ಇತ್ತೀಚಿನ ಸುದ್ದಿ
ಕೊಪ್ಪಳ ಜಿಲ್ಲಾ ಉತ್ಸವದಲ್ಲಿ 17ನೇ ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನ: ಸಮ್ಮೇಳನಾಧ್ಯಕ್ಷರಾಗಿ ಬಾನಾಪುರದ ರಥಶಿಲ್ಪಿ ಯಲ್ಲಪ್ಪ ಬಡಿಗೇರ ಆಯ್ಕೆ
07/08/2024, 00:13
ಕೊಪ್ಪಳ(reporterkarnataka.com): ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ 17ನೇ ಬಾರಿಗೆ ಕೊಪ್ಪಳ ಜಿಲ್ಲಾ ಉತ್ಸವವನ್ನು ಅಗಸ್ಟ್ 24, 25 ಮತ್ತು 26ರಂದು ಮೂರು ದಿನಗಳ ಕಾಲ ಕೊಪ್ಪಳ ಸಾಹಿತ್ಯ ಭವನದಲ್ಲಿ ನಡೆಸಲಿದೆ.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಸಾಂಸ್ಕೃತಿಕ ಪರಂಪರೆ ಮತ್ತು ಸ್ಥಳೀಯ ಗ್ರಾಮೀಣ ಜಾನಪದ ಕಲೆಗಳ ಅನಾವರಣ ನಡೆಯಲಿದೆ. ಜಿಲ್ಲೆಯ ಪ್ರತಿಭಾವಂತ ಪ್ರತಿಭೆಗಳ ಪ್ರತಿಭಾ ಶೋಧ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಿದೆ ಎಂದು ಉತ್ಸವದ ಸಂಚಾಲಕ ಮತ್ತು ನಾಗರಿಕರು ವೇದಿಕೆ ಅಧ್ಯಕ್ಷ ಮಹೇಶ್ ಬಾಬು ಸುರ್ವೆ ತಿಳಿಸಿದರು.
ನಿನ್ನೆ ಕೊಪ್ಪಳದಲ್ಲಿ ನಡೆದ ಕೊಪ್ಪಳ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ ಯುವ ಸಾಹಿತಿ ಕಲಾವಿದರಿಗೆ ವೇದಿಕೆಯ ಒದಗಿಸಿಕೊಡುವ ಬಗ್ಗೆ ಚರ್ಚಿಸಿ ಹೆಚ್ಚಿನ ಅವಕಾಶವನ್ನು ಸ್ಥಳೀಯ ಕಲಾವಿದರಿಗೆ ನೀಡಲು ನಿರ್ಣಯಿಸಲಾಯಿತು
17ನೇಯ ತಿರುಳು ಗನ್ನಡ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲಾಯಿತು. ಕೊನೆಗೆ
ಕೊಪ್ಪಳ ಜಿಲ್ಲೆಯ ಬಾನಾಪುರ ಗ್ರಾಮದ ಶ್ರೀ ಗವಿಸಿದ್ದೇಶ್ವರ ಶಿಲ್ಪಕಲಾ ಕೇಂದ್ರದ ರಥಶಿಲ್ಪಿಗಳಾದ ಯಲ್ಲಪ್ಪ ಬಡಿಗೇರ ಅವರನ್ನ
17ನೇ ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಮೂಲತಃ ಕರಕುಶಲತೆಯಲ್ಲಿ ಹಾಗೂ ಮರಗೆತ್ತನೆಯಲ್ಲಿ ವಿಶೇಷ ನೈಪುಣ್ಯತೆ ಪಡೆದಿರುವ ಎಲ್ಲಪ್ಪ ಬಡೀಗೇರ ಭಾನಾಪುರದವರು ಈಗಾಗಲೇ ಸುಮಾರು ನೂರಕ್ಕೂ ಹೆಚ್ಚು ರಥಗಳನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಮಾಡಿಕೊಟ್ಟಿದ್ದಾರೆ.
ಅವರ ರಥ ಕ್ಷೇತ್ರದ ಸೇವೆಗಾಗಿ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ .
ಅವರ ರಥ ಶಿಲ್ಪಕ್ಷೇತ್ರದ ಸೇವೆಯನ್ನ ಪರಿಗಣಿಸಿ 25ರಂದು ನಡೆಯುವ ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನದ ಸರ್ವಧ್ಯಕ್ಷರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಪುಸ್ತಕ ಪ್ರಕಾಶಕರ ಸಮ್ಮೇಳನ ಮಕ್ಕಳ ಸಾಂಸ್ಕೃತಿಕ ನಡೆಸಲಾಗುವುದೆಂದು ತಿಳಿಸಿದರು
ಹಿರಿಯ ಸಾಹಿತಿ ಜಿ ಎಸ್ ಗೋನಾಳ್ ಪೂರ್ವಭಾವಿ ಸಭೆಗೆ ಆಗಮಿಸಿದ ಆಸಕ್ತರನ್ನ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡುತ್ತಾ ಜಿಲ್ಲೆಯ ಪ್ರತಿಭಾವಂತ ಹಾಗೂ ಯುವ ಸಾಹಿತಿ ಮತ್ತು ಕಲಾವಿದರಿಗೆ ಜಿಲ್ಲಾ ಉತ್ಸವದ ವೇದಿಕೆಯಲ್ಲಿ ಅವಕಾಶ ನೀಡುವ ಮೂಲಕ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.
ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿನಂತಿಸಿದರು.
ಹಿರಿಯ ಪತ್ರಕರ್ತ ಎಂ. ಸಾಧಿಕ ಅಲಿ ಮಾತನಾಡುತ್ತಾ,
ಜೆ.ಎಚ್. ಪಟೇಲರು ಏಳು ಜಿಲ್ಲೆಗಳನ್ನ ತಮ್ಮ ಅವಧಿಯಲ್ಲಿ ರಚಿಸಿದರು ನಮ್ಮ ಕೊಪ್ಪಳ ಜಿಲ್ಲೆ ಮಾತ್ರ ನಿರಂತರವಾಗಿ ಜಿಲ್ಲಾ ಉತ್ಸವವನ್ನು ಮಾಡುತ್ತಾ ಬಂದಿದೆ. ಜಿಲ್ಲೆಯ ಜನಪ್ರತಿನಿಧಿಗಳು, ರಾಜಕಾರಣಿಗಳು, ಅಧಿಕಾರಿಗಳು ಜಿಲ್ಲಾ ಉತ್ಸವಕ್ಕೆ ಬೆಂಬಲಿಸಿ ಅದ್ದೂರಿಯಾಗಿ ಮಾಡಲು ಸಹಕಾರ ನೀಡಬೇಕೆಂದು ವಿನಂತಿಸಿದರು
ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರ ಪೂರ್ವಭಾವಿ ಸಭೆಯಲ್ಲಿ ಹಿರಿಯ ಸಾಹಿತಿ ಮಹಾಂತೇಶ್ ಮಲ್ಲನ್ ಗೌಡ, ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ ಹಿರಿಯ ಪತ್ರಕರ್ತ ವೈ. ಬಿ. ಜೂಡಿ, ಗೌರವಾಧ್ಯಕ್ಷ ಎಂ ಬಿ ಅಳವಂಡಿ, ಪತ್ರಕರ್ತರಾದ
ಶಿವಕುಮಾರ್ ಹಿರೇಮಠ,ಉಮೇಶ್ ಪೂಜಾರ್, ಉದಯ್ ತೋಟದ, ಪ್ರಕಾಶ್ ಮಂಗಳೂರು,ಮೇಘರಾಜ್ ಗೋನಾಳ್,
ಅತಿಕ ಅಹಮದ್, ಮಹೀಬೂಬ ಖಾನ್ ಸೇರಿದಂತೆ ಇತರ ಯುವ ಕವಿಗಳು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಮಹೇಶ ಬಾಬು ಸುರ್ವೆ ಮೊ : 9845338160
ಸಂಪರ್ಕಿಸಲು ಕೋರಲಾಗಿದೆ.