5:32 AM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಸೇವೆ ಮಾಡುವ ಅವಕಾಶದಿಂದ ವಂಚಿತನಾದ ನೋವು ಇದೆ: ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ

25/07/2024, 15:08

ಶಿವು ರಾಠೋಡ ನಾಲತವಾಡ ವಿಜಯಪುರ

info.reporterkarnataka@gmail.com

ಭಯ್ಯಾ ಬಯ್ಯಾ ಬಗಲಮೇ ಚೂರಿ ಎಂದು ನನ್ನನ್ನು ಸೋಲಿಸಿದರು. ನಾನಾರಿಗೂ ಮೋಸ ಮಾಡಿಲ್ಲದಿರುವುದೇ ನನ್ನ ಸಾಧನೆ. ಮೂರು ಬಾರಿ ನಿಮ್ಮ ಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸುವ ಅವಕಾಶವನ್ನು ಕೊಟ್ಟಿದ್ದಿರಿ. ಭಯ್ಯಾ ಬಯ್ಯಾ ಬಗಲಮೇ ಚೂರಿ ಎಂದು ತಿಳಿದವರು ನನ್ನನ್ನು ಸೋಲಿಸಿದರು, ನನಗೆ ಅಧಿಕಾರದ ಆಶೆಯ ಹುಚ್ಚಿಲ್ಲ, ನಾನು ಸೋತಾಗ ಐದು ವರ್ಷಗಳ ನಿಮ್ಮ ಸೇವೆ ಮಾಡುವ ಅವಕಾಶದಿಂದ ವಂಚಿತನಾದೆ ಎಂಬ ನೋವು ಒಂದು ಕ್ಷಣ ಕಾಡಿತು ಎಂದು ಕರ್ನಾಟಕ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.


ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ಸ್ಥಳೀಯ ರತ್ನ ಸಂಗಮ ಮಂಗಲ ಕಾರ್ಯಾಲಯದಲ್ಲಿ ಚಂದ್ರಶೇಖರ ಗಂಗನಗೌಡ್ರ ಗೆಳೆಯರ ಬಳಗದಡಿ ಹಮ್ಮಿಕೊಂಡಿದ್ದ ತಮ್ಮ 55ನೇ ಹುಟ್ಟುಹಬ್ಬ ಹಾಗೂ ಸಮಾಜ ಸೇವಕ ಚಂದ್ರಶೇಖರ ಗಂಗನಗೌಡ ಅವರ 45ನೇ ಹುಟ್ಡುಹಬ್ಬ ಆಚರಣೆಯ ಸಮಾರಂಭದಲ್ಲಿ ಮಾತನಾಡಿದರು.
ಎರಡು ಅಣೆಕಟ್ಟಿನ ನಡುವಿನ ಬಂಗಾರದ ಭೂಮಿಯಿದ್ದು, ಬಂಗಾರದ ಬೆಳೆ ಬೆಳೆ ಬೆಳೆಯಬೇಕು. ಭೂಮಿ ಇದ್ದವನೇ ಸಿರಿವಂತ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇದಕ್ಕೂ ಮೊದಲು ವೀರೇಶ್ವರ ಶರಣರ ಮಹಾಮನೆಯಲ್ಲಿ ಶರಣರಿಗೆ ಹಾಗೂ ಗೋ ಮಾತೆಗೆ ಪೂಜೆ ಸಲ್ಲಿಸಿದರು, ಡಾ.ಬಾಬಾಸಾಹೇಬ್ ಅಂಬೇಡ್ಕರ್, ಶರಣ ವೀರೇಶ್ವರರ, ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣಿ ಮಾಡಿ ಶರಣರ ಮಠದಿಂದ ಮೆರವಣಿಗೆ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಬಂದರು. ಕೆಂಚಪ್ಪ ಬಿರಾದಾರ, ಎಂ.ಎಸ್.ಪಾಟೀಲ, ಮುತ್ತು ಅಂಗಡಿ, ಮುನ್ನಾಧಣಿ ನಾಡಗೌಡ್ರ, ಗಿರೀಶ್ ಪಾಟೀಲ ಮಾತನಾಡಿದರು.
ರಾಜು ಹಾದಿಮನಿ ಕಾರ್ಯಕ್ತಮ ನಿರೂಪಿಸಿ ವಂದಿಸಿದರು. ಬಿಜೆಪಿ ಮುಖಂಡ ಬಿ.ಎಂ.ತಾಳಿಕೋಟಿ ವಕೀಲರು ಸೇರಿದಂತೆ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು