ಇತ್ತೀಚಿನ ಸುದ್ದಿ
ವಯನಾಡು ದುರಂತ: ಮರಣೋತ್ತರ ಶವ ಪರೀಕ್ಷೆಗೆ ಹಾಲ್ ಬಿಟ್ಟು ಕೊಟ್ಟ ಮದರಸ: ಎಲ್ಲೆಡೆ ಭಾರೀ ಶ್ಲಾಘನೆ
03/08/2024, 12:38
ವಯನಾಡು(reporterkarnataka.com):
ವಯನಾಡು ಭೂಕುಸಿತದ ಭೀಕರ ದುರಂತದಲ್ಲಿ ಮೃತಪಟ್ಟವರ ಮರಣೋತ್ತರ ಶವ ಪರೀಕ್ಷೆ (ಪೋಸ್ಟ್ಮಾರ್ಟಮ್) ನಡೆಸುವುದಕ್ಕಾಗಿ ಮದರಸವೊಂದು ತನ್ನ ಹಾಲ್ ಅನ್ನು ಬಿಟ್ಟು ಕೊಟ್ಟಿರುವುದಾಗಿ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಪೋಸ್ಟ್ ಮಾರ್ಟಂ ಸುಗಮವಾಗಿ ನಡೆಸಲು ಚುಳ್ಳಿಕ್ಕಾ ಎಂಬಲ್ಲಿಯ ಮದರಸವೊಂದು ತನ್ನ ಹಾಲ್ ಅನ್ನು ಬಿಟ್ಟುಕೊಟ್ಟಿದೆ. ಆ ಹಾಲ್ ನಲ್ಲಿ ಪೋಸ್ಟ್ಮಾರ್ಟಮ್ ನಡೆಸುವುದಕ್ಕೆ ಬೇಕಾದ ಏರ್ಪಾಡು ಮಾಡುತ್ತೇವೆ ಎಂದು ಸಚಿವೆ ಹೇಳಿದ್ದಾರೆ.
ವಯನಾಡು ಭೂಕುಸಿತಕ್ಕೆ ಸಂಬಂಧಿಸಿದ ಜಾತಿ- ಮತ ಬೇಧವಿಲ್ಲದೆ ಎಲ್ಲರೂ ಸಹಕರಿಸುತ್ತಿರುವ ಸುದ್ದಿಗಳು ಎಲ್ಲೆಡೆ ವರದಿಯಾಗುತ್ತಿವೆ. ಭೂಕುಸಿತದಲ್ಲಿ ಜೀವಂತವಾಗಿ ಉಳಿದಿರುವ ಶಿಶುಗಳಿಗೆ ಎದೆಹಾಲು ಉಣಿಸಲು ತಾಯಂದಿರು ಮುಂದೆ ಬರುತ್ತಿದ್ದಾರೆ. ಯುದ್ಧೋಪಾದಿಯಲ್ಲಿ ಪರಿಹಾರ ಕೆಲಸಗಳು ಕೂಡ ನಡೆಯುತ್ತಿವೆ. ಈ ನಡುವೆ ಮದರಸ ಒಂದು ತನ್ನ ಹಾಲನ್ನೇ ಪೋಸ್ಟ್ಮಾರ್ಟಮ್ ಗಾಗಿ ಬಿಟ್ಟು ಕೊಟ್ಟಿರುವುದು ಎಲ್ಲೆಡೆ ಬಾರಿ ಶ್ಲಾಘನೆಗೆ ಪಾತ್ರವಾಗಿದೆ.