ಇತ್ತೀಚಿನ ಸುದ್ದಿ
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯಪಾಲರಿಗೆ ಮನವಿ
02/08/2024, 19:28
ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ
info.reporterkarnataka@gmail.com
ವಾಲ್ಮೀಕಿ ಅಭಿವೃದ್ಧಿ ನಿಗಮ 187 ಕೋಟಿ ದುರ್ಬಳಕೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ತಹಶಿಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಮಿತಿ ಎಸ್ ಸಿ ಎಸ್ ಟಿ ಸಂಘಟನೆ ವತಿಯಿಂದ ಇಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ರಾಜಪಾಲರಿಗೆ ಪತ್ರದ ಮೂಲಕ ದುರ್ಬಳಕೆ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಮನವಿ ಪತ್ರ ನೀಡಲಾಯಿತು.
ಸಂಘಟನೆಯ ಬೆಳಗಾವಿ ಜಿಲ್ಲಾಧ್ಯಕ್ಷ ಪ್ರಕಾಶ್ ಕಲ್ಲಪ್ಪ ಖಾನಾಪುರಿ ಹಾಗೂ ಅಲ್ಪಸಂಖ್ಯಾತ ಬೆಳಗಾವಿ ಜಿಲ್ಲಾಧ್ಯಕ್ಷ ಜಾವಿದ್ ಮುಕಾಶಿ, ಮಹಿಳಾ ಖಾನಾಪುರ ತಾಲೂಕ ಅಧ್ಯಕ್ಷರಾದ ಸುಷ್ಮಾ ರಾಜು ಮಾದಾರ, ಬೆಳಗಾವಿ ಜಿಲ್ಲೆಯ ಘಟಕ ಅಧ್ಯಕ್ಷ ಹನುಮಂತ ಖಾನಾಪುರ್, ತಾಲೂಕಿನ ಉಪಾಧ್ಯಕ್ಷರಾದ ವಿಶ್ವನಾಥ್ ಹಾಗೂ ತಾಲೂಕಿನ ಘಟಕ ಅಧ್ಯಕ್ಷರಾದ ಸಂಜು ಬಾಳನ್ನವರ್, ಸಂತೋಷ್ ತಳವಾರ್, ಪ್ರಧಾನ ಕಾರ್ಯದರ್ಶಿ ಸಂತೋಷ ಖಾನಾಪುರಿ, ಹಲಕರ್ಣಿ ಗ್ರಾಮ ಅಧ್ಯಕ್ಷ ಗಜಾನನ್ ಪರಶುರಾಮ್ ತಳವಾರ ಹಾಗೂ ಹನುಮಂತ್ ನಾಯಕ್ ಕಾರ್ಯದರ್ಶಿ ಹಾಗೂ ಸಂಘಟನೆ ಎಲ್ಲಾ ಸದಸ್ಯರು ಮಹಿಳಾ ಸದಸ್ಯರು ಉಪಸ್ಥಿತರಿದ್ದರು.