5:04 AM Wednesday30 - October 2024
ಬ್ರೇಕಿಂಗ್ ನ್ಯೂಸ್
ಪಿಎಲ್ಐ ಯೋಜನೆಯಡಿ ಮೆರಿಲ್ ಸುಧಾರಿತ ಉತ್ಪಾದನಾ ಸೌಲಭ್ಯ: ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಜಿ ಸಂಸದ ದ್ರುವನಾರಾಯಣ್ ಸ್ಮರಣಾರ್ಥ ಆಶ್ರಯ ಚಾರಿಟೀಸ್ ವತಿಯಿಂದ ಬಡಬಗ್ಗರಿಗೆ ವಿವಿಧ ಸವಲತ್ತು… ಅಧ್ಯಯನ ಪ್ರವಾಸ: ದಕ್ಷಿಣ ಕೊರಿಯಾಕ್ಕೆ ಸ್ಪೀಕರ್ ಖಾದರ್ ಭೇಟಿ; ಶಿಕ್ಷಣ, ಆರೋಗ್ಯ, ವ್ಯಾಪಾರ… ರಾಜ್ಯ ಸರಕಾರಿ ನೌಕರರ ಸಂಘದ ನಂಜನಗೂಡು ಶಾಖೆ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯ ಕೊಲೆ ಪ್ರಕರಣ: ಉಪ್ಪಾರ ಸಮಾಜದಿಂದ ವಿಶೇಷ ಸಭೆ;… ಯುವತಿ ಆತ್ಮಹತ್ಯೆ ಯತ್ನಕ್ಕೆ ಪೊಲೀಸ್ ಇಲಾಖೆ ವೈಫಲ್ಯ ಕಾರಣ: ಶಾಸಕ ಡಾ. ಭರತ್… ಬೆಳಗಾವಿಯಲ್ಲಿ ರಾಜ್ಯೋತ್ಸವ ದಿನದಂದು ಕರಾಳ ದಿನಾಚರಣೆ ಆಚರಿಸಲು ಅವಕಾಶ ಬೇಡ: ಕರವೇ ಕಿತ್ತೂರಿನ‌ ಇತಿಹಾಸ ರಾಷ್ಟ್ರಮಟ್ಟಕ್ಕೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿ: ಸಚಿವ ಸತೀಶ್ ಜಾರಕಿಹೊಳಿ ಬೇಲೆಕೇರಿ ಬಂದರಿನಿಂದ 11,312 ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣ: ಸಿಬಿಐನಿಂದ ಕಾಂಗ್ರೆಸ್… ಬರೋಬ್ಬರಿ 16 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು…

ಇತ್ತೀಚಿನ ಸುದ್ದಿ

ಮರ ಬಿದ್ದು ಮನೆ ಜಖಂ: ಪವಾಡಸದೃಶ ಮಲಗಿದ್ದ ಮನೆಮಂದಿ ಅಪಾಯದಿಂದ ಪಾರು

07/08/2024, 20:00

 

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com ಕೊಟ್ಟಿಗೆಹಾರ ಸಮೀಪದ ಜಾವಳಿ ಬಳಿಯ ಮಲೆಮನೆ ಗ್ರಾಮದಲ್ಲಿ ಬುಧವಾರ ಮುಂಜಾನೆ ಮರವೊಂದು ಬಿದ್ದು ಮನೆ ಜಖಂ ಗೊಂಡಿರುವ ಘಟನೆ ನಡೆದಿದೆ. ಬಾಳೂರು ಹೋಬಳಿಯ ಜಾವಳಿ ಸಮೀಪದ ಮಲೆಮನೆ ಗ್ರಾಮದ ಸುಧಾಕರ್ ಎಂಬವರ ಮನೆ ಮೇಲೆ ಬುಧವಾರ ಮುಂಜಾನೆ ಎಲ್ಲರೂ ಮಲಗಿದ್ದ ವೇಳೆ ಬೃಹತಾಕಾರದ ಬೈನೇಮರ ಬಿದ್ದು ಮನೆಯ ಮೇಲ್ಛಾವಣಿ ಹೆಂಚುಗಳು ಪುಡಿಯಾಗಿ ಹಾನಿ ಸಂಭವಿಸಿದೆ. ಅದೃಷ್ಟವಶಾತ್ ಮಲಗಿದ್ದವರಿಗೆ ಯಾವುದೇ ಹಾನಿ ಸಂಭವಿಸಿಲ್ಲ.

ಪರಿಹಾರಕ್ಕೆ ಒತ್ತಾಯ: ಸುಧಾಕರ್ ಅವರು ಬಡ ಕುಟುಂಬದಿಂದ ಬಂದಿದ್ದು ಮೂಲತಃ ಕೃಷಿಕರಾಗಿದ್ದಾರೆ. ಬುಧವಾರ ಮರ ಬಿದ್ದು ಮನೆ ಕೂಡ ಜಖಂಗೊಂಡಿದೆ. ಮಳೆಗಾಲವಾದ್ದುದರಿಂದ ಮನೆಯು ಶಿಥಿಲವಾಗಿದೆ. ಇದರಿಂದ ಸಂಬಂಧಿಸಿದ ಅಧಿಕಾರಿಗಳು ಮನೆ ದುರಸ್ತಿಗೆ ಪರಿಹಾರ ನೀಡಬೇಕೆಂದು ಸುಧಾಕರ್ ಆಗ್ರಹಿಸಿದ್ದಾರೆ

ಇತ್ತೀಚಿನ ಸುದ್ದಿ

ಜಾಹೀರಾತು