10:59 PM Sunday14 - September 2025
ಬ್ರೇಕಿಂಗ್ ನ್ಯೂಸ್
ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ…

ಇತ್ತೀಚಿನ ಸುದ್ದಿ

ಅಫ್ಘಾನಿಸ್ತಾನದಿಂದ ಸ್ವಗೃಹಕ್ಕೆ ವಾಪಾಸಾದ ಕೊಲ್ಯದ ಆನಂದ್ ಪ್ರಸಾದ್

23/08/2021, 12:43

ಮಂಗಳೂರು (Reporterkarnataka.com) ಅಫ್ಘಾನಿಸ್ತಾನದ ಕಾಬೂಲ್‌ನ ಮಿಲಿಟರಿ ಬೇಸ್‌ನಲ್ಲಿ ಅಕೌಂಟೆಟ್ ಆಗಿದ್ದ ಕೊಲ್ಯ ಕಣೀರುತೋಟ ನಿವಾಸಿ ಪ್ರಸಾದ್ ಆನಂದ್ (39) ಸೋಮವಾರ ಸ್ವಗೃಹಕ್ಕೆ ವಾಪಾಸಾಗಿದ್ದಾರೆ.

ಅಮೆರಿಕಾ ನ್ಯಾಟೊ ಪಡೆ ಪ್ರಸಾದ್ ಆನಂದ್ ಅವರನ್ನು ಕತಾರ್ ವಿಮಾನ ನಿಲ್ದಾಣಕ್ಕೆ ಏರ್ ಲಿಪ್ಸ್ ಮಾಡಿತ್ತು. ಮೂರು ದಿವಸಗಳಿಂದ ಕತಾರಲ್ಲಿ ಉಳಿದುಕೊಂಡಿದ್ದ ಪ್ರಸಾದ್, ಅಲ್ಲಿಂದ ನಿನ್ನೆ ರಾತ್ರಿ ದೆಹಲಿಗೆ ತಲುಪಿದ್ದಾರೆ. ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

2013ರಲ್ಲಿ ಅಕೌಂಟೆಟ್ ಆಗಿ ಕಾಬೂಲಿನ ನ್ಯಾಟೋ ಮಿಲಿಟರಿ ಬೇಸ್‌ನಲ್ಲಿ ಕೆಲಸಕ್ಕೆ ಸೇರಿದ್ದರು.
ಹೊರಗಡೆ ತಾಲಿಬಾನಿಗಳ ಅಟ್ಟಹಾಸ ನಡೆಯುತ್ತಿದ್ದು ನಾವು ಮಿಲಿಟರಿ ಬೇಸಲ್ಲಿ ಇದ್ದ ಕಾರಣ ಅಷ್ಟೊಂದು ಗಮನಕ್ಕೆ ಬಂದಿಲ್ಲ ಎಂದಿದ್ದಾರೆ. ಕಾಬೂಲಲ್ಲಿ ಮೂರು ದಿವಸಗಳಿಂದ ಫ್ಲೈಟ್‌ಗಳನ್ನ ಬ್ಲಾಕ್ ಮಾಡಿದ ನಂತರ ಸ್ವಲ್ಪ ಸಂಕಷ್ಟ ಅನುಭವಿಸುವಂತಾಗಿತ್ತು ಎಂದು ಪ್ರಸಾದ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು