ಇತ್ತೀಚಿನ ಸುದ್ದಿ
ರಾಣಿ ಝರಿಯ ಮಣ್ಣಿನ ರಸ್ತೆಯಲ್ಲಿ ಬೈಕ್ ರೈಡರ್ ಗಳ ಎಲ್ಲೆ ಮೀರಿದ ಹುಚ್ಚಾಟ!!: ವೀಲಿಂಗ್ ಕಸರತ್ತು; ರೀಲ್ಸ್ ಗಾಗಿ ಏನೆಲ್ಲ ಕಿತಾಪತಿ!
15/07/2024, 20:41
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ರಾಣಿಝರಿಗೆ ಸಾಗುವ ರಸ್ತೆಯಲ್ಲಿ ಬೈಕ್ ರೈಡರ್ ಗಳ ಹುಚ್ಚಾಟಕ್ಕೆ ಪ್ರವಾಸಿಗರು ಭಾನುವಾರ ಬೇಸತ್ತು ಹೋಗಿದ್ದಾರೆ.
ಐದಾರು ಜನ ಯುವಕರು ಮೊದಲೇ ಕೆಸರುಮಯವಾಗಿದ್ದ ರಸ್ತೆಯಲ್ಲಿ ರೀಲ್ಸ್ ಹುಚ್ಚಿಗೆ 50 ಕ್ಕೂ ಹೆಚ್ಚು ಬಾರಿ ಕುಡಿದ ಮತ್ತಿನಲ್ಲಿ ಬೈಕ್ ವೀಲಿಂಗ್ ಮಾಡಿದ ಪರಿಣಾಮ ರಸ್ತೆಯೇ ಹದೆಗೆಟ್ಟು ಹೋಗಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಯುವಕರು ಹುಚ್ಚಾಟ ನಡೆಸಿದರೂ ಸಹ ಹೇಳೋರಿಲ್ಲ, ಕೇಳೋರಿಲ್ಲ ಎಂಬಾಂತಾಗಿದ್ದು, ಯುವಕರ ಹುಚ್ಚಾಟವನ್ನು ಸಂತೋಷ್ ಅತ್ತಿಗೆರೆ ಪೋಟೋಗಳ ಮೂಲಕ ಸೆರೆ ಹಿಡಿದಿದ್ದಾರೆ.