ಇತ್ತೀಚಿನ ಸುದ್ದಿ
ಸಿಟಿ ಬಸ್ಸಿನಲ್ಲಿ ವಿದ್ಯಾರ್ಥಿಗೆ ಕಾಣಿಸಿಕೊಂಡ ಎದೆನೋವು: ಇಡೀ ಬಸ್ಸನ್ನೇ ಆ್ಯಂಬ್ಯುಲೆನ್ಸ್ ಮಾದರಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ದ ಚಾಲಕ; ಎಲ್ಲೆಡೆ ಶ್ಲಾಘನೆ
31/07/2024, 19:56
ಮಂಗಳೂರು(reporterkarnataka.com): ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿ ಯೊಬ್ಬನಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಟಿ ಬಸ್ ಚಾಲಕರು ಸಮಯಪ್ರಜ್ಞೆಯನ್ನು ತೋರಿಸಿ ಬಸ್ಸನೇ ನೇರವಾಗಿ ಆಸ್ಪತ್ರೆ ಆವರಣದೊಳಗೆ ಕೊಂಡೋಯ್ದು ಚಿಕಿತ್ಸೆ ನೀಡಿದ ಘಟನೆ ಇಂದು ನಗರದಲ್ಲಿ ನಡೆದಿದ್ದು, ಚಾಲಕನ ಸಮಯ ಪ್ರಜ್ಞೆಯ ಬಗ್ಗೆ ಸಾರ್ವಜನಿಕರು ಒಕ್ಕೊರಲಿನಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
13F ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ಸು ಎಂದಿನಂತೆ ಕುಳೂರು ಮಾರ್ಗವಾಗಿ ಪ್ರಯಾಣಿಸುತ್ತಿತ್ತು. ಅದರಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರೊಬ್ಬರಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಥಟ್ಟನೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಎಚ್ಚೆತ್ತುಕೊಂಡ ಬಸ್ಸಿನ ಚಾಲಕ ಮತ್ತು ನಿರ್ವಾಹಕರಾದ ಗಜೇಂದ್ರ ಕುಂದರ್ , ಮಹೇಶ್ ಪೂಜಾರಿ ಹಾಗೂ ಸುರೇಶ್ ಎನ್ನನ್ನು ಯೋಚಿಸದೆ ಎಲ್ಲಾ ಪ್ರಯಾಣಿಕರನ್ನು ಹೊತ್ತುಕೊಂಡು ಆಂಬುಲೆನ್ಸ್ ಮಾದರಿಯಲ್ಲಿ ಸೈರಾನ್ ಹಾಕಿಕೊಂಡು 6 ಕಿಮೀ. ದೂರವನ್ನು 6 ನಿಮಿಷಗಳಲ್ಲಿ ಕ್ರಮಿಸಿ ನಗರದ ಕಂಕನಾಡಿ ಆಸ್ಪತ್ರೆಯ ಹೊರಗಿನಿಂದ ಯಾರ ಅಪ್ಪಣೆಯನ್ನು ಕೇಳದೆ ಪ್ರಾಮುಖ್ಯತೆ ಯನ್ನು ಅರಿತು ಒಳ ಪ್ರವೇಶಿಸಿ ವಿದ್ಯಾರ್ಥಿ ಯನ್ನು casualty ಗೆ ಕ್ಲಪ್ತ ಸಮಯದಲ್ಲಿ ಸೇರಿಸಿ ಜೀವ ಉಳಿಸಿದ್ದಾರೆ. ಈ ಕೆಲಸ ನೋಡುತ್ತಿದ್ದ ಸಾರ್ವಜನಿಕರನ್ನು ಮೂಕ ವಿಸ್ಮಯರನ್ನಾಗಿಸಿದೆ ಹಾಗೂ ಅವರ ಪ್ರಶಂಷೆ ಗೆ ಪಾತ್ರ ವಾಗಿದೆ.