ಇತ್ತೀಚಿನ ಸುದ್ದಿ
ಅತೀ ವೇಗದ ಚಾಲನೆ: ತೀರ್ಥಹಳ್ಳಿಯಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಕಾರು 3 ಪಲ್ಟಿ; ಪ್ರಯಾಣಿಕರು ಪಾರು
31/07/2024, 20:28
ರಶ್ಮಿ ಶ್ರೀಕಾಂತ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಅತೀ ವೇಗದಿಂದ ಚಲಿಸುತ್ತಿದ್ದ ಕಾರೊಂದು ಪಲ್ಟಿಯಾದ ಘಟನೆ ಬುಧವಾರ ಅರೆಕಲ್ಲು ಬಳಿ ನಡೆದಿದೆ.
ತಾಲೂಕಿನ ಮೇಗರವಳ್ಳಿ ಸಮೀಪದ ಅರೆಕಲ್ಲು ಬಳಿ ಬುಧವಾರ ಬೆಳಗ್ಗೆ ಅತೀ ವೇಗದಿಂದ ತೀರ್ಥಹಳ್ಳಿಯಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಬಿಟ್ಟರೆ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ.
ಕಾರು ಅರೆಕಲ್ಲು ಸಮೀಪದ ಅಳವಡಿಸಿದ್ದ ಬ್ಯಾರಿಕೇಡ್ ಬಳಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಉರುಳಿದ ರಭಸಕ್ಕೆ ಎರಡು ಮೂರು ಪಲ್ಟಿಯಾಗಿ ರಸ್ತೆಯ ಮಧ್ಯೆ ಅಂಗಾತವಾಗಿ ನಿಂತಿದೆ. ತಕ್ಷಣವೇ ಸ್ಥಳೀಯರೆಲ್ಲರೂ ಸೇರಿ ಕಾರು ಎತ್ತಿ ಮಣಿಪಾಲಕ್ಕೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.