ಇತ್ತೀಚಿನ ಸುದ್ದಿ
ಪಶ್ಚಿಮ ಪೆನ್ಸಿಲ್ವೇನಿಯಾ: ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಮೇಲೆ ಗುಂಡಿನ ದಾಳಿ: ಕಿವಿಗೆ ಗಾಯ
14/07/2024, 11:01
ವಾಷಿಂಗ್ಟನ್ (reporterkarnataka.com):
ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಪಶ್ಚಿಮ ಪೆನ್ಸಿಲ್ವೇನಿಯಾದಲ್ಲಿ
ಗುಂಡಿನ ದಾಳಿ ನಡೆದಿದ್ದು, ಟ್ರಂಪ್ ಅವರ ಕಿವಿಗೆ ಗಾಯಗಳಾಗಿವೆ.
ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಶೂಟರ್ ಅನ್ನು 20 ವರ್ಷದ ಪೆನ್ಸಿಲ್ವೇನಿಯಾ ವ್ಯಕ್ತಿ ಎಂದು ಗುರುತಿಸಿದೆ. ಶೂಟರ್‌ನ ಹೆಸರನ್ನು ಎಫ್‌ಬಿಐ ಇನ್ನೂ ಬಿಡುಗಡೆ ಮಾಡಿಲ್ಲ.
ಟ್ರಂಪ್ ಅವರು ರ್ಯಾಲಿಯೊಂದರಲ್ಲಿ ಭಾಗವಹಿಸಿದಾಗ ಈ ಘಟನೆ ನಡೆದಿದೆ. ಟ್ರಂಪ್ ಅವರ ಮುಖದಲ್ಲಿ ರಕ್ತ ಕಾಣುತ್ತಿತ್ತು ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ ಟ್ರಂಪ್, ಗುಂಡು ತನ್ನ ಬಲ ಕಿವಿಯ ಮೇಲಿನ ಭಾಗ ಕ್ಕೆ ತಗುಲಿ ರಕ್ತಸ್ರಾವವಾಯಿತು ಎಂದು ಹೇಳಿದ್ದಾರೆ.
ಪಶ್ಚಿಮ ಪೆನ್ಸಿಲ್ವೇನಿಯಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣಾ ರ್ಯಾಲಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದರು.
ಅಮೆರಿಕದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಜಾಗವಿಲ್ಲ ಎಂದು ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ರ್ಯಾಲಿಯಲ್ಲಿ ಗುಂಡಿನ ದಾಳಿಯನ್ನು ಅಮೆರಿಕ ಅಧ್ಯಕ್ಷ ಬಿಡೆನ್ ಹಾಗೂ ಮಾಜಿ ಅಧ್ಯಕ್ಷ
ಒಬಾಮಾ ಖಂಡಿಸಿದ್ದಾರೆ.