟ್ಟವೇರಲಿರುವ ಭಕ್ತ ಸಾಗರ; ಜಿಲ್ಲಾಡಳಿತದಿಂದ… ಅಕ್ರಮ ಗೋವು ಸಾಗಾಟ ಮಾಡುತ್ತಿದ್ದ ವಾಹನ ಪಲ್ಟಿ: ಗಾಯಗೊಂಡ ಗೋವುಗಳನ್ನು ಬಿಟ್ಟು ಆರೋಪಿಗಳು… ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ನಡೆ ನಿಗೂಢ: ಸಚಿವ ಎಚ್. ಸಿ. ಮಹದೇವಪ್ಪ ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್

ಇತ್ತೀಚಿನ ಸುದ್ದಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಶಿವಮೊಗ್ಗದ ನಿವಾಸಕ್ಕೆ ಮುತ್ತಿಗೆ ಯತ್ನ: ಸಿಎಂ ಸಿದ್ದರಾಮಯ್ಯ ಪರ ಪ್ರತಿಭಟನೆ

09/08/2024, 18:57

ಶಿವಮೊಗ್ಗ(reporterkarnataka.com): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಜೆಡಿಎಸ್ ಜತೆ ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ‌.ವೈ.ವಿಜಯೇಂದ್ರ ಅವರ ಶಿವಮೊಗ್ಗದ ನಿವಾಸಕ್ಕೆ ಕರ್ನಾಟಕ ರಾಜ್ಯ ಶೋಷಿತ ವರ್ಗಗಳ ಮಹಾ ಒಕ್ಕೂಟ ಮುತ್ತಿಗೆ ಹಾಕಲು ಯತ್ಬಿಸಿ ಪ್ರತಿಭಟನೆ ನಡೆಸಿತು.
ಶಿವಮೊಗ್ಗದ ನಂಜಪ್ಪ ಬಡಾವಣೆಯ ಮನೆಗೆ ಇಂದು ಮಹಾ ಒಕ್ಕೂಟ ಮುತ್ತಿಗೆ ಹಾಕಿ ಪ್ರತಿಭಟನೆಗೆ ಯತ್ನಿಸಿತು ಮುತ್ತಿಗೆಗೆ ಮುನ್ನವೇ ರಸ್ತೆಗೆ ಬ್ಯಾರಿಕೇಡ್ ಹಾಕಿ ಪೊಲೀಸರು ತಡೆದರು. ಪ್ರತಿಭಟನಾಕಾರರು ಸಿದ್ದರಾಮಯ್ಯ ಅವರ ಫೋಟೋ ಪ್ರದರ್ಶಿಸುತ್ತಾ, ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಎಲ್ಲಾ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಲಾಯಿತು. ಪ್ರತಿಭಟನಾಕಾರರು ಮೊದಲ ಬ್ಯಾರಿಕೇಡ್​ ಅನ್ನು ನೂಕಿ ಮುಂದೆ ಸಾಗಿದರು. ಎರಡನೇ ಬ್ಯಾರಿಕೇಡ್​ನಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆದರೂ ಬ್ಯಾರಿಕೇಡ್​ ಮೇಲೆ ಹತ್ತಿ ಒಳ ನುಗ್ಗಲು ಯತ್ನಿಸಿದರು‌. ಈ ವೇಳೆ ಪೊಲೀಸರು ಎಲ್ಲಾ ಪ್ರತಿಭಟನಗಾರರನ್ನು ಬಂಧಿಸಿ, ತಮ್ಮ ವಾಹನದಲ್ಲಿ ಕರೆದುಕೊಂಡು ಹೋದರು.
ಒಕ್ಕೂಟದ ಸಂಚಾಲಕ ಕೆ.ರಂಗನಾಥ್ ಅವರು ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಸಿಎಂ ಸಿದ್ದರಾಮಯ್ಯ ಮೇಲೆ ಮುಡಾದ ವಿಚಾರದಲ್ಲಿ ಸುಳ್ಳು ಆರೋಪ ಮಾಡಿ, ಪಾದಯಾತ್ರೆ ನಡೆಸುತ್ತಿದ್ದಾರೆ. ಇವರ ಮೇಲೆಯೇ ಸಾಕಷ್ಟು ಆರೋಪಗಳು ಇರುವಾಗ ಯಾವುದೇ ತಪ್ಪು ಮಾಡದ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುತ್ತಿರುವುದು ಖಂಡನೀಯ. ಇದರಿಂದ ನಾವು ವಿಜಯೇಂದ್ರ ಮನೆಗೆ ಮುತ್ತಿಗೆ ಹಾಕುವ ಯತ್ನ ಮಾಡಿದ್ದೇವೆ” ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮಹಾ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್‌.ಎಂ.ಶರತ್ ಪಾಲಕ್ಷ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು