6:45 PM Monday15 - September 2025
ಬ್ರೇಕಿಂಗ್ ನ್ಯೂಸ್
ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ

ಇತ್ತೀಚಿನ ಸುದ್ದಿ

ಬೀದಿ ವ್ಯಾಪಾರಿಗಳ ಮೇಲೆ ಪಾಲಿಕೆ ಬಿಜೆಪಿ ಆಡಳಿತ ಕಾರ್ಯಾಚರಣೆ: ಸಿಪಿಎಂ ಖಂಡನೆ

01/08/2024, 18:20

ಮಂಗಳೂರು(reporterkarnataka.com):ನಗರದ ರಸ್ತೆಬದಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿ ಜೀವನ ನಡೆಸುತ್ತಿರುವ ಬೀದಿಬದಿ ವ್ಯಾಪಾರಿಗಳ ಮೇಲೆ ಟೈಗರ್ ಕಾರ್ಯಾಚರಣೆಯ ಹೆಸರಿನಲ್ಲಿ ಅವರ ಅಂಗಡಿಗಳನ್ನು ದ್ವಂಸಗೊಳಿಸಿದ ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತ ನೀತಿಯನ್ನು ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಖಂಡಿಸಿದೆ.
ಮಂಗಳೂರು ನಗರದೆಲ್ಲೆಡೆ ಸಣ್ಣಪುಟ್ಟ ಗೂಡಂಗಡಿಗಳಲ್ಲಿ ವ್ಯಾಪಾರ ನಡೆಸುವ ಬೀದಿಬದಿ ವ್ಯಾಪಾರಿಗಳಿಗೆ ಯಾವುದೇ ಒಂದು ನೋಟೀಸು ಜಾರಿಗೊಳಿಸದೆ ಕನಿಷ್ಟ ಮುನ್ಸೂಚನೆಯೂ ನೀಡದೆ ಏಕಾಏಕಿ ಅಮಾಯಕರ ಸಣ್ಣಪುಟ್ಟ ಅಂಗಡಿಗಳನ್ನು ಕಾರ್ಯಾಚರಣೆಯ ಹೆಸರಲ್ಲಿ ಧ್ವಂಸಗೊಳಿಸಿರುವ ಪಾಲಿಕೆ ಬಿಜೆಪಿ ಆಡಳಿತ ಬಡವರ ವಿರೋಧಿಯಾಗಿ ವರ್ತಿಸಿದೆ. ಬಡವರು ನಡೆಸುವ ವ್ಯಾಪಾರ ವಹಿವಾಟಿನಿಂದ ನಗರದ ರಸ್ತೆಗಳಿಗೆ ಅಡಚಣೆಯುಂಟಾಗುವುದಾದರೆ ಶಾಸಕ ವೇದವ್ಯಾಸ ಕಾಮತರ ನೇತೃತ್ವದಲ್ಲಿ ಮಣ್ಣಗುಡ್ಡ ಮುಖ್ಯರಸ್ತೆಯಲ್ಲೇ ನಡೆದ ಫುಡ್ ಫೆಸ್ಟ್ ಆಹಾರ ಮೇಳದಿಂದ ಅಡಚಣೆಯುಂಟಾಗಲಿಲ್ಲವೇ ಎಂದು ಪಾಲಿಕೆ ಆಡಳಿತ ಉತ್ತರಿಸಬೇಕು. ಪಾಲಿಕೆ ವ್ಯಾಪ್ತಿಯ ಸುತ್ತಮುತ್ತ ರಾಜಾರೋಷವಾಗಿ ನಡೆಯುವ ಜೂಜುಕೇಂದ್ರಗಳು, ಇಸ್ಪೀಟ್ ಕ್ಲಬ್ ಗಳನ್ನು ತೆರವುಗೊಳಿಸಲು, ನಗರದ ರಸ್ತೆಗಳನ್ನೇ ಕಬಳಿಸಿ ಅಕ್ರಮವಾಗಿ ನಿರ್ಮಿಸಿದ ವಾಣಿಜ್ಯ ಸಂಕೀರ್ಣಗಳ ಮೇಲೆ ಯಾವೊಂದು ಕ್ರಮಕೈಗೊಳ್ಳಲು ಈವರೆಗೂ ಪಾಲಿಕೆ ಆಡಳಿತ ಮುಂದಾಗಿಲ್ಲ. ಅದೇ ಸಣ್ಣಪುಟ್ಟ ವ್ಯಾಪಾರಿಗಳು ರಸ್ತೆಬದಿ ನಡೆಸುವ ವ್ಯಾಪಾರಗಳನ್ನು ತೆರವುಗೊಳಿಸಲು ಪೊಲೀಸರ ಮೂಲಕ ಬಲಪ್ರಯೋಗದಿಂದ ತೆರವುಗೊಳಿಸುತ್ತಿರುವ ಕಾರ್ಯಾಚರಣೆ ಬಡವರ ಬಗೆಗೆ ಬಿಜೆಪಿಗಿರುವ ಕಾಳಜಿಯನ್ನು ಬಯಲುಗೊಳಿಸಿದೆ.
ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಆಡಳಿತ ಈ ಕೂಡಲೇ ಟೈಗರ್ ಕಾರ್ಯಾಚರಣೆಯನ್ನು ನಿಲ್ಲಿಸಬೇಕು. ಅಂಗಡಿ ಧ್ವಂಸಗೊಳಿಸಿ ವಶಪಡಿಸಿಕೊಂಡಿರುವ ಬೀದಿಬದಿ ವ್ಯಾಪಾರಿಗಳ ಸೊತ್ತುಗಳನ್ನು ಕೂಡಲೇ ಹಿಂತಿರುಗಿಸಬೇಕು. ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಲು ಕ್ರಮಕೈಗೊಳ್ಳಬೇಕು ಇಲ್ಲದೇ ಹೋದಲ್ಲಿ ಬೀದಿ ವ್ಯಾಪಾರಿಗಳು ನಡೆಸುವ ಹೋರಾಟಗಳ ಜೊತೆ ಸಿಪಿಎಂ ಪಕ್ಷ ನಿಲ್ಲಲಿದೆ ಎಂದು ಪಕ್ಷದ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು