ಇತ್ತೀಚಿನ ಸುದ್ದಿ
ತುಂಬಿದ ಕೃಷ್ಣ ನದಿ ಜಲಾಶಯ: ಹೆಚ್ಚುವರಿ ನೀರು ಬಿಡುಗಡೆ; ರೈತರ ಮುಖದಲ್ಲಿ ಸಂತಸದ ನಗು
18/07/2024, 17:31
ಶಿವು ರಾಠೋಡ ಹುಣಸಗಿ ನಾರಾಯಣಪುರ ಯಾದಗಿರಿ
info.reporterkarnataka@gmail.com
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಲ್ಲಿ ಶುಕ್ರವಾರದಂದು ಅತಿ ಹೆಚ್ಚಾಗಿ ನೀರು ಸಂಗ್ರಹಣೆ ಆಗಿರುವುದರಿಂದ ನೀರನ್ನು ಹೊರ ಬಿಡಲಾಯಿತು.
ಹೌದು, ಮಹಾರಾಷ್ಟ್ರದಲ್ಲಿ ಭಾರಿ ಮಳೆ ಆಗಿರುವುದರಿಂದ ಆಲಿಮಟ್ಟಿ ಜಲಾಶಯದಿಂದ ಅತಿ ಹೆಚ್ಚು ನೀರು ಹೊರ ಬಿಡುತ್ತಿರುವುದರಿಂದ ಹೊರ ಬಿಡಲಾಯಿತು.
ಇಂದು 3:00 ಸುಮಾರಿಗೆ 22 ಕ್ರಸ್ಟ್ ಗೇಟ್ ಗಳ ಮೂಲಕ ಪ್ರಸ್ತುತ 491.75 ಮೀಟರ್ ನೀರು ಹೊರ ಬಿಡಲಾಯಿತು.
ಪ್ರಸ್ತುತ ಆಲಿಮಟ್ಟಿಯಿಂದ ಹೊರ ಬಿಡಲಾದ ನೀರು 70000 ಕಿಸರ್ಟ್ ನೀರು ಹರಿದು ಬರುತ್ತಿರುವ ಕಾರಣದಿಂದ ಕೃಷ್ಣಾ ನದಿ ಪ್ರಸ್ತುತ ಸುಮಾರು ಮೂರು ಗಂಟೆಯ ಹೊತ್ತಿಗೆ 68920 ಎಫೆಕ್ಟ್ ನೀರನ್ನು ಹೊರ ಬಿಡಲಾಯಿತು.
ಒಟ್ಟು ಪ್ರಸ್ತುತ ನೀರು ಸಂಗ್ರಹಣೆ ಕೃಷ್ಣಾ ನದಿಯಲ್ಲಿ 31.010 ಟಿಎಂಸಿ ನೀರು ಸಂಗ್ರಹಣೆಯಾಗಿದ್ದು ಅಂದರೆ ಸರಿಸುಮಾರು 93.09% ಕೃಷ್ಣಾ ನದಿಯಲ್ಲಿ ನೀರು ಸಂಗ್ರಹಣೆಯಾಗಿದೆ. ಅಂದರೆ ಕೃಷ್ಣಾ ನದಿಯಲ್ಲಿ ಪ್ರಸ್ತುತ ಒಟ್ಟು ನೀರು ಸಂಗ್ರಹಣೆಯಾಗುವ ಸಾಧ್ಯತೆ 492.25 ಎಮ್ ನಷ್ಟು ನೀರು ಇದೆ. ಒಟ್ಟಾರೆ 33.313 ಟಿಎಂಸಿ ನೀರು ನಮ್ಮ ನದಿಯಲ್ಲಿ ಸಂಗ್ರಹಣೆ ಆಗಬಹುದು ಪ್ರಭಾವಿ ಅಧಿಕಾರಿ ವಿಜಯೇಂದ್ರ ಅರಳಿ ಮಾಹಿತಿ ನೀಡಿದರು.